ಯವ್ವೋ, ನಾನು ಅದನ್ನೇ ಮಾಡಿದ್ದು!

ಆರು ಮುಕ್ಕಾಲು ವರ್ಷದ ಎರಡೂ ಮುಕ್ಕಾಲು ಅಡಿ ಎತ್ತರದ ಮರಿಗುಂಡ ಬಿಕ್ಕಿಬಿಕ್ಕಿ ಅಳ್ತಿರ್ತಾನೆ. ಆತ ಅಳುವುದನ್ನು ಕೇಳಿ ತಾಯಿ ಗುಂಡಿ ಓಡೋಡಿ ಬರುತ್ತಾಳೆ.

ಗುಂಡಿ : ಯಾಕೋ ಪುಟ್ಟಾ ಅಳ್ತಿದ್ದಿಯಾ? ಅಳಬಾರ್ದು, ಏನಾಯ್ತು ಹೇಳು.

ಮರಿಗುಂಡ : ಯವ್ವೋ, ಅಲ್ಲ ಗೋಡೆ ಮೇಲೆ ಫೋಟೋ ತಗುಲಿಹಾಕಲು ಮೊಳೆ ಹೊಡೆಯುತ್ತಿದ್ದರು (ಮತ್ತೆ ಬಿಕ್ಕಳಿಕೆ...)

ಗುಂಡಿ : ಸರಿ ಹೊಡೆಯುತ್ತಿದ್ದರು. ಆಮೇಲೆ ಮುಂದೇನಾಯ್ತು?

ಮರಿಗುಂಡ : ಎತ್ಲಾಗೋ ನೋಡಿಕೊಂಡು ಹೊಡೆಯುವಾಗ ಸುತ್ತಿಗೆ ಅವರ ಬೆರಳ ಮೇಲೆ ಬಿದ್ದುಬಿಟ್ಟಿತು (ಮತ್ತೆ ಅಳು ಜೋರು...)

ಗುಂಡಿ : ಛೆಛೆ ಅಷ್ಟೇನಾ. ಅಳಬೇಕಾಗಿದ್ದವರು ನಿಮ್ಮಪ್ಪ ಗುಂಡ. ಅವರ ಕೈಗೆ ಪೆಟ್ಟುಬಿದ್ರೆ ನೀನ್ಯಾಕೆ ಅಳೋಕೆ ಹೋದೆ? ಇಷ್ಟಕ್ಕೆಲ್ಲಾ ಅಳ್ತಾರಾ, ಜೋರಾಗಿ ನಕ್ಕುಬಿಟ್ಟಿದ್ರೆ ಆಗಿರೋದು.

ಮರಿಗುಂಡ : ಊ... ಊ... ಯವ್ವೋ, ನಾನು ಅದನ್ನೇ ಮಾಡಿದ್ದು! (ಅಳು ಇನ್ನೂ ಜೋರು...) [ಗುಂಡ ಜೋಕ್ಸ್]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+