ಆ ಬೂದಿನೆಲ್ಲ ನಾನೇ ತಾನೆ ಮತ್ತೆ ಗುಡಿಸಬೇಕು!
ಹೆಂಡತಿಯನ್ನು ವಿಪರೀತವಾಗಿ ಪ್ರೀತಿಸುತ್ತಿದ್ದ ಗಂಡ ಗುಂಡ ಕೌಟುಂಬಿಕ ನ್ಯಾಯಾಲಯದಲ್ಲಿ ಹೆಂಡತಿ ಗುಂಡಿಯ ವಿರುದ್ಧ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಬೇಕೆಂದು ದೃಢನಿರ್ಧಾರ ಮಾಡಿದ್ದ. ಈ ಕುರಿತು ತನ್ನ ಪ್ರಾಣ ಸ್ನೇಹಿತ ತಿಮ್ಮನ ಅಭಿಪ್ರಾಯ ಪಡೆಯಬೇಕೆಂದುಕೊಂಡ.
ತಿಮ್ಮ : ಏನೋ ಗುಂಡ. ಏನೋ ಬರೋದಿಕ್ಕೆ ಹೇಳಿದೆ ಅರ್ಜೆಂಟಾಗಿ. ಏನ್ ಸಮಾಚಾರ?
ಗುಂಡ : ಹೌದು ಕಣೋ, ಗುಂಡಿಯ ಮೇಲೆ ಸಿಕ್ಕಾಪಟ್ಟೆ ಬೇಜಾರಾಗಿದೆ. ಡೈವೋರ್ಸ್ ಕೊಡೋಣಾಂತಿದ್ದೀನಿ.
ತಿಮ್ಮ : ವಾಟ್! ವಾಟ್ ನಾನ್ಸೆನ್ಸ್ ಯು ಆರ್ ಟಾಕಿಂಗ್. ಡೈವೋರ್ಸಾ? ವೈ? ಏನಾದ್ರೂ ಜಗಳ ಆಯ್ತಾ?
ಗುಂಡ : ಜಗಳ ಗಿಗಳ ಅಂಥದ್ದೇನೂ ಇಲ್ಲ. ನನ್ನ ಚೆನ್ನಾಗೇ ನೋಡಿಕೊಳ್ಳುತ್ತಾಳೆ. ಪ್ರೀತಿಸುತ್ತಾಳೆ. ಊಟ ತಿಂಡಿಗೇನೂ ಕೊರತೆ ಇಲ್ಲ.
ತಿಮ್ಮ : ಮತ್ಯಾಕಪ್ಪಾ ಡೈವೋರ್ಸು? ತಲೆಗಿಲೆ ಕೆಟ್ಟಿದೆಯಾ?
ಗುಂಡ : ಆದ್ರೆ ಆಕೆಯ ಒಂದು ಸಮಸ್ಯೆ ನನ್ನ ತಲೆ ತಿರುಗುವಂತೆ ಮಾಡಿದೆ.
ತಿಮ್ಮ : ಏನೋ ಅದು?
ಗುಂಡ : ಆಕೆಗೆ ಸಿಟ್ಟು ಬಂದ್ರೆ ನಾನು ಸೇದಿದ ಸಿಗರೇಟಿನ ಬೂದೀನೆಲ್ಲಾ ಆಶ್ ಟ್ರೇಯಿಂದ ಮನೆಯಲ್ಲೆಲ್ಲ ಬಿಸಾಡಿಬಿಡುತ್ತಾಳೆ.
ತಿಮ್ಮ : ಇದೆಂಥ ಸಮಸ್ಯೆ, ಇಷ್ಟಕ್ಕೆಲ್ಲಾ ವಿಚ್ಛೇದನ ಕೊಡುವಂಥ ಮಾತಾಡ್ತಾರಾ?
ಗುಂಡ : ಲೇ ಲೇ ತಿಮ್ಮ, ನಿನಗೆ ಗೊತ್ತಿಲ್ಲ ಕಣೋ. ಆಗ ತಾನೆ ಮನೆನೆಲ್ಲ ಸ್ವಚ್ಛವಾಗಿ ಗುಡಿಸಿರ್ತೀನಿ. ಮತ್ತೆ ಚೆಲ್ಲಾಪಿಲ್ಲಿ ಮಾಡಿದ್ರೆ ಯಾರಿಗೆ ತಾನೆ ಕೋಪ ಬರಲ್ಲ? ಆ ಬೂದಿನೆಲ್ಲ ನಾನೇ ತಾನೆ ಮತ್ತೆ ಗುಡಿಸಬೇಕು. [ಮತ್ತಷ್ಟು ಗುಂಡ ಜೋಕ್ಸ್]












Click it and Unblock the Notifications