ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ದುಬಾರಿ? ಡೋಂಟ್ ವರಿ, ಜೋಕ್ಸ್ ಓದಿರಿ

By Super
|
Google Oneindia Kannada News

ರುಪಾಯಿ ಮೌಲ್ಯ ಜಾರಬಂಡಿಯಾಡುತ್ತಿರುವ ಹಿನ್ನೆಲೆಯಲ್ಲಿ ಭಾರತದಾದ್ಯಂತ ಪೆಟ್ರೋಲ್ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಏರಿಸಲಾಗಿದೆ. ದುಬಾರಿ ನಗರಿ ಎಂದು ಬಿರುದು ಪಡೆದಿರುವ ಬೆಂಗಳೂರಿನಲ್ಲಿ ಎಲ್ಲಕ್ಕಿಂತ ಹೆಚ್ಚು, ಅಂದರೆ ಲೀಟರ್ ಪೆಟ್ರೋಲಿಗೆ 81 ರು. ಪೆಟ್ರೋಲನ್ನು ಗಾಡಿಗೆ ತುಂಬಿಸುವ ಹಾಗೂ ಇಲ್ಲ, ಬಿಡುವ ಹಾಗೂ ಇಲ್ಲ ಎಂಬಂತಹ ಪರಿಸ್ಥಿತಿ ಬಂದೊದಗಿದೆ.

ಪೆಟ್ರೋಲ್ ಬೆಲೆ ಏರಿಕೆಯೆಂದರೆ ಉಳಿದೆಲ್ಲ ದರಗಳೂ ಏರಲಿವೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಎಲ್ಲರೂ ಮಾಡುತ್ತಾರಾದರೂ ಏನು? ತಲೆ ಬಿಸಿ ಮಾಡಿಕೊಂಡು ಕೇಂದ್ರ ಸರಕಾರದ ಮೇಲೆ, ಪೆಟ್ರೋಲಿಯಂ ಮಂತ್ರಿಯ ಮೇಲೆ, ಮೋಸ ಮಾಡುವ ಪೆಟ್ರೋಲ್ ಬಂಕ್ ಮಾಲಿಕನ ಮೇಲೆ, ಹೆಂಡತಿ ಪಾಪದವಳಾಗಿದ್ದರೆ ಹೆಂಡತಿಯ ಮೇಲೆ, ಗಂಡ ಅಮ್ಮಾವ್ರ ಗಂಡನಾಗಿದ್ದರೆ ಹೆಂಡತಿ ಗಂಡನ ಮೇಲೆ ಬೈದು ಸುಮ್ಮನಾಗುತ್ತಾರೆ. ಮರುದಿನ ಮತ್ತೆ ಪೆಟ್ರೋಲ್ ಬಂಕ್ ಮುಂದೆ ಕ್ಯೂ ನಿಲ್ಲುತ್ತಾರೆ.

ಸುಮ್ನೆ ತಲೆಬಿಸಿ ಮಾಡಿಕೊಳ್ಳುವ ಬದಲು, ಅವರಿವರ ಮೇಲೆ ರೇಗಾಡುವ ಬದಲು, ಇನ್ಕ್ರಿಮೆಂಟ್ ನೀಡದ ಬಾಸ್ ಮೇಲೆ ಕೆರಳುವ ಬದಲು, ಹೆಂಡತಿಗೆ ಬೈದು ರಾತ್ರಿಯ ಸುಖ ಹಾಳು ಮಾಡಿಕೊಳ್ಳುವ ಬದಲು ಪೆಟ್ರೋಲ್ ಬಳಕೆಗೆ ಸಂಬಂಧಿಸಿದಂತೆ ಇಲ್ಲೊಂದಿಷ್ಟು ಜೋಕ್‌ ಅನ್ನುವದಕ್ಕಿಂತ ಸಂದೇಶಗಳಿವೆ ಓದಿ ಹಗುರಾಗಿಬಿಡಿ. ಇಷ್ಟವಾದರೆ ನಕ್ಕುಬಿಡಿ ಮತ್ತು ಕೆಲವನ್ನಾದರೂ ಜೀವನದಲ್ಲಿ ಅಳವಡಿಸಿಕೊಂಡು ಬದುಕಿನ ಬಂಡಿ ಏರಿಬಿಡಿ.

* ಪೆಟ್ರೋಲನ್ನು ಶೇ.90ರಷ್ಟು ಉಳಿಸಬೇಕಾ? ನಿಮ್ಮ ಮುದ್ದಿನ ಗಲ್ಸ್ ಫ್ರೆಂಡನ್ನು ಶಾಶ್ವತವಾಗಿ ಮರೆತುಬಿಡಿ.

* ಮೊದಲ ಪ್ರೇಮವೆಂದರೆ ಮರಳುಗಾಡಿನಲ್ಲಿ ಸಿಕ್ಕ ನೀರಿನಂತೆ. ಅದನ್ನು ಕುಡಿದಾಗಲೇ ನಿಮಗೆ ತಿಳಿಯುತ್ತದೆ, ಅದು ನೀರಲ್ಲ ಪೆಟ್ರೋಲ್!

* ಸಂತಾ ಸಂತಸದಿಂದ ಪೆಟ್ರೋಲ್ ಬಂಕ್ ತೆರೆಯುತ್ತಾನೆ. ಆದರೆ ಯಾವನೂ ಆ ಬಂಕಿಗೆ ಹೋಗುವುದೇ ಇಲ್ಲ. ಯಾಕೆಂದರೆ ಅದು ಇದ್ದದ್ದು ನಾಲ್ಕನೇ ಫ್ಲೋರಿನಲ್ಲಿ.

* 2015ರಲ್ಲಿ ಪೆಟ್ರೋಲ್ ಬಂಕ್ ಮುಂದೆ ಬೋರ್ಡ್ ಹೀಗಿರುತ್ತದೆ : "ಪೆಟ್ರೋಲ್ ಕೊಳ್ಳಲು ಇಲ್ಲಿ ಸಾಲ ನೀಡಲಾಗುತ್ತದೆ."

* ಪೆಟ್ರೋಲ್ ಬಂಕ್‌ನಲ್ಲಿ ಸ್ಮೋಕ್ ಮಾಡಬಾರದು, ಯಾಕೆಂದರೆ ನಿಮ್ಮ ಜೀವ ಅಮೂಲ್ಯವಲ್ಲ, ಪೆಟ್ರೋಲ್ ತುಂಬಾ ದುಬಾರಿ.

* 2050ರಲ್ಲಿ ಪೆಟ್ರೋಲ್ ಬಂಕ್ ಮುಂದೆ ಸ್ಲೋಗನ್ ಹೀಗಿರಬಹುದು : "ಐದು ಲೀಟಲ್ ಪೆಟ್ರೋಲ್ ಕೊಳ್ಳಿರಿ, ಹೊಚ್ಚಹೊಸ 125 ಸಿಸಿ ಬೈಕ್ ನಿಮ್ಮದಾಗಿಸಿಕೊಳ್ಳಿರಿ."

* ಸರ್ದಾರ್ಜಿ ತನ್ನ ಕಾರಿನ ಮುಂದೆ ನಿಂತ ಒಬ್ಬ ಸುಂದರಿಯನ್ನು ಕೇಳುತ್ತಾನೆ. ಸರ್ದಾರ್ಜಿ : "ನಿಮ್ಮ ಹೊಸ ಕಾರಿನ ಹೆಸರೇನು?" ಸುಂದರಿ : "ಗೊತ್ತಿಲ್ಲ, ಆದರೆ, ಅದು 'ಟಿ'ನಿಂದ ಶುರುವಾಗುತ್ತದೆ." ಸರ್ದಾರ್ಜಿ : "ಓಹೋ, ಹಾಗಾ. ನನ್ನ ಕಾರು ಪೆಟ್ರೋಲ್‌ನಿಂದ ಶುರುವಾಗುತ್ತದೆ."

* ಸ್ವಾಮಿ, ಮದುವೆ ಆಗಬೇಕೆಂದಿದ್ದೀರಾ? ಮಾವನನ್ನು ಬೈಕ್ ಬದಲು ಒಂದು ಹರ್ಕ್ಯೂಲಿಸ್ ಸೈಕಲ್ ಕೊಡಿಸೆಂದು ಕೇಳಿರಿ. ಜೀವನಪರ್ಯಂತ ಪೆಟ್ರೋಲ್ ಉಳಿತಾಯವಾಗುತ್ತದೆ. ವಾಟ್ ಎನ್ ಐಡಿಯಾ ಸರ್ ಜಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X