GST ಕಾನೂನಿನಲ್ಲಿ ಹೆಂಡತಿಗೆ 28 ಪರ್ಸೆಂಟ್ ತೆರಿಗೆಯಂತೇ!!
ದೇಶದ ಬೃಹತ್ ತೆರಿಗೆ ಸುಧಾರಣೆ, ಸರಕು ಮತ್ತು ಸೇವಾ ತೆರಿಗೆಯನ್ನು ಬಿಡುಗಡೆ ಮಾಡಿದ ಜೂನ್ 30ರಿಂದ ಇಂದಿನವರೆಗೂ ಜಿಎಸ್ಟಿ ಸಂಬಂಧ ನಗೆಹನಿಗಳು ಸಾಮಾಜಿಕ ತಾಣದಲ್ಲಿ ಮುಂದುವರಿಯುತ್ತಲೇ ಇದೆ. ಕೆಲವೊಂದು ಸ್ಯಾಂಪಲ್ ಗಳು.
ಈಗ ಊರೆಲ್ಲಾ ಜೂನ್ ಮೂವತ್ತು ಮಧ್ಯರಾತ್ರಿ ಜಾರಿಗೆ ಬಂದ ಏಕರೂಪ ತೆರಿಗೆ ಪದ್ದತಿ ಜಿಎಸ್ಟಿ ( ಸರಕು ಮತ್ತು ಸೇವಾ ತೆರಿಗೆ) ಬಗೆಯೇ ಚರ್ಚೆ.
ಇದರಿಂದ ಲಾಭವಂತೆ, ನಷ್ಟವಂತೆ, ದೇಶಕ್ಕೆ ಇದರಿಂದ ಒಳ್ಳೆದಾಗುತ್ತಂತೆ, ಮೋದಿಗೆ ಮಾಡೋಕೆ ಬೇರೇನೂ ಕೆಲ್ಸ ಇಲ್ವಾ.. ಹೀಗೆ ಎಲ್ಲೆಲ್ಲೂ ಜಿಎಸ್ಟಿ ಬಗ್ಗೆ ಮಾತುಕತೆ.
ಸ್ವಾತಂತ್ರ್ಯದ ನಂತರ ದೇಶದ ಬೃಹತ್ ತೆರಿಗೆ ಸುಧಾರಣೆ, ಸರಕು ಮತ್ತು ಸೇವಾ ತೆರಿಗೆಯನ್ನು ಬಿಡುಗಡೆ ಮಾಡಿದ ಜೂನ್ 30ರಿಂದ ಇಂದಿನವರೆಗೂ ಜಿಎಸ್ಟಿ ಸಂಬಂಧ ನಗೆಹನಿಗಳು ಸಾಮಾಜಿಕ ತಾಣದಲ್ಲಿ ಮುಂದುವರಿಯುತ್ತಲೇ ಇದೆ..
ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಗೈರಾದ 'ಕೈ' ಮುಖಂಡರನ್ನು ಹಿಡಿದು, ಮೋದಿ, ಜೇಟ್ಲಿ ಸಹಿತ ಎಲ್ಲರನ್ನೂ ಟ್ರೋಲ್ ಮಾಡಲಾಗುತ್ತಿದೆ. ಕೆಲವೊಂದು ಸ್ಯಾಂಪಲ್ಸ್ ಮುಂದೆ ಓದಿ..

ನನ್ನನು ಎಷ್ಟು ಇಷ್ಟ ಪಡ್ತೀರಾ?
ಹೆಂಡತಿ: ನೀವು ನನ್ನನ್ನು ಎಷ್ಟು ಇಷ್ಟ ಪಡ್ತೀರಾ?
ಗಂಡ: 72%
ಹೆಂಡತಿ: ಅಯ್ಯೋ... ಹಂಡ್ರೆಡ್ ಪರ್ಸೆಂಟ್ ಇಲ್ವಾ?
ಗಂಡ: ಲಕ್ಸೂರಿಯಸ್ ಐಟಂಗೆ 28% ಟಾಕ್ಸ್ ಕಣೇ...

ತಿಮ್ಮ- ಗುಂಡ ಸಂವಾದ
ತಿಮ್ಮ: ನನ್ನಲ್ಲಿ ಒಂದು ಸೂಪರ್ ಜೋಕ್ ಇದೆ ಕಣೋ..
ಗುಂಡ: ಏನೋ ಅದು...
ತಿಮ್ಮ: ಆ ಜೋಕ್ಸ್ ಕೇಳಿದ್ರೆ ನೀನು ನಕ್ಕು ನಕ್ಕು.. ಸುಸ್ತಾಗ್ತೀಯಾ..
ಗುಂಡ: ನಂಗೆ ತಡ್ಕೋಳಕ್ಕೇ ಆಗ್ತಾ ಇಲ್ಲಾ.. ಬೇಗ ಹೇಳು..
ತಿಮ್ಮ: ಅದಕ್ಕೆ 28% ಟ್ಯಾಕ್ಸ್ ಆಗುತ್ತೋ...

ಜಿಎಸ್ಟಿ ಅರ್ಥವಾಗುವುದಿಲ್ಲ
ಸಿಗ್ನಲ್ ಲೈಟ್ ತರ ಜಿಎಸ್ಟಿ ಅಂದರೆ ಏನೂಂತಾನೇ ಅರ್ಥವಾಗುವುದಿಲ್ಲ

ದುಬಾರಿಯಾ, ಚೀಪಾ?
ತಿಮ್ಮ: ನನಗೊಂದು ಪ್ರಶ್ನೆ
ಗುಂಡ: ಏನದು ಕೇಳು..
ತಿಮ್ಮ: GST ಚಾಲನೆಗೆ ಬಂದ ಜೂನ್ ಮೂವತ್ತರ ಮಧ್ಯರಾತ್ರಿ ನಂತರ ಹುಟ್ಟಿದ ಮಕ್ಕಳು ಚೀಪಾ.. ದುಬಾರಿಯಾ..
ಗುಂಡ: ಹೋಗಿ..ಮೋದಿನ ಕೇಳೋ.. ಅಯೋಗ್ಯ..

ರಾಹುಲ್ ಗಾಂಧಿ ಟ್ರೋಲ್
ಎಷ್ಟು ಕಷ್ಟಪಟ್ಟು ಜಿಎಸ್ಟಿ ಫುಲ್ ಫಾರ್ಮ್ ಕಲಿತುಕೊಂಡೆ, ಈಗ ಮೋದಿ ಹೇಳ್ತಾರೆ ಜಿಎಸ್ಟಿ ಬಹಳ ಸಿಂಪಲ್

ಜೋಕ್ಸ್ ವಾಟ್ಸಪ್ ಮಾಡ್ಬೇಡ
ಫ್ರೆಂಡ್ 1: ಲೋ.. ಯಾವುದೇ ಜೋಕ್ಸ್ ವಾಟ್ಸಪ್ ಮಾಡ್ಬೇಡ ಕಣೋ..
ಫ್ರೆಂಡ್ 2: ಯಾಕೋ. ಏನಾಯ್ತು..
ಫ್ರೆಂಡ್ 1: ನೀ ಕಳ್ಸೋ.. ಒಂದೊಂದು ಜೋಕಿಗೂ ಮೊಬೈಲಿನ 28% ಬ್ಯಾಟರಿ ಡ್ರೈ ಆಗ್ತಾ ಇದೆ..

ಟೀಚರ್ - ಸ್ಟೂಡೆಂಟ್ ಪ್ರಶ್ನಾವಳಿ
ಟೀಚರ್: ಲೋ ವೆಂಕಟೇಶಾ.. ಜಿಎಸ್ಟಿ ಅಂದ್ರೆ ಏನೋ?
ವೆಂಕಟೇಶ: ಸಿಂಪಲ್ ಸಾ...
ಟೀಚರ್: ಬಿಡಿಸಿ ಹೇಳೋ..
ವೆಂಕಟೇಶ: ಗಂಗೂಲಿ, ಸೇವಾಗ್, ತೆಂಡೂಲ್ಕರ್ ಸರ್...












Click it and Unblock the Notifications