ರಜನಿಕಾಂತ್ ವಿದ್ಯಾರ್ಥಿಯಾಗಿದ್ದಾಗ, ಶಿಕ್ಷಕರು ಏನು ಮಾಡುತ್ತಿದ್ದರು !?

jokes on Rajnikant
ಅತ್ತ ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಹಾಸಿಗೆ ಹಿಡಿದಿರುವುದು ಅವರ ಕಟ್ಟಾ ಅಭಿಮಾನಿಗಳಿಗೆ ಅರಿಗಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಂದರ್ಭದಲ್ಲಿ ಅಭಿಮಾನಿಗಳ ಮನಸ್ಸನ್ನು ಒಂದಷ್ಟು ಹಗುರವಾಗಿಸಿ, ತಿಳಿಗೊಳಿಸುವ ಪ್ರಯತ್ನ ಇಲ್ಲಿದೆ. ರಜನಿಕಾಂತ್ ಸೂಪರ್ ಹ್ಯೂಮನ್ ಪವರ್ ಬಗ್ಗೆ ಇತ್ತೀಚೆಗೆ ಜೋಕುಗಳು ಒಂದೇ ಸಮನೆ ಹರಿದಾಡುತ್ತಿವೆ. ಆಯ್ದ ಕೆಲವು ಇಲ್ಲಿವೆ:

* ರಜನಿಕಾಂತ್ ಮೂರನೇ ಕ್ಲಾಸಿನಲ್ಲಿ ಓದುತ್ತಿದ್ದಾಗ ಯಾರೋ ಅವರ ರಫ್ ನೋಟ್ ಪುಸ್ತಕವನ್ನು ಕದ್ದಿದ್ದರು. ಅದನ್ನೇ ಈಗ ವಿಕಿಪೀಡಿಯಾ ಎನ್ನಲಾಗುತ್ತಿದೆ.
* ರಜನಿಕಾಂತ್ ವಿದ್ಯಾರ್ಥಿಯಾಗಿದ್ದಾಗ... ಶಿಕ್ಷಕರು ಶಾಲೆಗಳನ್ನು ಬಂಕ್ ಮಾಡುತ್ತಿದ್ದರು.
* ರಜನಿಕಾಂತ್ ಓದುತ್ತಿದ್ದ ಶಿಶುವಿಹಾರ ಈಗ ಮದ್ರಾಸ್ ಐಐಟಿ (ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್) ಆಗಿ ಮಾರ್ಪಟ್ಟಿದೆ.
* ಸರಿ ರಜನಿಕಾಂತ್ ಅವರೇ ಒಂದು ಕಾಲೇಜು ಪ್ರಾರಂಭಿಸಿದರು. ವಿದ್ಯಾರ್ಥಿಗಳಿಗೆ ಗೊಂದಲವೋ ಗೊಂದಲ ... ಏಕೆಂದರೆ ಕಾಲೇಜಿನ ಹೆಸರು ರಜನಿಕಾಂತ್ ಮೆಡಿಕಲ್ ಕಾಲೇಜ್ ಆಫ್ ಎಂಜಿನಿಯರಿಂಗ್ ಫಾರ್ ಕಾಮರ್ಸ್.
* ಸಚಿನ್ ತೆಂಡೂಲ್ಕರ್ ಅವರ ತಾಯಿಯ ಹೆಸರು ರಜನಿ ತೆಂಡೂಲ್ಕರ್. ಸಚಿನ್ ಕೋಚ್ ಹೆದರು ರಮಾಕಾಂತ್. ಇದರಲ್ಲಿ ರಜನಿಕಾಂತ್ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ.
* ಅದೊಂದು ಸಲ ರಜನಿಕಾಂತ್ ಮುಂಗಾರು ಮಳೆಯಲ್ಲಿ ಕ್ರಿಕೆಟ್ ಆಡತೊಡಗಿದರು. ಮಳೆಯಿಂದಾಗಿ ಆಟ ಸ್ಥಗಿತ ಅಲ್ಲಲ್ಲ ಆಟದಿಂದಾಗಿ ಮಳೆ ನಿಂತೇ ಹೋಯಿತು.
* ರಜನಿಕಾಂತ್ ಮುಂದಿನ ಸಿನಿಮಾ, ತಮಿಳಿನಲ್ಲಿ ಟೈಟಾನಿಕ್. ಆದರೆ ಕ್ಲೈಮಾಕ್ಸ್ ಬದಲಾಗಿದೆ. ಹೀರೊ, ಹೀರೋಯಿನ್ ಇಬ್ಬರೂ ಬದುಕುಳಿಯುತ್ತಾರೆ. ರಜನಿಕಾಂತ್ ಒಂದು ಕೈಯಲ್ಲಿ ನಾಯಕಿಯನ್ನು ಎತ್ತಿ ಕೊಂಡು, ಮತ್ತೊಂದು ಕೈಯಲ್ಲಿ ಟೈಟಾನಿಕ್ ಹಡಗನ್ನು ಹಿಡಿದುಕೊಂಡು ಅಟ್ಲಾಂಟಿಕ್ ಸಾಗರವನ್ನು ಈಜಿ ದಡ ಮುಟ್ಟುತ್ತಾರೆ.
* ಹೌದು, ಇಡೀ ಜಗತ್ತು ಇಂದೇ ಸರ್ವನಾಶವಾಗುತ್ತದೆ ಎಂದವರಾರು? ಮೂರು ವರ್ಷ ವಾರಂಟಿ ಇರುವ ಲ್ಯಾಪ್ ಟಾಪ್ ಅನ್ನು ರಜನಿಕಾಂತ್ ನಿನ್ನೆಯಷ್ಟೇ ಖರೀದಿಸಿದ್ದಾರೆ.
* ರಜನಿಕಾಂತ್ ಬೆಳಕಿಗಿಂತ ವೇಗವಾಗಿ ಚಲಿಸಬಲ್ಲರು. ರಜನಿಕಾಂತ್ ಅವನ್ನು ಸೃಷ್ಟಿಸುವುದಾಗಲಿ ಅಥವಾ ನಾಶಪಡಿಸುವುದಾಗಲಿ ಸಾಧ್ಯವಿಲ್ಲ. ಕೇವಲ ಅವರನ್ನು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಬದಲಿಸಬಹುದಷ್ಟೆ.
* ರಜನಿಕಾಂತ್ ಸಂರಕ್ಷಣೆ ಪ್ರಮೇಯ: ಯಾವ ದ್ರವ ವಸ್ತುವನ್ನು ಬಿಸಿ ಮಾಡಿದಾಗ ಅದು ಘನವಾಗಿ ಪರಿವರ್ತನೆಯಾಗುತ್ತದೆ? ಇದಕ್ಕೆ ಯಾವ ವಿಜ್ಞಾನಿಯಿಂದಲೂ ಇದುವರೆಗೆ ಉತ್ತರ ದೊರೆತಿಲ್ಲ. ಆದರೆ ರಜನಿಕಾಂತ್ ನೀಡುವ ಉತ್ತರ - ದೋಸೆ.
* ರಜನಿಕಾಂತ್ ತಮ್ಮ ಹಲ್ಲುಗಳನ್ನು ಸದೃಢಗೊಳಿಸಲು ಹಲ್ಲಿನ ಪುಡಿಯನ್ನು ಉಪಯೋಗಿಸುತ್ತಿದ್ದರು. ಆ ಪುಡಿಯನ್ನು ಈಗ ಅಂಬುಜಾ ಸಿಮೆಂಟ್ ಎಂದು ಕರೆಯುತ್ತಾರೆ.
ರಜನಿ ಸರ್ ಶೀಘ್ರ ಗುಣಮುಖರಾಗಲೆಂದು ಹಾರೈಸುತ್ತಾ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+