ಜೋಕ್ಸ್ : ಓ ಮೈ ಗಾಡ್, ಗುಂಡಿಟ್ಟು ಉಡಾಯಿಸಿಬಿಡು

Husband wife jokes
ಉದ್ಯೋಗದ ನಿಮಿತ್ತ ಕೋಲ್ಕತಾಗೆ ಹೋಗಿದ್ದ ಸುಬ್ಬು ತನ್ನ ಮುದ್ದಿನ ಮಡದಿ ಶೀಲಾ ಜೊತೆ ಮಾತನಾಡಬೇಕೆಂದು ಬೆಂಗಳೂರಿಗೆ ಫೋನ್ ಮಾಡುತ್ತಾನೆ. ಹೆಂಡತಿಯ ಬದಲು ಯಾರೋ ಬೇರೆಯವಳು ಫೋನ್ ಎತ್ತುತ್ತಾಳೆ.

ಮನೆಗೆಲಸದಾಕೆ : (ವೈಯಾರದಿಂದ) ಹಲೋ

ಸುಬ್ಬು : ಯಾರು?

ಮನೆಗೆಲಸದಾಕೆ : ನಾನು ಮನೆಗೆಲಸದವಳು.

ಸುಬ್ಬು : ನನ್ನ ಹೆಂಡ್ತಿಗೆ ಫೋನ್ ಕೊಡ್ತಿಯಾ ಸ್ವಲ್ಪ, ಅವಳ ಜೊತೆ ಮಾತನಾಡಬೇಕು.

ಮನೆಗೆಲಸದಾಕೆ : (ಗಲಿಬಿಲಿಯಾಗಿ, ಸಣ್ಣನೆ ದನಿಯಲ್ಲಿ) ಯಜಮಾನ್ರೆ, ಮೇಡಂ ತಮ್ಮ ಇನಿಯನ ಜೊತೆ ಮೇಲಿನ ಬೆಡ್ ರೂಂನಲ್ಲಿ ಸರಸವಾಡ್ತಾ ಇದ್ದಾರೆ.

ಸುಬ್ಬು : ವಾಟ್? ನಾನಿಲ್ಲದ ಸಮಯದಲ್ಲಿ.... ಅವರಿಬ್ಬರನ್ನು ಗುಂಡಿಟ್ಟು ಉಡಾಯಿಸಿಬಿಡು.

ಓಕೆ ಅಂದ ಮನೆಗೆಲಸದಾಕೆ ಯಜಮಾನ್ರು ಹೇಳಿದಂತೆ ರಿವಾಲ್ವರ್ ತೆಗೆದುಕೊಂಡು ಪ್ರಿಯತಮೆ ಮತ್ತು ಪ್ರಿಯತಮನನ್ನು ಢಂಢಂ ಅಂತ ಗುಂಡಿಟ್ಟು ಸಾಯಿಸಿಬಿಡುತ್ತಾಳೆ.

ಮನೆಗೆಲಸದಾಕೆ : ಕೆಲಸ ಆಯ್ತು ಯಜಮಾನ್ರೆ. ಬಾಡಿಗಳನ್ನು ಏನು ಮಾಡಲಿ?

ಸುಬ್ಬು : ಏನು ಮಾಡೋದೇನು? ಸ್ವಿಮ್ಮಿಂಗ್ ಪೂಲಲ್ಲಿ ಬಿಸಾಡಿಬಿಡು.

ಮನೆಗೆಲಸದಾಕೆ : ಸ್ವಿಮ್ಮಿಂಗ್ ಪೂಲಾ? ಎಲ್ಲಿದೆ ಸ್ವಿಮ್ಮಿಂಗ್ ಪೂಲ್?

ಸುಬ್ಬು : ಹಲೋ, ಹಲೋ, ಹಲೋ, ನಾನು ಫೋನ್ ಮಾಡಿದ್ದು 22211 11222 ನಂಬರಿಗೆ ತಾನೆ?

***

ದೊಮ್ಮಲೂರಿನಿಂದ ಶ್ರೀನಗರಕ್ಕೆ ಹೋಗುತ್ತಿದ್ದ ಬಸ್ಸಿನಲ್ಲಿ ಪುಟಾಣಿ ಗುಂಡ ಪ್ರಯಾಣ ಮಾಡುತ್ತಿರುತ್ತಾನೆ. ಡ್ರೈವರ್ ಹಿಂದೆಯೇ ನಿಂತಿದ್ದ ಗುಂಡ ಜೋರಾಗಿ ಒಂದೇ ಸವನೆ ಮಾತನಾಡುತ್ತಿರುತ್ತಾನೆ. ಡ್ರೈವರ್‌ಗೆ ಕಿರಿಕಿರಿಯಾದರೂ ಏನೂ ಮಾಡಲಾಗದೆ ಸಹಿಸಿಕೊಂಡಿರುತ್ತಾನೆ. ಗುಂಡನ ಮಾತುಗಳು ಹೀಗಿರುತ್ತವೆ...

"ಅಪ್ಪ ಗಂಡು ಆನೆಯಾಗಿ ಅಮ್ಮ ಹೆಣ್ಣು ಆನೆಯಾಗಿ ಹುಟ್ಟಿದ್ದರೆ, ನಾನು ಪುಟ್ಟ ಗಂಡು ಆನೆಯಾಗಿರುತ್ತಿದ್ದೆ." "ಡ್ಯಾಡಿ ಬುಲ್ ಆಗಿದ್ದು ಮಮ್ಮಿ ಕೌ ಆಗಿದ್ದರೆ, ನಾನು ಪುಟಾಣಿ ಬುಲ್ ಆಗಿರುತ್ತಿದ್ದೆ." ಹೀಗೇ ಮಾತುಗಳು ಸಾಗುತ್ತಿರುತ್ತವೆ. ಒಂದಾದ ಮೇಲೊಂದರಂತೆ ಎಲ್ಲ ಪ್ರಾಣಿಗಳ ಹೆಸರುಗಳನ್ನು ತೆಗೆದುಕೊಂಡು ಇದೇ ರೀತಿ ಮಾತನಾಡುತ್ತಿರುತ್ತಾನೆ.

ಕೇಳಿ ಕೇಳಿ ತಲೆಕಟ್ಟಂತವನಾದ ಡ್ರೈವರ್, "ಅಯ್ಯಾ ಮರಿ, ನಿಮ್ಮಪ್ಪ ಲೂಸ್ ಆಗಿ, ನಿಮ್ಮಮ್ಮ ಮೂರ್ಖಳಾಗಿದ್ದರೆ ನೀನು ಏನಾಗಿರುತ್ತಿದ್ದೆ?"

ಪುಟಾಣಿ ಗುಂಡ ನಕ್ಕು, "ಬಸ್ ಡ್ರೈವರ್ ಆಗಿರುತ್ತಿದ್ದೆ!" ಡ್ರೈವರ್ ಗರ್ ಅಂತ ಬ್ರೇಕ್ ಹಾಕುತ್ತಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+