ಬಣ್ಣನೆ ಮಾಡಿದ ಗಂಡನ ಕಣ್ಣೂದಿಸಿದ ಹೆಂಡತಿ
ದಂಪತಿಗಳ ಮದುವೆಯಾಗಿ ಇಪ್ಪತ್ತೈದು ವರ್ಷ ಸಂದಿತ್ತು. ಸಿಲ್ವರ್ ಜ್ಯೂಬಿಲಿ ಆಚರಿಸಿಕೊಂಡು ಇಬ್ಬರೂ ಸಂತಸಪಟ್ಟರು. ಗಂಡ ಹೆಂಡತಿಗೆ ವಜ್ರದ ನೆಕ್ಲೇಸ್ ಕೊಡಿಸಿದ್ದರು. 25 ಸಾವಿರ ರು. ಬೆಲೆ ಬಾಳುವ ರೇಷ್ಮೆ ಸೀರೆ ಕೊಡಿಸಿದ್ದರು. ಇಪ್ಪತ್ತೈದು ವರ್ಷ ತನ್ನ ಜೊತೆಗಿರುವ ತನ್ನ ಗಂಡ ತನ್ನನ್ನು ಹೇಗೆ ವರ್ಣಿಸುತ್ತಾರೆ ಎಂದು ತಿಳಿಯುವ ಬಯಕೆ ಹೆಂಡತಿಗೆ.
ರಾತ್ರಿ ಮಲಗುವ ವೇಳೆ ಎಂದೂ ಕೇಳದ ಪ್ರಶ್ನೆಯನ್ನು ಅಂದು ಹೆಂಡತಿ ಕೇಳೇಬಿಟ್ಟರು. "ನನ್ನನ್ನು ನೀವು ಹೇಗೆ ವರ್ಣಿಸುತ್ತೀರಿ? ಫ್ರಾಂಕ್ ಆಗಿ ಹೇಳಿರಿ" ಎಂದು ಹೆಂಡತಿ ಪ್ರೀತಿಯಿಂದ ಗಂಡನ ಮೇಲೆ ಒರಗಿಕೊಳ್ಳುತ್ತಾ ಕೇಳಿದಳು.
ಗಂಡ ಒಂದು ಕ್ಷಣ ಕೂಡ ವಿಚಾರ ಮಾಡದೆ, "ಎ ಬಿ ಸಿ ಡಿ ಇ ಎಫ್ ಜಿ ಎಚ್ ಐ ಜೆ ಕೆ" ಎಂದು ಹೇಳಿ ಮುಸಿಮುಸಿ ನಕ್ಕ.
"ಏನ್ರೀ ಹಾಗಂದ್ರೆ?" ಎಂದು ಹುಬ್ಬನ್ನು ಗಂಟು ಹಾಕಿ ಹೆಂಡತಿ ಕೇಳಿದಳು.
"ಅಡೋರೇಬಲ್, ಬ್ಯೂಟಿಫುಲ್, ಕ್ಯೂಟ್, ಡಿಲೈಟ್‌ಫುಲ್, ಎಲಿಗಂಟ್, ಫಾಕ್ಸಿ, ಗಾರ್ಜಸ್, ಹಾಟ್" ಗಂಡ ಹುಬ್ಬು ಹಾರಿಸಿ ಹೇಳಿದ.
"ರೀ ಹೊಗಳಿದ್ದು ಸಾಕು ರೀ. ಎ ಟು ಎಚ್ ತನಕ ಮಾತ್ರ ಹೇಳಿದಿರಿ. ಜೆ ಮತ್ತು ಕೆ ಅಂದ್ರೇನು ಅದೂ ಹೇಳಿಬಿಡಿ" ಎಂದು ಹೆಂಡತಿ ದುಂಬಾಲು ಬಿದ್ದಳು.
"ಐ ಆಮ್ ಜಸ್ಟ್ ಕಿಡ್ಡಿಂಗ್" ಎಂದು ಹೇಳಿದ ಗಂಡ ಈಗ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾನೆ. ಪ್ರಾಣಾಪಾಯದಿಂದ ಪಾರಾಗಿರುವ ಗಂಡನ ಬಲಗಣ್ಣಿನ ಊತ ಕಡಿಮೆಯಾಗಲು ಕನಿಷ್ಠಪಕ್ಷ ಎರಡು ತಿಂಗಳಾದರೂ ಬೇಕು ಎಂದು ಡಾಕ್ಟ್ರು ತಿಳಿಸಿದ್ದಾರೆ. [ಗಂಡ ಹೆಂಡತಿ ಜೋಕ್ಸ್]











Click it and Unblock the Notifications