ಮಗಳಾ? ಓ ಮೈ ಗಾಡ್. ಗೊತ್ತಾಗ್ಲಿಲ್ಲಾ ಸಾ

'ಮೆಂಟ್ಲ್ ಮಂಜಗೆ ಜೈಲ್ ಭಾಗ್ಯ' ಸಿನೆಮಾ ರಿಲೀಸ್ ಆಗಿತ್ತು. ಇದು ನಿಜಜೀವನದ ಕಥೆಯಾದ್ದರಿಂದ ಪಕ್ಕದ ಥಿಯೇಟರಲ್ಲಿ ಪ್ರದರ್ಶನವಾಗುತ್ತಿದ್ದ ದರ್ಶನ್ ಸಿನೆಮಾ ಕೂಡ ಅತ್ತಾಗೆ ಬಿಸಾಕಿ ಜನರೆಲ್ಲ ಈ ಚಿತ್ರ ನೋಡಲು ಬಂದಿದ್ದರು. ಕ್ಯೂವ್ವೋಕ್ಯೂವ್ವು. ಏನು ಮಾಡಬೇಕೆಂದು ತಿಳಿಯದೆ ಗೇಟಿನ ಬಳಿ ಇಬ್ಬರು ನಿಂತಿರುತ್ತಾರೆ. ಟಿಕೆಟ್ ಇನ್ನೂ ಕೊಟ್ಟಿರುವುದಿಲ್ಲ.

ಒಬ್ಬನಿಗೆ ಸಖತ್ ಬೇಜಾರಾಗಿ ಪಕ್ಕದಲ್ಲಿ ಪ್ಯಾಂಟು ಕೋಟು ಹ್ಯಾಟು ಧರಿಸಿ ವಿಚಿತ್ರವಾಗಿ ನಿಂತಿದ್ದ ಇನ್ನೊಬ್ಬನೊಡನೆ ದೇಶಾವರಿ ಮಾತುಕತೆಗೆ ನಿಲ್ಲುತ್ತಾನೆ.

ಒಬ್ಬ : ಏನ್ ಕಾಲಾನೋ ಏನೋ, ಅಲ್ನೋಡಿ ಸಾರ್, ಅಲ್ಲಿ ಕ್ಯೂನಲ್ಲಿ ನಿಂತಿದ್ದಾರಲ್ಲ ಅವರು, ಅವರೇರೀ ಪ್ಯಾಂಟ್ ಶರ್ಟ್ ಟೋಪಿ ಹಾಕ್ಕೊಂಡು.

ಇನ್ನೊಬ್ಬ : ಅಯ್ಯೋ ಅದೇನಾಯ್ತು ಹೇಳಿ ಬೇಗ.

ಒಬ್ಬ : ಅದೇ ಹೇಳೋಕೆ ಹೊರಟಿದ್ದೆ, ಅಷ್ಟರಲ್ಲಿ ತಾವು ಬಾಯಿ ಹಾಕಿದಿರಿ. ಅದೇ, ಆ ವ್ಯಕ್ತಿ ಗಂಡೋ ಹೆಣ್ಣೋ ಗೊತ್ತಾಗ್ತಾ ಇಲ್ಲ. ಈಗಿನ ಕಾಲದಲ್ಲಿ ಎಲ್ಲ ಪ್ಯಾಂಟ್ ಶರ್ಟ್ ಹಾಕ್ತಾರಲ್ಲಾ ಅದಕ್ಕೆ ಕೇಳಿದೆ.

ಇನ್ನೊಬ್ಬ : ಆಕೆ ನನ್ನ ಮಗಳು.

ಒಬ್ಬ : (ಕಕ್ಕಾಬಿಕ್ಕಿಯಾಗಿ) ಮಗಳಾ? ಓ ಮೈ ಗಾಡ್. ಗೊತ್ತಾಗ್ಲಿಲ್ಲಾ ಸಾ.... ನೀವು ಆಕೆಯ ಅಪ್ಪ ಅಂತ ಗೊತ್ತಿರಲಿಲ್ಲ.

ಇನ್ನೊಬ್ಬ : ರೀ ನಾನು ಆಕೆಯ ಅಪ್ಪನಲ್ಲ ಅಮ್ಮ! [ಇಂಥದೇ ಇನ್ನೊಂದು ಜೋಕ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+