ಹೆಣ್ಣುಮಗುವಿನ ತಂದೆಯಾದ ಗುಂಡನ ತಳಮಳ

ರಾಜಕಾರಿಣಿಯಾಗಿ ಬದಲಾದ ಗುಂಡನ ಮಡದಿ ಸತತವಾಗಿ ಐದನೇ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಈ ಬಾರಿಯಾದರೂ ಗಂಡು ಮಗುವಿನ ತಂದೆಯಾಗಿ ಮಗನನ್ನು ಭವಿಷ್ಯದ ರಾಜಕಾರಿಣಿಯಾಗಿ ರೂಪಿಸಬೇಕೆನ್ನುವ ಗುಂಡನಿಗೆ ಭಾರೀ ನಿರಾಶೆಯಾಗುತ್ತದೆ. ಈ ಬಾರಿಯೂ ಹೆಣ್ಣು ಮಗುವಿನ ತಂದೆಯಾದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ...

ಗುಂಡ : ಇದು ವಿರೋಧ ಪಕ್ಷದವರ ವ್ಯವಸ್ಥಿತ ಪಿತೂರಿ. ನನ್ನ ಮದುವೆಯಾದಾಗಿನಿಂದ ವಿರೋಧ ಪಕ್ಷದವರು ನೆಮ್ಮದಿಯಿಂದ ಕೆಲಸ ಮಾಡಲು ಬಿಡಲಿಲ್ಲ. ಹುಟ್ಟು ಹೋರಾಟಗಾರನಾದ ನಾನು ಸುಮ್ಮನೆ ಕೂರುವವನಲ್ಲ, ಮತ್ತೆ ಮಗುದೊಮ್ಮೆ ಪ್ರಯತ್ನಿಸುತ್ತೇನೆ. ಪಕ್ಷದ ವರಿಷ್ಠರ ಬಳಿ ಈ ವಿಷಯದ ಬಗ್ಗೆ ಈಗಾಗಲೇ ಚರ್ಚಿಸಿದ್ದೇನೆ. ಅಗತ್ಯ ಬಿದ್ದರೆ ರಾಷ್ಟ್ರಪತಿ ಬಳಿ ನಿಯೋಗ ಕರೆದೊಯ್ಯುತ್ತೇನೆ. ಬ್ಲಾಕ್ ಮಟ್ಟದಲ್ಲಿ ಕಾರ್ಯಕರ್ತರು ಧರಣಿ ನಡೆಸಲು ಮುಂದಾಗಿದ್ದಾರೆ. ಅಗತ್ಯ ಬಿದ್ದರೆ ಬಂದ್ ಗೆ ಕರೆ ನೀಡಲು ಚಿಂತಿಸಲಾಗುತ್ತಿದೆ.

ವಿರೋಧಪಕ್ಷದ ಸದಸ್ಯ : ಗುಂಡವರ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಬಗ್ಗೆ ಸಿಬಿಐ ತನಿಖೆಗೂ ನಾವು ಸಿದ್ದರಿದ್ದೇವೆ. ಈ ಸಂಬಂಧ ವಿಡಿಯೋ ಸಾಕ್ಷಿ ಏನಾದರೂ ಇದ್ದರೆ ಬಹಿರಂಗ ಪಡಿಸಲಿ. ಇವರ ಹೇಳಿಕೆ ನಿಜವಾದರೆ ಮತ್ತು ರುಜುವಾತು ಪಡಿಸಿದರೆ ಪಕ್ಷದ ಪರಿಹಾರ ನಿಧಿಯಿಂದ ಹೆರಿಗೆ ಖರ್ಚನ್ನು ನಾವೇ ಭರಿಸುತ್ತೇವೆ.

ಗುಂಡ : ವಿಡಿಯೋ ಸಾಕ್ಷಿ ಬಹಿರಂಗ ಪಡಿಸಲು ಇದು ನಿತ್ಯಾನಂದನ ಹಗರಣವಲ್ಲ. ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಗಂಡಸರು ನಿಮ್ಮಲ್ಲಿಲ್ಲವೇ?

ವಿರೋಧಪಕ್ಷದ ಸದಸ್ಯ : ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಮುಂದಿನ ತಿಂಗಳು ನಡೆಯುವ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಕೂಲಂಕುಷವಾಗಿ ಸದಸ್ಯರ ಬಳಿ ಈ ಬಗ್ಗೆ ಚರ್ಚಿಸಿ ಹೇಳಿಕೆ ನೀಡಲಾಗುವುದು. ತಪ್ಪಿತಸ್ಥರಿದ್ದರೆ ಮುಲಾಜಿಲ್ಲದೆ ಅವರ ಹೆಸರನ್ನು ಬಹಿರಂಗಪಡಿಸುತ್ತೇವೆ.

***
ಪ್ರಪಂಚದ 3 ಅತಿಶೀಘ್ರ ಕಮ್ಯೂನಿಕೇಶನ್ ಯಾವುದೆಂದರೆ -
ಟೆಲಿ - ಫೋನ್
ಟೆಲಿ - ವಿಷನ್
ಟೆಲ್ ಟು ವುಮೆನ್!

***
ಮಗ : ಅಮ್ಮಾ ಸ್ಕೂಲ್ ನಲ್ಲಿ ನನಗೆ ತುಂಬಾ ಹೊಡಿತಾರಮ್ಮ.
ತಾಯಿ : ಯಾಕೋ, ಸ್ಕೂಲ್ ನಲ್ಲಿ ತುಂಬಾ ಗಲಾಟೆ ಮಾಡುತ್ತೀಯಾ?
ಮಗ : ಇಲ್ಲಾಮ್ಮಾ. ನನ್ ಪಾಡಿಗೆ ಮಲಗಿದರೂ ಎಬ್ಬಿಸಿ ಹೊಡಿತಾರಮ್ಮಾ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+