ದಾಂಪತ್ಯ ದುರಂತದಲ್ಲಿ ಕೊನೆಯಾಗಬಹುದು ಎಚ್ಚರ!
75 ವರ್ಷದ ವೃದ್ಧ ನಾಲ್ಕನೇ ಮದುವೆ ಸಿದ್ಧತೆ ನಡೆಸಿದ್ದ. ತಾತನ ಈ ನಿರ್ಧಾರದಿಂದ ಬೇಸತ್ತ ಮೊಮ್ಮಗ ಧೈರ್ಯ ಮಾಡಿ ಹೇಳಿದ.
"ತಾತಾ ನೀವು ಮದುವೆ ಆಗ್ತಿರೋ ಹುಡುಗೀಗೆ ಕೇವಲ 21 ವರ್ಷ. ಈ ವಯಸ್ಸಿನಲ್ಲಿ ನೀವು ಮದುವೆ ಆಗೋದು ತರವಲ್ಲ. ನಿಮ್ಮ ದಾಂಪತ್ಯ ದುರಂತದಲ್ಲಿ ಕೊನೆಯಾಗಬಹುದು ಎಚ್ಚರ!"
ತಾತ ಉತ್ತರ ಕೊಟ್ಟ, "ನಾನು ಅದಕ್ಕೆಲ್ಲಾ ಹೆದರಲ್ಲ. ಅವಳು ಸತ್ತರೆ ಮತ್ತೊಂದು ಮದುವೆ ಆಗೇ ಆಗ್ತೀನಿ."
ಗಣೇಶ್ ಆನಂದ್
***
ವಿದ್ಯಾರ್ಥಿ : (ದಪ್ಪ ದನಿ ಮಾಡಿಕೊಂಡು) ಇವತ್ತು ನನ್ನ ಮಗನಿಗೆ ತುಂಬಾ ಜ್ವರ, ಶೀತದಿಂದ ಬಳಲುತ್ತಿದ್ದಾನೆ. ಅವನಿಗೆ ಇವತ್ತು ಶಾಲೆಗೆ ಬರಲಾಗುವುದಿಲ್ಲ.
ಟೀಚರ್ : ಯಾರದು ಮಾತಾಡ್ತಿರೋದು?
ವಿದ್ಯಾರ್ಥಿ : ನನ್ನಪ್ಪ ಮಾತಾಡ್ತಿದ್ದೀನಿ!
***
ಮೇಷ್ಟ್ರು : ಗುಂಡ, ಮೂಢನಂಬಿಕೆ ಬಗ್ಗೆ ಪ್ರಬಂಧ ಬರ್ಕೊಂಡ್ಬಾ ಅಂತ ಹೇಳಿದ್ದೆನಲ್ಲ? ಎಲ್ಲಿದೆ? ನೀನೊಬ್ನೇ ತೋರ್ಸಿಲ್ಲ.
ಗುಂಡ : ಪ್ರಬಂಧ ಬರೆದಿದ್ದೆ ಮೆಷ್ಟ್ರೆ. ಆದ್ರೆ, ಅಷ್ಟರಲ್ಲಿ ನನ್ನ ನಾಯಿ ಬಂದು ಪರಪರ ಹರಿದು ತಿಂದುಬಿಟ್ಟಿತು.
ಮೇಷ್ಟ್ರು : ಓಹೋ, ನಾಯಿ ತಿಂತಾ? ನಾಯಿ ಪೇಪರ್ ತಿಂದಿದ್ದನ್ನು ನನ್ನ ಜನ್ಮದಲ್ಲೇ ಕೇಳಿಲ್ಲ, ನೋಡಿಲ್ಲ. ನೀ ಹೇಳಿದ್ದನ್ನ ನಂಬಬೇಕಾ?
ಗುಂಡ : ಏನ್ ಕೇಳ್ತೀರಾ ಮೇಷ್ಟ್ರೆ. ಮೊದಲಿಗೆ ಟಾಮಿ ತಿನ್ನಲೇ ಇಲ್ಲ. ಅದಕ್ಕೊಂದಿಷ್ಟು ಜೇನುತುಪ್ಪ ಸವರಿಕೊಟ್ಟ ಮೇಲೆ ಎಲ್ಲಾ ತಿಂದುಬಿಟ್ಟಿತು.












Click it and Unblock the Notifications