ಮೂರೇ ಮೂರು ಸಿಕ್ಕಾಪಟ್ಟೆ ತರ್ಲೆ ಜೋಕುಗಳು
ಒಂದು ಸಂದರ್ಶನಕ್ಕೆ ಹುಡುಗ ಮತ್ತು ಹುಡುಗಿ ಇಬ್ಬರೂ ಹೋಗಿರುತ್ತಾರೆ. ಎಲ್ಲ ಪ್ರಶ್ನೆಗಳಿಗೆ ಪರ್ಫೆಕ್ಟ್ ಉತ್ತರಗಳನ್ನು ಕೊಟ್ಟರೂ ಸಿಲ್ಲಿ ಕಾರಣಕ್ಕಾಗಿ ಹುಡುಗ ಸಂದರ್ಶನದಲ್ಲಿ ಫೇಲಾಗುತ್ತಾನೆ, ಒಂದೇ ಒಂದು ಪ್ರಶ್ನೆಗೂ ಸರಿಯಾಗಿ ಉತ್ತರ ಕೊಡದಿದ್ದರೂ ಹುಡುಗಿ ಮಾತ್ರ ಸೆಲೆಕ್ಟ್ ಆಗುತ್ತಾಳೆ.
ಎರಡಕ್ಕೂ ಒಂದು ಕಾರಣ. ಅದೇನೆಂದು ಗೊತ್ತಾ?
ಹುಡುಗ ಮತ್ತು ಹುಡುಗಿ ಹಾಕಿಕೊಂಡಿರುವ ಶರ್ಟಿನ ಮೇಲಿನೆರಡು ಬಟನ್ ಗಳು ತೆರೆದುಕೊಂಡಿರುತ್ತವೆ!
***
ಪಮ್ಮಿ : ಮಮ್ಮಿ ಮಮ್ಮಿ ಇವತ್ತು ನನ್ನ ಕ್ಲಾಸ್ ಮೇಟ್ ತಿಮ್ಮ ನನ್ನ ಗಲ್ಲಕ್ಕೆ ಕಿಸ್ ಕೊಟ್ಟುಬಿಟ್ಟ.
ಮಮ್ಮಿ : ವಾಟ್, ಹೌ ಡೇರ್ ಹಿಮ್. ಕಪಾಳಕ್ಕೊಂದು ಬಿಗೀಬೇಕಾಗಿತ್ತು. ಬಗಿದಿ ತಾನೆ?
ಪಮ್ಮಿ : ಇಲ್ಲ ಮಮ್ಮಿ. ನೀನು ನಿನ್ನೆ ತಾನೆ ಗಾಂಧೀಜಿ ಹೇಳಿದ ತತ್ತ್ವದ ಬಗ್ಗೆ ಪಾಠ ಮಾಡಿದ್ದು ನೆನಪಾಯಿತು.
ಮಮ್ಮಿ : ಹಾಗಾದ್ರೆ ಏನು ಮಾಡಿದ್ಯೇ?
ಪಮ್ಮಿ : ಒಂದು ಗಲ್ಲಕ್ಕೆ ಕಿಸ್ ಕೊಟ್ಟಿದ್ನಲ್ಲ, ಮತ್ತೊಂದು ಗಲ್ಲಕ್ಕೂ ಕಿಸ್ ಕೊಡಿಸಿಕೊಂಡುಬಿಟ್ಟೆ. ಯಾಕೆ, ತಪ್ಪಾಯಿತಾ?
***
ಟೀಚರ್ : ಜಿಪುಣ ಅಂತ ಯಾರಿಗೆ ಕರೀತಾರೆ ಗೊತ್ತೇನ್ರೋ?
ಮರಿಸುಬ್ಬು : ನಂಗೊತ್ತು ಮಿಸ್.
ಟೀಚರ್ : ಸರಿ ಹೇಳು ಮರಿಸುಬ್ಬು.
ಮರಿಸುಬ್ಬು : ನೂರು ಎಸ್ಎಮ್ಎಸ್ ಕಳಿಸಿದರೂ, ಒಂದಕ್ಕೂ ಉತ್ತರ ಕೊಡದವರು ಜಿಪುಣರು ಮಿಸ್. ಆಮ್ ಐ ರೈಟ್?
ಟೀಚರ್ : ಯೂ ಆರ್ ರೈಟ್. ನಿನ್ನ ಏನೋ ಅಂದ್ಕೊಂಡಿದ್ದೆ. ತುಂಬಾ ಜಾಣ ಕಣೋ ನೀನು. ಅಂಥ ಜಿಪುಣರೊಬ್ಬರ ಹೆಸರು ಹೇಳು ನೋಡೋಣ?
ಮರಿಸುಬ್ಬು : ನಿಮ್ಮ ಮಗಳು ಟೀನಾ ಮಿಸ್. [ಸ್ಟುಡೆಂಟ್ ಟೀಚರ್ ಜೋಕ್ಸ್]












Click it and Unblock the Notifications