ಗರ್ಲ್ ಫ್ರೆಂಡ್ ಅಂದ್ರೆ ಏನು ಹೇಳು ಗೆಳೆಯಾ?

ಮಜ್ನೂ : ತೊಂದರೆಗಳ ಕೂಡಿಕೆ, ಹಣದ ಕಳಿಕೆ, ವೈರಿಗಳ ಗುಣಾಕಾರ ಮತ್ತು ಗೆಳೆಯರ ಭಾಗಾಕಾರ!
***
ಮೇಷ್ಟ್ರ ಮಗ ದಡ್ಡ, ಡಾಕ್ಟರ್ ಮಗ ರೋಗಿ..
ಪೋಲೀಸ್ ಮಗ ಕಳ್ಳ, ಲಾಯರ್ ಮಗ ಅಪರಾಧಿ..
ಹಾಗಾದರೆ ಪತ್ರಕರ್ತನ ಮಗ ಏನು?
....ರಾಜಕಾರಿಣಿ!
***
ಬಾಸ್ : ಗುಂಡ ನೀನು ಎಲ್ಲಿ ಹುಟ್ಟಿದ್ದು?
ಗುಂಡ : ಭಾರತದಲ್ಲಿ..
ಬಾಸ್ : ಅದೇ ಭಾರತದ ಯಾವ ಭಾಗದಲ್ಲಿ?
***
ಮೇಷ್ಟ್ರು : ಲೇ ಗುಂಡ.. ನಿನ್ನ ಅಪ್ಪನಿಗೆ ಎಷ್ಟೋ ವಯಸ್ಸು?
ಗುಂಡ : ನನ್ನಷ್ಟೇ ಸಾರ್..
ಮೇಷ್ಟ್ರು : ಅದು ಹೇಗೋ ಸಾಧ್ಯಾ..
ಗುಂಡ : ನಾನು ಹುಟ್ಟಿದ ಮೇಲೆ ತಾನೇ ಅವರು ಅಪ್ಪ ಆಗಿದ್ದು..
***
ಗುಂಡ : ಓದುವ ಆಸೆಯಿಂದ ಬೇಗ ಎದ್ದೆ ಕಣೋ..
ತಿಮ್ಮ : ಹಾಗಾದ್ರೆ ಬೆಳಗ್ಗೆ ಚೆನ್ನಾಗಿ ಓದಿರಬೇಕು..
ಗುಂಡ : ಇಲ್ಲಾ ಕಣೋ, ಆಸೆಯೇ ದುಃಖಕ್ಕೆ ಕಾರಣ ಎಂದು ಮತ್ತೆ ಮಲಗಿಬಿಟ್ಟೆ!
***
ಅಮೆರಿಕಾದಲ್ಲಿ ಕರೆಂಟ್ ಹೋದರೆ ಪವರ್ ಕಚೇರಿಗೆ ಕಾಲ್ ಮಾಡುತ್ತಾರೆ..
ಜಪಾನ್ ನಲ್ಲಿ ಕರೆಂಟ್ ಹೋದರೆ ಪ್ರಾಬ್ಲಂ ಏನೂಂತ ವಿಚಾರಿಸ್ತಾರೆ..
ಅದೇ ನಮ್ಮ ದೇಶದಲ್ಲಿ ಕರೆಂಟ್ ಹೋದರೆ .. ಪಕ್ಕದ ಮನೆಯಲ್ಲಿ ಕರೆಂಟ್ ಇದೆಯಾಂತ ಮೊದಲು ನೋಡುತ್ತಾರೆ.












Click it and Unblock the Notifications