• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಸ ವರ್ಷನ್ ಗಾದೆ: ಹಾಕಿಕೊಳ್ಳೋಕೆ ಹೊಸ ಚೆಡ್ಡಿ ಇಲ್ಲಾಂದ್ರೂ, ಮುಖಕ್ಕೆ ಮಾಸ್ಕ್

|
Google Oneindia Kannada News

ಕೊರೊನಾ ಎರಡನೇ ಅಲೆ ಭೀಕರವಾಗಿ ತಾಂಡವಾಡುತ್ತಿದೆ. ಎಲ್ಲೆಲ್ಲೂ ಲಾಕ್ ಡೌನ್, ಜನತಾ ಕರ್ಫ್ಯೂ. ಹಾಗಾಗಿ, ವರ್ಕ್ ಫ್ರಂ ಹೋಂ ಕೆಲವು ವರ್ಗದವರಿಗೆ ಇರುವುದರಿಂದ ಕ್ರಿಯೇಟಿವಿಟಿ ಜಾಸ್ತಿಯಾಗುತ್ತಿದೆ. ಸೋ, ಇಂತಹ ಹೊಸಹೊಸ ಗಾದೆಗಳು ಹುಟ್ಟುತ್ತಿವೆ. ವಾಟ್ಸಾಪ್ ನಲ್ಲಿ ಬಂದ ಹೊಸ ವರ್ಷನ್ ಗಾದೆಗಳು.

ಕೈಗೆ ಸ್ಯಾನಿಟೈಸರಾದರೆ, ಬಾಯಿಗೆ ಮಾಸ್ಕು..

ಒಗ್ಗಟ್ಟಿನಲ್ಲಿ ಕೊರೊನಾ ಇದೆ..!

ಲಾಕಪ್ ಅಂದರೆ ಪೊಲೀಸ್ ಕಸ್ಟಡಿ, ಲಾಕ್‌ಡೌನ್ ಅಂದರೆ ಹೆಂಡತಿ ಕಸ್ಟಡಿಲಾಕಪ್ ಅಂದರೆ ಪೊಲೀಸ್ ಕಸ್ಟಡಿ, ಲಾಕ್‌ಡೌನ್ ಅಂದರೆ ಹೆಂಡತಿ ಕಸ್ಟಡಿ

ಉಪ್ಪಿಗಿಂತ ರುಚಿಯಿಲ್ಲ, ವೈದ್ಯರಿಗಿಂತ ದೇವರಿಲ್ಲ..

ಮಾತು ಆಡಿದರೆ ಹೋಯಿತು, ಮುತ್ತು ಕೊಟ್ಟರೆ ಹೋಯಿತು..

ಕೊರೊನಾದಿಂದ ಕೆಟ್ಟು ಹಳ್ಳಿ ಸೇರು..

ಮಾತು ಬಲ್ಲವನಿಗೆ ಜಗಳವಿಲ್ಲ, ಮಾಸ್ಕ್ ಧರಿಸಿದವನಿಗೆ ರೋಗವಿಲ್ಲ..

ಮಾತು ಮನೆ ಕೆಡಿಸಿತು, ಕೊರೊನಾ ಪ್ರಪಂಚ ಕೆಡಿಸಿತು..

ಮನೇಲಿದ್ದೋನೆ ಮಹಾಶೂರ, ಹೊರಗೆ ಹೋದವ ಹರೋಹರ..

ಬೆಂಗಳೂರಿನಿಂದ ಬಂದಾಗ ಹೋದ ಮಾನ, ಮಾಸ್ಕ್, ಸ್ಯಾನಿಟೈಸರ್ ಹಾಕಿಕೊಂಡು ತಿರುಗಿದರೂ ಬಾರದು..

ಮಾಸ್ಕು ಬೆಳ್ಳಿ, ಡಿಸ್ಟನ್ಸ್ ಬಂಗಾರ, ಉಪ್ಪಿಗಿಂತ ರುಚಿ ಇಲ್ಲ, ಕೊರೊನಾಗಿಂತ ರೋಗವಿಲ್ಲ..

ಹಾಕಿಕೊಳ್ಳೋಕೆ ಹೊಸ ಚೆಡ್ಡಿ ಇಲ್ಲಾಂದ್ರೂ, ಮುಖಕ್ಕೆ ಮಾಸ್ಕ್, ಕೈಯಿಗೆ ಸಾನಿಟೈಜರ್ ಇರಲೇ ಬೇಕಂತೆ..

ಬೀದೀಲಿ ಕೆಮ್ಮಿ ನೋಡು, ಹಾದೀಲಿ ಸೀನಿ ನೋಡು.

English summary
Best Coronavirus Proverbs in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X