ಲೇ, ಎರಡು ದಿನ ಯಾಕೋ ಸ್ಕೂಲಿಗೆ ಬಂದಿಲ್ಲ?

Jokes for the day
ಮೇಷ್ಟ್ರು : ಲೇ, ಎರಡು ದಿನ ಯಾಕೋ ಸ್ಕೂಲಿಗೆ ಬಂದಿಲ್ಲ..
ಮರಿಗುಂಡ : ಮೊದಲ ದಿನ ಚಡ್ಡಿ ಒಗಿಯೋಕೆ ಹಾಕಿದ್ರು ಸಾರ್, ನನ್ನ ಬಳಿ ಒಂದೇ ಚಡ್ಡಿ ಇರೋದು ಸಾರ್ (ಅಳುಮುಖ).
ಮೇಷ್ಟ್ರು : ಅಳ್ಬೇಡ ಕಣೋ ಅಳ್ಬೇಡ. ಸರಿಯಪ್ಪ.. ಮತ್ತೆ ಎರಡನೇ ದಿನ ಯಾಕೋ ಬಂದಿಲ್ಲಾ?
ಮರಿಗುಂಡ : ಸ್ಕೂಲಿಗೆ ಬರ್ತಾ ಇದ್ದೆ ಸಾರ್.. ನಿಮ್ಮ ಮನೆ ಹತ್ರ ನಿಮ್ಮ ಚಡ್ಡಿನೂ ಒಗಿಯೋಕೆ ಹಾಕಿದ್ರು ಸಾರ್.. ನೀವು ಬರೋಲ್ಲ ಅನ್ಕೊಂಡೆ ಸಾರ್! (ಅಂದೋನೆ ಮೇಷ್ಟ್ರು ಆಕ್ಷನ್ ತೆಗೆದುಕೊಳ್ಳುವ ಮೊದಲೇ ಮರಿಗುಂಡ ಕ್ಲಾಸಿನಿಂದ ಪರಾರಿ.)

***
ಮರಿಗುಂಡ ರನ್ನಿಂಗ್ ರೇಸ್ ನಲ್ಲಿ ಭಾಗವಹಿಸಿದ್ದ. ಎಲ್ಲರೂ ಓಡಲು ರೆಡಿಯಾಗಿದ್ದರು..
ರೆಫರಿ ಕೂಗಿದ "ರೆಡಿ.. ಒನ್, ಟು, ತ್ರೀ" ಎಲ್ಲರೂ ಓಡಿದ್ರು. ಆದರೆ ಮರಿಗುಂಡ ಅಲ್ಲೇ ನಿಂತಿದ್ದ..
ರೆಫರಿ : ಲೇ ನೀನು ಯಾಕೋ ಓಡಿಲ್ಲ..
ಮರಿಗುಂಡ : ಸುಮ್ನಿರಿ ಸಾರ್.. ನನ್ನ ನಂಬರ್ ಫೋರ್..

***
ತಿಮ್ಮ ದೇವರನ್ನು ಕುರಿತು ಅಘೋರ ತಪಸ್ಸು ಆರಂಭಿಸಿದ್ದ. ಒಂದು ಶುಭ ದಿನ ನಾಲ್ಕು ಕೈ, ಮೂರು ಕೈಯಲ್ಲಿ ಆಯುಧ, ಒಂದು ಕೈಯಲ್ಲಿ ತಥಾಸ್ತು ಎನ್ನುವ ಪೋಸಿನಲ್ಲಿದ್ದ ದೇವ್ರು ಒಲಿದರು..
ದೇವರು : ಮಗನೇ, ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ. ಬೇಕಾದ ವರವನ್ನು ಕೇಳು.
ತಿಮ್ಮ : ನನಗೊಂದು ಒಳ್ಳೆ ಉದ್ಯೋಗ, ಒಂದು ದೊಡ್ಡ ಕಾರ್, ಕಾರಿನಲ್ಲಿ ತುಂಬಾ ಸುಂದರ ಹುಡುಗಿಯರು ದಯಪಾಲಿಸು ಭಗವಂತ.
ದೇವರು : ತಥಾಸ್ತು..
ಈಗ ತಿಮ್ಮ ಏನಾಗಿದ್ದಾನೆ ಗೊತ್ತಾ.. "ಮಹಿಳಾ ಕಾಲೇಜೊಂದರಲ್ಲಿ ಬಸ್ ಡ್ರೈವರ್!"

***
ಮೇಷ್ಟ್ರು : ರಬ್ಬರ್ ಎಳೆದಷ್ಟು ಉದ್ದ ಆಗುತ್ತೆ, ಪೇಪರ್ ಎಳೆದಷ್ಟು ತುಂಡಾಗುತ್ತೆ.. ಎಳೆದಷ್ಟು ಗಿಡ್ಡ ಆಗುವ ವಸ್ತು ಈ ಪ್ರಪಂಚದಲ್ಲಿ ಯಾವುದು?
ಮರಿಗುಂಡ : ಬೀಡಿ ಸಾರ್..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+