ಯಾರಿಗೆ ಸೇರಬೇಕು ಈ ಹತ್ತು ರುಪಾಯಿ!

ಟೀಚರ್ : ಏಯ್ ಏಯ್ ನಿಲ್ಲಿಸ್ರೋ ಸಾಕು. ಯಾಕೆ ಕಿತ್ತಾಡ್ತಾ ಇದ್ದೀರಾ?
ಪೆದ್ದ : ಮೇಡಂ, ಇಬ್ಬರಿಗೂ ಹತ್ತು ರುಪಾಯಿ ಸಿಕ್ಕಿತು. ಯಾರು ಬ್ರಹ್ಮಾಂಡದಂಥ ಸುಳ್ಳು ಹೇಳ್ತಾರೆ ಅವರಿಗೆ ಈ ಹತ್ತು ರುಪಾಯಿ ಅಂತ ಹೇಳ್ದೆ.
ಗುಂಡ : ಅದಕ್ಕೆ, ಅವ್ನು ಹೇಳ್ತಾನಂತ ಅವನು..., ನಾನು ಹೇಳ್ತೀನಂತ ನಾನು... ಜಗಳ ಶುರುವಾಯಿತು.
ಟೀಚರ್ : ಥೂ, ನಾಚಿಕೆಯಾಗಲ್ವಾ ನಿಮಗಿಬ್ಬರಿಗೂ. ನಿಮ್ಮಷ್ಟು ವಯಸ್ಸಿದ್ದಾಗ ನನಗೆ ಸುಳ್ಳು ಅಂದರೇನೇ ಗೊತ್ತಿರಲಿಲ್ಲ ಗೊತ್ತಾ?
ಪೆದ್ದ ಮತ್ತು ಗುಂಡ : ಹಾಗಾದರೆ ಈ ಹತ್ತು ರುಪಾಯಿ ನಿಮಗೇ ಸೇರಬೇಕು ಮೇಡಂ!
***
ಗಂಡ ಟಿವಿ ನೋಡುತ್ತಾ ಅಳುತ್ತಿದ್ದ...
ಹೆಂಡತಿ : ಯಾಕ್ರೀ ಅಳುತ್ತಿದ್ದೀರಾ?
ಗಂಡ : ಪಾಪ ಕಣೇ ಅವನ ಜೀವನ ಹಾಳಾಗಿ ಹೋಯಿತು..
ಹೆಂಡತಿ : ಯಾವ ಧಾರಾವಾಹಿಯಲ್ಲಿ..?
ಗಂಡ : ಅದು ಧಾರಾವಾಹಿಯಲ್ಲ.. ನಮ್ಮ ಮದುವೆ ಸಿಡಿ!
***
ಕೆಲ ಗಂಡಂದಿರು ಮಾಲ್ ಸುತ್ತುತ್ತಿರುವಾಗ ಹೆಂಡತಿಯ ಕೈ ಹಿಡಿದುಕೊಂಡೇ ಹೋಗುತ್ತಾರೆ..
ಯಾಕೆಂದ್ರೆ, ಆಕೆ ಶಾಪಿಂಗ್ ಹೋಗದಿರಲೆಂದು.
ಮಾಲ್ ನಲ್ಲಿ ಕೈಕೈ ಹಿಡಿದುಕೊಂಡು ಹೋಗುವಾಗ ಅದು ರೊಮ್ಯಾಂಟಿಕ್ ಆಗಿ ಇರುತ್ತೆ, ಎಕಾನಾಮಿಕ್ ಕೂಡಾ.. ಅಲ್ವೇ?
***
ಅಕ್ಕರೆಯ ನಗು ಚಂದ, ಸಕ್ಕರೆಯ ಸಿಹಿ ಚಂದ..
ನಕ್ಕು ನಗಿಸುವ ನಿಮ್ಮ ಮುಖ ಚಂದ.. ನಿಮ್ಮ ತರಾನೆ ಆ
...ನಿತ್ಯಾನಂದ
***
ಗುಂಡನ ಪ್ರಕಾರ ನೈಟಿ ಮತ್ತು ನೈಂಟಿಗಿರುವ ವ್ಯತ್ಯಾಸ
ನಮ್ಮ ದೇಶದ ಹುಡುಗೀರು ರಾತ್ರಿ ಬೆಚ್ಚಗಾಗಿರಲು ಹಾಕುತ್ತಾರೆ ನೈಟಿ
ಅದೇ ನಮ್ಮ ದೇಶದ ಹುಡುಗರು ರಾತ್ರಿ ಬೆಚ್ಚಗಾಗಿರಲು ಹಾಕುತ್ತಾರೆ ನೈಂಟಿ!
***
ಹೀಗೊಂದು ಎಸ್ಎಂಎಸ್
ಇಷ್ಟು ದಿನ ನನಗೆ ನಿಮ್ಮ ಹೊಟೆ ಇರೋಕೆ ಬಿಟ್ಟಿದ್ದಕ್ಕೆ ಥ್ಯಾಂಕ್ಸ್. ನನ್ನಿಂದ ನಿಮಗೆ ಬೇಜಾರು ಏನಾದ್ರೂ ಆಗಿದ್ದರೆ ಸಾರಿ..
ಇನ್ನು ನಾನು ಕೇವಲ 10 ದಿನ ಮಾತ್ರ ಭೂಮಿಯಲ್ಲಿ ಇರೋದು. ಆಮೇಲೆ ನಿಮಗೆ ನಾನು ಯಾವತ್ತೂ ಸಿಗೋಲ್ಲಾ..
ಪ್ಲೀಸ್.. ನನಗಾಗಿ ಬೀಳ್ಕೊಡಿ..
ಇಂತಿ ನಿನ್ನ ಪ್ರೀತಿಯ - 2010 [ಇನ್ನಷ್ಟು ಕನ್ನಡ ನಗೆಹನಿಗಳು]












Click it and Unblock the Notifications