ವಿಶ್ವ ಜೋಕ್ ದಿನಾಚರಣೆಯಂದು ನಗಿಸಲೊಂದಿಷ್ಟು

ಒಂದು ದಿನ ಬಹುದಿನಗಳ ನಂತರ ಸ್ನೇಹಿತರಾದ ಸುರೇಸ ಮತ್ತು ದಿನೇಸ ಕ್ಷೌರಿಕನ ಅಂಗಡಿಯಲ್ಲಿ ಭೇಟಿಯಾದರು. ಉಭಯ ಕುಶಲೋಪರಿಗಳಾದ ಮೇಲೆ ಗಡ್ಡ ಬೋಳಿಸಿಕೊಳ್ಳಲು ಬಂದಿದ್ದ ಸುರೇಸ, ದಿನೇಸನನ್ನುದ್ದೇಶಿಸಿ ಕೇಳಿದ.

ಸುರೇಸ : ಯಾಕ್ಲಾ ದಿನೇಸ, ಇಷ್ಟುದ್ದ ಕೂದಲು ಬಿಟ್ಟಿದ್ದಿಯಾ, ಕ್ಷೌರ ಕೂಡ ಮಾಡಿಸಿಕೊಳ್ಳದಷ್ಟು ಬಿಜಿನಾ?

ದಿನೇಸ : ಹಾಗೇನಿಲ್ಲ ಸುರೇಸ, ಶೋಕಿಗಾಗಿ ಬಿಟ್ಟಿದ್ದೆ ಅಷ್ಟೆ. ಇದಕ್ಕೇ ಹೀಗಂತೀಯಾ ನನ್ನ ಬ್ರದರ್ ಪರಮೇಸನನ್ನು ನೀನು ನೋಡಬೇಕು. ಎರಡು ವರ್ಷಗಳಿಂದ ಕೂಡಲನ್ನೇ ಕಟ್ ಮಾಡಿಸಿಲ್ಲ.

ಸುರೇಸ : ಓಹೋ, ಅದೇನು ಸಮಾಚಾರ?

ದಿನೇಸ : ನಿನಗ್ ಗೊತ್ತಲ್ಲ ಅವನು ಕಲಾವಿದ, ಯಾವ್ದೋ ಪಿಚ್ಚರಲ್ಲಿ ಆಕ್ಟಿಂಗ್ ಕೆಲಸ ಸಿಗತ್ತೆ ಅಂತ ಓಡಾಡ್ತಿದ್ದಾನೆ. ವಿಚಿತ್ರ ಮನುಷ್ಯ.

ಸುರೇಸ : ಅಯ್ಯೋ, ನೀನು ಹೀಗಂತೀಯಾ, ನನ್ನ ಮಾವನನ್ನ ನೋಡಬೇಕು. ಅವರು ಎರಡು ವರ್ಷವಲ್ಲ, ಏಳು ವರ್ಷಗಳಿಂದ ಕಟಿಂಗನ್ನೇ ಮಾಡಿಸಿಕೊಂಡಿಲ್ಲ.

ದಿನೇಸ : ಅಷ್ಟೊಂದು ವಿಚಿತ್ರಾತಿವಿಚಿತ್ರ ಮನುಷ್ಯ ಅಂತೀಯಾ?

ಸುರೇಸ : (ನಕ್ಕು) ಹಾಗೇನಿಲ್ಲ ಕಣಣ್ಣೋ. ಅವರು ಪೂರ್ತಿ ಬಾಲ್ಡಿಯಾಗಿ ಏಳು ವರ್ಷಗಳಾಯಿತು!

***
ಶಾಲೆಗೆ ಹೋಗಿದ್ದ ಪುಟ್ಟಿ ಮರಳಿ ಬಂದಾಗ ಅಸ್ವಸ್ಥಳಾದಂತೆ ಕಂಡುಬಂದಳು. ಮನೆಗೆ ಬಂದವಳೇ ವಾಂತಿ ಕೂಡ ಮಾಡಿಕೊಂಡಳು. ದಿಗಿಲಾದ ಆಕೆಯ ಅಮ್ಮ ಪುಟ್ಟಮ್ಮ ಶಾಲೆಗೆ ದುಡುದುಡನೆ ಓದಿದಳು.

ಪುಟ್ಟಮ್ಮ : ರೀ ಮೇಡಂ, ಏನಾಯ್ತು ಪುಟ್ಟಿಗೆ? ಆರಾಮವಿಲ್ಲದಂತೆ ಕಾಣ್ತಿದ್ದಾಳೆ, ಓಮಿಟ್ ಕೂಡ ಮಾಡಿಕೊಂಡಳು.

ನಟ್ಟಮ್ಮ : ಅಯ್ಯೋ, ನಿಮ್ಮ ಮಗಳು ಏನು ತುಂಟಿ ಅಂತೀರಿ? ಇಂದು ಮಧ್ಯಾಹ್ನ ಇದ್ದಕ್ಕಿದ್ದಂತೆ ಒಂದು ಕೀಟವನ್ನು ತಿಂದುಬಿಟ್ಟಳು.

ಪುಟ್ಟಮ್ಮ : ಅದಕ್ಕೇ ಹೀಗಾಯ್ತಾ?

ನಟ್ಟಮ್ಮ : ಅದಕ್ಕಲ್ಲ ಮೇಡಂ. ಆಕೆ ಕೀಟ ಬಾಯಿಗೆ ಹಾಕಿಕೊಳ್ಳುತ್ತಿದ್ದಂತೆ ನಾನು ಸ್ವಲ್ಪೇಸ್ವಲ್ಪ ಕೀಟನಾಶಕ ಬಾಯಲ್ಲಿ ಹೊಡೆದೆ!

(ಜು.1 ವಿಶ್ವ ಜೋಕ್ ದಿನಾಚರಣಂತೆ. ನಿಮ್ಮ ಬಳಿ ನಗಿಸಬಲ್ಲ ಜೋಕುಗಳಿದ್ದರೆ ಕಾಮೆಂಟ್ ಬಾಕ್ಸಲ್ಲಿ ಹಾಕಿರಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+