ಡಾ.ಡಿಬ್ಬಿಗೆ ಸವಾಲು ಹಾಕಿದ ಹೈಬಿಪಿ ಸುಬ್ಬು
ಸುಬ್ಬು ವಿಪರೀತ ರಕ್ತದೊತ್ತಡದಿಂದ ಬಳಲುತ್ತಿದ್ದ. ಏನೇ ಆಗಲಿ ಒಂದು ಬಾರಿ ಚೆಕಪ್ ಮಾಡಿಸಿಕೊಳ್ಳೋಣ ಎಂದು ಡಾ. ಡಿಬ್ಬಿ ಬಳಿಗೆ ಬಂದ. ಎಡಗೈಗೆ ರಕ್ತದೊತ್ತಡ ಪರೀಕ್ಷಿಸುವ ಪಟ್ಟಿ ಬಿಗಿದು ಡಾ.ಡಿಬ್ಬಿ ಚೆಕಪ್ ಮಾಡಿದ. ಬಿಪಿ ಸ್ವಲ್ಪ ಹೈ ಇದೆ ಎಂದು ಮನವರಿಕೆ ಮಾಡಿಕೊಂಡ ನಂತರ ಸುಬ್ಬುವನ್ನು ತನ್ನ ಮುಂದೆ ಕೂಡಿಸಿಕೊಂಡು ವಿಚಾರಿಸಲು ಶುರು ಮಾಡಿದ.
"ಮಿಸ್ಟರ್ ಸುಬ್ಬು ನಿಮಗೆ ಬಿಪಿ ಸ್ವಲ್ಪ ಹೈ ಇದೆ. ಕೋಪ ಮಾಡ್ಕೊಳ್ಲೋದು ಕಡಿಮೆ ಮಾಡಿ, ವ್ಯಾಯಾಮ ಮಾಡಿ, ಧ್ಯಾನ ಮಾಡಿ. ಯಾಕೆ, ಉಪ್ಪು ಜಾಸ್ತಿ ತಿಂತೀರಾ?" ಎಂದು ತನ್ನ ಎಂದಿನ ವಿಚಾರಣೆ ಶುರುಹಚ್ಚಿಕೊಂಡ.
"ಹಾಗೇನಿಲ್ಲ ಡಾಕ್ಟರ್. ನಾನು ಜಾಸ್ತಿ ಉಪ್ಪು ತಿನ್ನೋದೇ ಇಲ್ಲ" ಎಂದು ಸುಬ್ಬು ಉತ್ತರಿಸಿದ.
"ಐ ಸೀ. ನಿಮ್ಮ ಮನೆಯಲ್ಲಿ ರಕ್ತದೊತ್ತಡ ಯಾರಿಗಾದ್ರೂ ಇದೆಯಾ? ಯು ನೋ, ಬಿಪಿ ಈಸ್ ಹೆರೆಡಿಟರಿ. ನಿಮ್ಮ ಅಪ್ಪನಿಂದಲೋ, ಅಮ್ಮನಿಂದಲೋ ನಿಮಗೆ ರಕ್ತದೊತ್ತಡ ಬಂದಿರಬಹುದು" ಎಂದು ಡಾ. ಡಿಬ್ಬಿ ನುಡಿದ.
"ಅದೂ ಸರಿಯಲ್ಲ ಡಾ. ಡಿಬ್ಬಿ. ತಂದೆ ತಾಯಿಯರಿಬ್ಬರಿಗೂ ಆರೋಗ್ಯದಿಂದಿದ್ದಾರೆ. ಬಿಪಿ ಅಂದ್ರೇನೇ ಅವರಿಗೆ ಗೊತ್ತಿಲ್ಲ. ಆದ್ರೆ ನನಗೆ ಬಿಪಿ ಬಂದಿರುವುದು ಮಾತ್ರ ನನ್ನ ಹೆಂಡತಿ ತವರಿನ ಕಡೆಯಿಂದ" ಎಂದು ಸುಬ್ಬು ಖಚಿತವಾಗಿ ಹೇಳಿದ.
"ಕಮಾನ್ ಮಿ.ಸುಬ್ಬು. ನಿಮ್ಮ ಹೆಂಡತಿಯ ಕಡೆಯಿಂದ ರಕ್ತದೊತ್ತಡ ಬರಲು ಅದ್ಹೇಗೆ ಸಾಧ್ಯ?" ಎಂದು ವೈದ್ಯಕೀಯ ದೃಷ್ಟಿಯಿಂದಲೇ ವಿಚಾರ ಮಾಡುತ್ತ ಬ್ಯಾಚಲರ್ ಡಿಬ್ಬಿ ಕೇಳಿದ.
"ನಿಮಗೆ ಗೊತ್ತಿಲ್ಲ ಡಾಕ್ಟರ್. ಒಂದು ಬಾರಿ ನನ್ನ ಹೆಂಡತಿ ಮತ್ತು ಅವರ ತಂದೆತಾಯಿಯನ್ನು ಭೇಟಿ ಮಾಡಿ ನೋಡಿ" ಎಂದು ಡಾಕ್ಟರಿಗೇ ಸುಬ್ಬು ಸವಾಲು ಹಾಕಿದ. [ಸುಬ್ಬು ಜೋಕ್ಸ್]
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications