ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀರೆ ತರ್ಲಾ, ಚೂಡಿದಾರ್ ತರ್ಲಾ ಎಂದ ಗಂಡನಿಗೆ ಹೆಂಡತಿ ಹೀಗಾ ಹೇಳೋದು..

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಪತಿ: ಏನ್ ಚಿನ್ನಾ.. ಹಬ್ಬಕ್ಕೆ ನಿನಗೆ ಏನು ತರಲಿ?
ಪತ್ನಿ: ನಿಮಗೆ ಇಷ್ಟವಾಗಿದ್ದನ್ನು ತನ್ನಿ..
ಪತಿ: ಸೀರೆ ತರಲಾ.. ಚೂಡಿದಾರ್ ತರಲಾ?
ಪತ್ನಿ: ಅದನ್ನು ನನ್ನಲ್ಲಿ ಯಾಕೆ ಕೇಳುತ್ತೀರಾ.. ನಿಮಗೆ ಬಟ್ಟೆ ಒಗೆಯೋದಕ್ಕೆ ಯಾವುದು ಸುಲಭವಾಗುತ್ತೋ ಅದನ್ನೇ ತನ್ನಿ..

--
ಪತ್ನಿ: ರೀ.. ಏನ್ ಮಾಡುತ್ತಾ ಇದ್ದೀರಾ?
ಪತಿ: ನೊಣ ಹೊಡ್ಕೊಂಡು ಕುತಿದ್ದೀನಿ..
ಪತ್ನಿ: ಎಷ್ಟು ನೊಣ ಸಿಕ್ಕಿತು?
ಪತಿ: ಐದು.. ಅದರಲ್ಲಿ ಮೂರು ಗಂಡು, ಎರಡು ಹೆಣ್ಣು
ಪತ್ನಿ: ನಿಮಗೆ ಹೇಗೆ ಗಂಡು, ಹೆಣ್ಣು ಅಂತ ಗೊತ್ತಾಯಿತು?
ಪತಿ: ದಡ್ಡೀ.. ಸುಲಭ ಕಣೇ.. ಮೂರು ನೊಣಗಳು ಬಿಯರ್ ಬಾಟಲ್ ಮೇಲೆ ಕೂತಿದ್ದವು, ಇನ್ನೆರಡು ಮೊಬೈಲ್ ಫೋನ್ ಮೇಲೆ ಕೂತಿದ್ದವು
--

Jokes For The Day: Discussion Between Husband And Wife

ಗುಂಡ: ಬಾಹುಬಲಿ ಸಿನಿಮಾ ನೋಡಲು ಥಿಯೇಟರ್ ಗೆ ಹೋದೆ. ಟಿಕೆಟ್ ಬೆಲೆ 700 ರೂಪಾಯಿ ಅಂದ..
ತಿಮ್ಮ: ಆಮೇಲೆ..
ಗುಂಡ: ಆ ಮೇಲೆ ಏನು ಮಣ್ಣು.. ವಾಪಸ್ ಬಂದು ಬಾರ್ ನಲ್ಲಿ ಕೂತೆ.. ಏಳ್ನೂರು ರೂಪಾಯಿಯಲ್ಲಿ ಎರಡು ಕ್ವಾಟರ್ ಕುಡಿದೆ. ಎಣ್ಣೆ ದೇಹದೊಳಗೆ ಹೋದ ನಂತರ ಅನಿಸ್ತು, ನಾನೇ ಬಾಹುಬಲಿ 1, 2 ಅಂತಾ..
--

ಹುಡುಗ (ತನ್ನ ಪ್ರೇಯಸಿಗೆ ಮೆಸೇಜ್) : ಪ್ರಿಯೇ.. ನೀ ಮಲಗಿದ್ದರೆ ಕನಸುಗಳನ್ನು ಕಳುಹಿಸು.. ಎಚ್ಚರದಲ್ಲಿದ್ದರೆ ನನ್ನೊಂದಿಗೆ ಕಳೆದ ಸವಿನೆನಪನ್ನು ಕಳುಹಿಸು..ನಗುತ್ತಿದ್ದರೆ ಖುಷಿ, ಅಳುತ್ತಿದ್ದರೆ ಕಣ್ಣೀರನ್ನು ಕಳುಹಿಸು..
ಹುಡುಗಿ : ಮುಸುರೆ ಪಾತ್ರೆ ತಿಕ್ತಾ ಇದ್ದೀನಿ.. ಮುಸುರೆ ನೀರು ಕಳುಹಿಸ್ಲಾ?
ಹುಡುಗ: ಗುಡ್ ನೈಟ್

English summary
Jokes For The Day: Discussion Between Husband And Wife. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X