ನೀನು ಚೆಲುವೆ, ಕ್ಯೂಟ್, ಸ್ವೀಟ್, ಸ್ಮಾರ್ಟ್...!

ನೀನು 94% ಸೈಲೆಂಟ್, 95% ಚೆಲುವೆ, 96% ಆಕರ್ಷಕವಾಗಿದ್ದೀಯಾ, 97% ಕ್ಯೂಟ್ , 98% ಸ್ವೀಟ್, 99% ಸ್ಮಾರ್ಟ್..
ನಾನು ಮೇಲೆ ಹೇಳಿದ್ದು 100% ಜೋಕ್
***
ದಂಪತಿಗಳಿಬ್ಬರು ಒಬ್ಬ ಕಳ್ಳನನ್ನು ಅಟ್ಟಾಡಿಸಿಕೊಂಡು ಹಿಡಿತಾರೆ. ದಢೂತಿ ಪತ್ನಿ ಕಳ್ಳನ ಮೇಲೆ ಕೂತು ಪೊಲೀಸರನ್ನು ಕರೆದುಕೊಂಡು ಬರುವಂತೆ ಪತಿಗೆ ಸೂಚಿಸುತ್ತಾಳೆ. ಪತಿ ಮಹಾಶಯ ಸಿಡಿಮಿಡಿಗೊಳ್ಳುತ್ತಾ ಇನ್ನೊಂದು ಶೂಗಾಗಿ ಹುಡುಕಾಡ್ತಾ ಇರ್ತಾನೆ. ಆಗ ಕಳ್ಳ "ರೀ ಸ್ವಾಮಿ.. ಏನ್ ಹುಡುಕ್ತಾ ಇದ್ದೀರಾ, ನಂದೇ ಶೂ ಹಾಕ್ಕೊಂಡು ಹೋಗಿ ಪೊಲೀಸರನ್ನು ಕರೆದುಕೊಂಡು ಬನ್ರಿ" ಎಂದು ಗೋಗರೆದ.
***
ರಾತ್ರಿ ಮಲಗುವಾಗ ನಾಳೆ ಎದ್ದೇಳುತ್ತೇವೆ ಅನ್ನುವ ಯಾವುದೇ ನಂಬಿಕೆ ಇರುವುದಿಲ್ಲ.. ಆದ್ರೂ ಉದ್ದಿನಬೇಳೆ ನೀರಿನಲ್ಲಿ ನೆನೆಸಿ ಇಡ್ತೀವಿ..
ಬದುಕಿದ್ರೆ ಇಡ್ಲಿ.. ಇಲ್ಲಾಂದ್ರೆ ವಡೆ..
***
ಗುಂಡ : ಎ, ಬಿ, ಸಿ, ಡಿ ಮಧ್ಯೆ 'ಬಿ'ಗೆ ತುಂಬಾ ಚಳಿ ಆಗುತ್ತೆ..
ತಿಮ್ಮ : ಯಾಕೆ ?
ಗುಂಡ : ಯಾಕೆಂದ್ರೆ ಅದು ಎಸಿ ಮಧ್ಯೆ ಇದೆಯಲ್ವಾ ಅದಕ್ಕೆ! ಹಾಗೆ 'ಸಿ'ಗೆ ತುಂಬಾ ಕೆಮ್ಮು ಬರುತ್ತೆ ಯಾಕೆ ಗೊತ್ತಾ.
ತಿಮ್ಮ : ಗೊತ್ತಾಗ್ಲಿಲ್ಲ, ನೀನೇ ಹೇಳಿ ಬಿಡು.
ಗುಂಡ : ಅದು ಬಿಡಿ ಮಧ್ಯೆ ಇದೆಯಲ್ವಾ?!
***
ಗುಂಡ : ಅಪ್ಪ ಯಾವಾಗ್ಲೂ ಮಹಾ ಮೂರ್ಖನಂತೆ ಪ್ರಶ್ನೆ ಕೇಳ್ತಿರ್ತಾನೆ.
ತಿಮ್ಮ : ಎಂಥ ಪ್ರಶ್ನೆ?
ಗುಂಡ : ನಾನು 'ಹೂಂ' ಅಂತೀನೇನೋ ಅಂತ 'ಯಾಕೋ ಏಟು ಬೇಕೇನೋ?' ಅಂತ ಕೇಳ್ತಿರ್ತಾನೆ!
***
ಸಿಕ್ಕಾಪಟ್ಟೆ ಕುಡಿದಿರುವವನೊಬ್ಬ ಬಸ್ ಸ್ಟ್ಯಾಂಡಿನಲ್ಲಿ ಸುಂದರ ಹುಡುಗಿಯ ಪಕ್ಕ ಅತೀ ಹತ್ತಿರದಲ್ಲಿ ನಿಂತಿರ್ತಾನೆ. ಅವನ ಬಾಯಿಂದ ಬರುವ ವಾಸನೆ, ಹತ್ತಿರವೇ ನಿಂತಿದ್ದನ್ನು ಸಹಿಸಲಾರದೆ ಕುಡುಕನಿಗೆ ಸುಂದರ ಹುಡುಗಿ ಕಪಾಳಕ್ಕೆ ಹೊಡೆಯುತ್ತಾಳೆ.
ಕುಡುಕ : ಕ್ಷಮಿಸಿ, ನೀವು ನನ್ನ ಹೆಂಡತಿಯ ಹಾಗೆಯೇ ಕಾಣ್ತೀರಾ.
ಹುಡುಗಿ ಮತ್ತಷ್ಟು ರೇಗಿ ಬಾಯಿಗೆ ಬಂದಂತೆ ಬೈಯಲು ಪ್ರಾರಂಭಿಸುತ್ತಾಳೆ.
ಕುಡುಕ : ವಾವ್, ನೀವು ನನ್ನ ಹೆಂಡತಿಯ ತರಹಾನೂ ಆಡ್ತೀರಾ!












Click it and Unblock the Notifications