ನನ್ನಪ್ಪ ಮಹಾ ಹೆದರು ಪುಕ್ಲ ಕಣೋ?
ಮರಿಗುಂಡ : ನನ್ನಪ್ಪ ಮಹಾ ಹೆದರು ಪುಕ್ಲ ಕಣೋ?
ಮರಿತಿಮ್ಮ : ಅದು ಹೇಗೆ?
ಮರಿಗುಂಡ : ರೋಡ್ ಕ್ರಾಸ್ ಮಾಡುವಾಗಲೆಲ್ಲಾ ನನ್ನ ಕೈ ಹಿಡ್ಕೊಂಡೇ ಇರ್ತಾರೆ ಕಣೋ!
***
ಮರಿಗುಂಡ : ನಿಮ್ಮ ಊರಲ್ಲಿ ಸುಮಾರು ಎಷ್ಟು ಜನ ಹುಡುಗಿಯರು ಇದ್ದಾರೆ?
ಮರಿತಿಮ್ಮ : ನಮ್ಮ ಊರಲ್ಲಿ ಎಲ್ಲಾ ಹುಡುಗಿಯರು ಸುಮಾರಾಗಿದ್ದಾರೆ.
***
ಕುಡುಕ ಫುಲ್ ಟೈಟ್ ಆಗಿ ಬ್ಯಾಲನ್ಸ್ ತಪ್ಪಿ ಮೋರಿಯಲ್ಲಿ ಬೀಳುತ್ತಾನೆ.
ಜೋರಾದ ಮಳೆಯಲಿ ಮಿಂಚು ಬಂದಾಗ.. ಹೇಳುತಾನೆ...
ದೇವರೇ! ಏನಪ್ಪಾ ನಿನ್ನ ಲೀಲೆ.. ಮಳೇಲಿ ಬೀಳಿಸೋನು ನೀನೆ.. ಫೋಟೋ ತೆಗೆಯೋನೂ ನೀನೆ!
***
ಗುಂಡನಿಗೆ ಹುಚ್ಚು ಹಿಡಿದಿತ್ತು. ನಿಮ್ಹಾನ್ಸ್‌ಗೆ ಅಡ್ಮಿಟ್ ಮಾಡಿದ್ರು. ಪ್ರತಿದಿನ ಗುಂಡ ಆಸ್ಪತ್ರೆ ಗೋಡೆಗೆ ಕಿವಿಯಿಟ್ಟು ಏನೋ ಕೇಳಿಸಿಕೊಳ್ಳುವವರ ಹಾಗೆ ಕುಳಿತುಕೊಳ್ಳುತ್ತಿದ್ದ. ಗುಂಡನನ್ನು ಟ್ರೀಟ್ ಮಾಡುತ್ತಿದ್ದ ವೈದ್ಯ ತಿಮ್ಮ ದಿನಾ ಇದನ್ನೇ ಗಮನಿಸುತ್ತಿದ್ದ.
ಒಂದು ದಿನ ತಿಮ್ಮ ತಾನೂ ಗೋಡೆಗೆ ಕಿವಿಯಿಟ್ಟು ಕೇಳಿಸಿಕೊಳ್ಳಲು ಆರಂಭಿಸಿದ. ಏನೂ ಕೇಳಿಸುತ್ತಲೇ ಇರಲಿಲ್ಲ. ಪಕ್ಕದಲ್ಲಿದ್ದ ಗುಂಡ ಕಿಸಕ್ಕನೆ ನಕ್ಕ. ವೈದ್ಯ ತಿಮ್ಮನಿಗೆ ರೇಗಿಹೋಯಿತು.
ಗುಂಡನನ್ನು ಕರೆದು, "ಲೇ ಹುಚ್ ಮುಂಡೆ ಮಗನೆ, ಅಲ್ಲೇನು ಕೇಳಿಸ್ತಾ ಇಲ್ಲ. ದಿನಾ ಅಲ್ಲೇನು ಕೇಳಿಸಿಕೊಳ್ತಿದ್ದೆ?"
ಅದಕ್ಕೆ ಗುಂಡ, "ಹೆಹೆಹೆ, ಹೋಗೋಗ್ರಿ, ಒಂದು ವರ್ಷದಿಂದ ನನಗೇ ಏನೂ ಕೇಳ್ತಿಲ್ಲ. ಇಂದು ನೀನು ಬಂದು ಕಿವಿಯಿಟ್ರೆ ಕೇಳಿಸಿಬಿಡತ್ತಾ!" ತಿಮ್ಮ ಅಲ್ಲಿಂದ ಪರಾರಿ!











Click it and Unblock the Notifications