ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 7.50 ರು ಏರಿಕೆ

Petrol price hike Rs 7.50/litre hike
ನವದೆಹಲಿ, ಮೇ.23: ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 7.50 ರು ಹೆಚ್ಚಳವಾಗಿದೆ. ನೂತನ ದರ ಮೇ.23ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಮೇ.22ರಂದು ಸಂಸತ್ತಿನ ಬಜೆಟ್ ಅಧಿವೇಶನ ಮುಗಿದ ನಂತರ ಈ ಶಾಕಿಂಗ್ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಲು ಯುಪಿಎ ಸರ್ಕಾರ ತುದಿಗಾಲಲ್ಲಿ ನಿಂತಿತ್ತು.

ಇಂಧನ ದರ ಏರಿಕೆಗಾಗಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಸಲ್ಲಿಸಿರುವ ಮನವಿಗೆ ಸರ್ಕಾರ ಪುರಸ್ಕರಿಸಿದೆ. [ತಲೆ ಕೆಡಿಸ್ಕೋಬೇಡಿ, ಈ ಜೋಕ್ಸ್ ಓದಿಬಿಡಿ]

* ಬೆಂಗಳೂರು: 81.00 ರು/ಪ್ರತಿ ಲೀಟರ್
* ಕೋಲ್ಕತ್ತಾ: 77.53 ರು/ಪ್ರತಿ ಲೀಟರ್
* ಮುಂಬೈ: 78.16 ರು/ಪ್ರತಿ ಲೀಟರ್
* ಚೆನ್ನೈ: 77.05 ರು/ಪ್ರತಿ ಲೀಟರ್

ಜೊತೆಗೆ ರುಪಾಯಿ vs ಡಾಲರ್ ಸಮರದಲ್ಲಿ ರುಪಾಯಿ ಮೌಲ್ಯ ದಿನೇದಿನೇ ಕುಸಿಯುತ್ತಿರುವುದು[ಬುಧವಾರ 56 per dollar] ಬೆಲೆ ಏರಿಕೆಗೆ ಕಾರಣ ಎಂದು ಯುಪಿಎ ಸರ್ಕಾರ ಹೇಳಿದೆ.

"ಇಂಧನ ದರ ಏರಿಕೆ ನಿಯಂತ್ರಣ ಸಾಧ್ಯವಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಸಹಿಸಿಕೊಳ್ಳಲೇಬೇಕು. ಗ್ರಾಹಕರ ಮೇಲೆ ಮತ್ತೆ ಮತ್ತೆ ಹೊರೆ ಹಾಕಲು ಸರ್ಕಾರಕ್ಕೂ ಕಷ್ಟವಾಗುತ್ತದೆ.

ಆದರೆ, ಹಣದುಬ್ಬರ ನಿಯಂತ್ರಣದ ಬಗ್ಗೆ ಕೂಡಾ ಯೋಚಿಸಬೇಕಿದೆ" ಎಂದು ವಿತ್ತ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೆಷನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲ್ ಸಂಸ್ಥೆ ಗಳು ಮಾರ್ಚ್ 31, 2012ಕ್ಕೆ ಅನ್ವಯವಾಗುವಂತೆ 4,860 ಕೋಟಿ ರು ನಷ್ಟ ದಾಖಲಿಸಿತ್ತು. ಪ್ರತಿ ಲೀಟರ್ ಪೆಟ್ರೋಲ್ ಗೆ 6.28 ರು ಕಳೆದುಕೊಳ್ಳುತ್ತಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಜೈಪಾಲ್ ರೆಡ್ಡಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+