ಮಾನವನಿಗೆ ಕಲಿಯುಗದ ಭಗವಂತ ಪ್ರತ್ಯಕ್ಷನಾದಾಗ!

ಕಲಿಯುಗದಲ್ಲಿ ಭೀಕರ ತಪಸ್ಸು ಮಾಡಿ ಹಾಗೂ ಹೀಗೂ ಒಬ್ಬ ದೇವರನ್ನು ಒಲಿಸಿಕೊಂಡೇಬಿಡುತ್ತಾನೆ. ಭಗವಂತನನ್ನು ಕಂಡು ಕೃತಾರ್ಥನಾದ ಮಾನವ ದೇವನೊಂದಿಗೆ ಮಾತನಾಡಲು ಪ್ರಾರಂಭಿಸುತ್ತಾನೆ.

ಮಾನವ : ದೇವರೇ, ಹತ್ತು ಲಕ್ಷ ವರ್ಷ ನಿನ್ನ ಎಷ್ಟು ಕ್ಷಣಕ್ಕೆ ಸಮ?

ಭಗವಂತ : ಮಗನೆ, ಹತ್ತು ಲಕ್ಷ ನನ್ನ ಒಂದು ನಿಮಿಷಕ್ಕೆ ಸಮ.

ಮಾನವ :
(ಸಂತಸದಿಂದ) ಹತ್ತು ಲಕ್ಷ ರುಪಾಯಿ ನಿನ್ನ ಲೆಕ್ಕದಲ್ಲಿ ಎಷ್ಟು?

ಭಗವಂತ :
ವತ್ಸನೆ, ನಿನ್ನ ಹತ್ತು ಲಕ್ಷ ರುಪಾಯಿ ನನಗೆ ಒಂದು ರುಪಾಯಿಗೆ ಸಮ.

ಮಾನವ : (ಆನಂದತುಂದಿಲನಾಗಿ) ಹಾಗಿದ್ರೆ, ಭಗವಂತ ನಾನು ಜಾಸ್ತಿ ಆಸೆಪಡುವವನಲ್ಲ. ನಿನ್ನ ಬಳಿಯಿರುವ ಒಂದೇ ಒಂದು ರುಪಾಯಿ ಕೊಡು ಸಾಕು.

ಭಗವಂತ : ಹಾಗೇ ಆಗಲಿ, ತಾಳು ವತ್ಸನೆ ಒಂದೇ ನಿಮಿಷದಲ್ಲಿ ಬಂದು ಬಿಡುತ್ತೇನೆ (ಅಂತ ಅಂತರ್ಧಾನನಾಗಿಬಿಡುತ್ತಾನೆ)!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+