ನಾಲ್ಕು ದಿನ ನೋಡಿ ಸೆಲಿಬ್ರೇಟ್ ಮಾಡು!
ಸುಬ್ಬು ಮತ್ತು ಡಿಬ್ಬಿ ಇಬ್ಬರೂ ಸುಮಾರು ಹೊತ್ತು ಗುಸುಗುಸು ಮಾತನಾಡುತ್ತಿದ್ದರು. ಕೆಲ ಹೊತ್ತು ಆದ ಮೇಲೆ ಡಿಬ್ಬಿ ಎದ್ದು ಹೊರಟುಹೋದ. ಆಗ ಸುಬ್ಬುವಿನ ಬಳಿ ಬಂದ ಸುಬ್ಬಿ, "ಏನು? ಇಷ್ಟೊತ್ತು ಏನೋ ಗುಟ್ಟಾಗಿ ಮಾತಾಡುತ್ತಿದ್ದಿರಲ್ಲ?" ಅಂತ ಕೇಳಿದಳು.
ಅದಕ್ಕೆ ಸುಬ್ಬು, "ಏನಿಲ್ಲ ಕಣೆ ಸುಬ್ಬಿ, ಡಿಬ್ಬಿ ಹೆಂಡತಿ ಮನೆ ಬಿಟ್ಟು ಹೋಗಿ ಹತ್ತು ದಿನಗಳಾಯಿತಂತೆ. ಇನ್ನೂ ತಿರುಗಿಬಂದಿಲ್ಲ, ಮುಂದೆ ಏನು ಮಾಡಬೇಕು ಅಂತ ನನ್ನ ವಿಚಾರಿಸುತ್ತಿದ್ದ" ಅಂತ ಉತ್ತರಿಸಿದ.
"ಅದಕ್ಕೆ ನೀವು ಏನು ಹೇಳಿದಿರಿ?" ಸುಬ್ಬಿಗೆ ತಡೆಯಲಾರದ ಕುತೂಹಲ.
"ಇನ್ನೊಂದು ನಾಲ್ಕು ದಿನ ನೋಡಿ ನಂತರ ಸೆಲಿಬ್ರೇಟ್ ಮಾಡು, ನಾನೂ ಬರ್ತೀನಿ ಅಂತ ಹೇಳಿದೆ!"
***
ಮೇಷ್ಟ್ರು ಇತಿಹಾಸದ ಪಾಠ ಮಾಡುತ್ತಿದ್ದರು. ಜಗತ್ತಿನ ಸರ್ವಾಧಿಕಾರಿಗಳ ಬಗ್ಗೆ ಪಾಠ ಅದಾಗಿತ್ತು. ಮಕ್ಕಳು ಮೊದಲೇ ಓದಿಕೊಂಡು ಬಂದಿದ್ದಾರೋ ಹೇಗೆ ಎಂದು ತಿಳಿಯಲು ಒಂದು ಪ್ರಶ್ನೆ ಕೇಳಬೇಕೆಂದು ಮೇಷ್ಟ್ರು ನಿರ್ಧರಿಸಿದರು.
ಮೇಷ್ಟ್ರು : ಮಕ್ಕಳೆ, ನಿಮಗೆ ಜಗತ್ತಿನ ಅತಿ ಕ್ರೂರಿ ಸರ್ವಾಧಿಕಾರಿ ಯಾರು ಎಂದು ಯಾರಿಗಾದರೂ ಗೊತ್ತಾ?
ಕೃಷ್ಣ : ಇದರ ಉತ್ತರ ನನ್ನಪ್ಪನಿಗೆ ಗೊತ್ತು ಮೇಷ್ಟ್ರೆ.
ಮೇಷ್ಟ್ರು : (ಆಶ್ಚರ್ಯದಿಂದ) ನಿಮ್ಮಪ್ಪನಿಗೆ ಹೇಗೆ ಗೊತ್ತು, ಕೃಷ್ಣ?
ಕೃಷ್ಣ : ಯಾಕೆಂದರೆ, ಜಗತ್ತಿನ ಅತಿ ಕ್ರೂರಿ ಸರ್ವಾಧಿಕಾರಿಯನ್ನ ಅಪ್ಪನೇ ಮದುವೆಯಾಗಿದ್ದಾನೆ!












Click it and Unblock the Notifications