ಜೋಕ್ಸ್ : ನೈಂಟಿ ಕುಡಿ.. ಹೆಂಡ್ತಿಗೆ ಹೊಡಿ..

ತಿಮ್ಮ : ಹೌದಾ.. ವೆರಿ ಗುಡ್. ಚಿತ್ರಕ್ಕೆ ಏನು ಹೆಸರು ಇಡಬೇಕೆಂದು ಇದ್ದೀಯಾ?
ಗುಂಡ : ನೈಂಟಿ ಕುಡಿ.. ಹೆಂಡ್ತಿಗೆ ಹೊಡಿ..
***
ಮೇಷ್ಟ್ರು : ಹೋಂ ವರ್ಕ್ ಯಾಕೋ ಮಾಡಿಲ್ಲಾ?
ಮರಿಗುಂಡ : ಕರೆಂಟ್ ಇರ್ಲಿಲ್ಲಾ ಸಾರ್.
ಮೇಷ್ಟ್ರು : ಕ್ಯಾಂಡಲ್ ಇರ್ಲಿಲ್ವಾ?
ಮರಿಗುಂಡ : ಮ್ಯಾಚ್ ಬಾಕ್ಸ್ ಇರ್ಲಿಲ್ಲಾ ಸಾ..
ಮೇಷ್ಟ್ರು : ಬೆಂಕಿ ಪಟ್ಟಣ ಯಾಕ್ ಇರ್ಲಿಲ್ಲಾ?
ಮರಿಗುಂಡ : ದೇವರ ಮನೇಲಿ ಇತ್ತು, ಸ್ನಾನ ಮಾಡಿರ್ಲಿಲ್ಲಾ!
ಮೇಷ್ಟ್ರು : ಸ್ನಾನ ಯಾಕೆ ಮಾಡಿಲ್ಲಾ?
ಮರಿಗುಂಡ : ಏನ್ ಮೇಷ್ತ್ರಿರೀ ನೀವು.. ಆವಾಗ್ಲೆ ಹೇಳಿಲ್ವಾ.. ಕರೆಂಟ್ ಇರ್ಲಿಲ್ಲಾಂತಾ!
***
ಗುಂಡ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ. ಇಬ್ಬರು ಹೆಂಗಸರು ಸೀಟ್ ಗಾಗಿ ಜಗಳವಾಡುತ್ತಿದ್ದರು. ಎಲ್ಲರೂ ತಮಾಷೆ ನೋಡುತ್ತಿದ್ದರೇ ಹೊರತು ಕಂಡಕ್ಟರ್ ಸೇರಿ ಯಾರೂ ಜಗಳ ಬಿಡಿಸೋಕೆ ಹೋಗಲಿಲ್ಲ. ಗುಂಡ ಆಖಾಡಕ್ಕೆ ಇಳಿದು "ಯಾಕಮ್ಮ ಸೀಟ್ ಗಾಗಿ ಜಗಳ ಆಡ್ತಾ ಇದ್ದೀರಾ? ಇಬ್ಬರಲ್ಲಿ ಯಾರಿಗೆ ವಯಸ್ಸು ಜಾಸ್ತಿ ಆಗಿದೆಯೋ ಅವರು ಸೀಟ್ ನಲ್ಲಿ ಕೂತ್ಕೊಳ್ಳಿ.."
ಆಗ ಇಬ್ಬರು ಹೆಂಗಸರು ಮುಖ ಮುಖ ನೋಡಿ ಜಗಳ ಆಡೋದು ನಿಲಿಸಿ ಬಿಟ್ರು. ಸೀಟ್ ಹಾಗೆ ಖಾಲಿಯಾಗಿಯೇ ಇತ್ತು..
ಅದಕ್ಕೆ ಹೇಳೋದು ಗಂಡಸರ ಸಂಬಳ ಹೆಂಗಸರ ವಯಸ್ಸು ಕೇಳಬಾರದೂಂತಾ..
***
ಗುಂಡ : ಲೋ ತಿಮ್ಮ.. ಬೆಳಗ್ಗೆಯಿಂದ ಫೋನ್ ಮಾಡ್ತಾ ಇದ್ದೀನಿ. ಫೋನ್ ರಿಸೀವ್ ಮಾಡೋಕೆ ಏನೋ ಧಾಡಿ ನಿನಗೆ?
ತಿಮ್ಮ : ಹೌದಾ. ನಾನು ನನ್ನ ರಿಂಗ್ ಟೋನ್ ಗೆ ಡ್ಯಾನ್ಸ್ ಮಾಡ್ತಾ ಇದ್ದೆ!











Click it and Unblock the Notifications