ನಾನು ಕಾಂಪ್ಲಾನ್ ಬಾಯ್, ನಾನು ಸಂತೂರ್ ಗರ್ಲ್!

Kannada jokes
ಬೆಕ್ಕು : ನಿನಗೆ ಎಷ್ಟು ವರ್ಷ?
ಆನೆ : ಐದು ವರ್ಷ.
ಬೆಕ್ಕು : ಐದು ವರ್ಷನಾ? ಮತ್ತೆ ನಿನ್ನ ದೇಹ ಇಷ್ಟು ದೊಡ್ಡದಾಗಿದೆ?
ಆನೆ : ನಾನು ಕಾಂಪ್ಲಾನ್ ಬಾಯ್! ನಿನಗೆ?
ಬೆಕ್ಕು : ನನಗೆ 30 ವರ್ಷ.
ಆನೆ : 30 ವರ್ಷನಾ? ಮತ್ತೆ ಯಾಕೆ ನಿನ್ನ ದೇಹ ಇಷ್ಟು ಚಿಕ್ಕದಾಗಿದೆ?
ಬೆಕ್ಕು : ನಾನು ಸಂತೂರ್ ಗರ್ಲ್!

***
ಗುಂಡ : ಸಾರ್ ನನ್ನ ಚೆಕ್ ಬುಕ್ ಕಳೆದು ಹೋಗಿದೆ.
ಬ್ಯಾಂಕ್ ಮೇನೇಜರ್ : ಹುಷಾರಪ್ಪಾ.. ಯಾರಾದ್ರೂ ನಿನ್ನ ಸೈನ್ ಫೋರ್ಜರಿ ಮಾಡಿಬಿಟ್ಟಾರು...
ಗುಂಡ : ಏನ್ ಸಾರ್, ನನ್ನನೇನು ಅಷ್ಟು ದಡ್ಡಾ ಅನ್ಕೊಂಡ್ರಾ.. ಎಲ್ಲಾ ಚೆಕ್ ಗೆ ಆಗ್ಲೇ ಸೈನ್ ಮಾಡಿದ್ದೇನೆ!

***
ಗುಂಡ ತಿಂಡಿ ತಿನ್ನಲು ದರ್ಶಿನಿಗೆ ಹೋದ...
ಗುಂಡ : ಯಾಕೆ ನೀವು ಪ್ರತೀ ಮಂಗಳವಾರ ನಿಮ್ಮ ಹೊಟೇಲ್ ಗೆ ರಜಾ ಕೊಡ್ತೀರಾ?
ಹೋಟೆಲ್ ಮಾಲೀಕ : ಯಾಕೆಂದರೆ.. ಅವತ್ತೊಂದಿನ ಮಾತ್ರ ಎಲ್ಲಾ ಪಾತ್ರೆಗಳನ್ನು ತೊಳಿತೀವಿ.

***
ನೀರಿನ ಸಾಗರವನ್ನು ದಾಟಲು 'ತೆಪ್ಪ' ಇರಬೇಕು...
ವಾಹ್ ವಾಹ್ ವಾಹ್...
ನೀರಿನ ಸಾಗರವನ್ನು ದಾಟಲು 'ತೆಪ್ಪ' ಇರಬೇಕು...
ಸಂಸಾರ ಸಾಗರವನ್ನು ದಾಟಲು ತೆಪ್ಪಗಿರಬೇಕು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+