ಹೆಂಡ್ತಿ ಇದ್ದೋರಿಗಲ್ಲ ವ್ಯಾಲೆಂಟೈನ್ಸ್ ಡೇ !?
ಪೊಲೀಸ್: ಈ ಕುರಿಮರಿ ಯಾರದು?
ಗುಂಡ: ಕುರಿ ಯಾರದು ಅಂತ ಗೊತ್ತಿಲ್ಲ ಸರ್. ಆದರೆ, ಮರಿ ಯಾರದ್ದು ಅಂತ ಗೊತ್ತು.
ಪೊಲೀಸ್: ಹಾಗಾದರೆ, ಮರಿ ಯಾರದು?
ಗುಂಡ: ಮರಿ ಆ ಕುರಿಯದ್ದು ಸರ್

ತಿಮ್ಮ: ಫೆಬ್ರವರಿ 14ರಂದು ಏನು ವಿಶೇಷ?
ಗುಂಡ: ನಿನಗೆ ಮದುವೆ ಆಗಿದೀಯಾ ಅಥವಾ ನಿನಗೆ ಗರ್ಲ್ ಫ್ರೆಂಡ್ ಇದಾಳಾ ?
ತಿಮ್ಮ: ಮದುವೆಯಾಗಿದೆ. ಹೆಂಡ್ತಿ ಇದಾಳೆ.
ಗುಂಡ: ಹಾಗಾದರೆ, ನಿನ್ನ ಪಾಲಿಗೆ ಅವತ್ತು ಮಹಾವೀರ ಜಯಂತಿ ಇರುತ್ತೆ !











Click it and Unblock the Notifications