ಸುಬ್ಬನ ಶ್ರದ್ಧೆಯನ್ನು ನೋಡಿ ಬೇಸ್ತು ಬಿದ್ದ ಬಾಸ್!

Jokes for the day
ಸುಬ್ಬನಿಗೆ ಕೆಲಸ ಸಿಕ್ಕು, ಮೊದಲ ದಿನವೇ ಎಲ್ಲರೂ ಮನೆಗೆ ತೆರಳಿದರೂ ಇನ್ನೂ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿರುತ್ತಾನೆ. ಎಲ್ಲರೂ ಹೋದರೂ ಇನ್ನೂ ಕೆಲಸ ಮಾಡುತ್ತಿದ್ದುದನ್ನು ಗಮನಿಸಿದ ಬಾಸ್, ಯಾಕೆ ಸುಬ್ಬು ಮನೆಗೆ ಹೋಗಲ್ವೆ? ನಿನ್ನ ಶ್ರದ್ಧೆಯಿಂದ ತುಂಬ ಸಂತಸವಾಗುತ್ತಿದೆ ಅನ್ನುತ್ತಾರೆ.

ಅದಕ್ಕೆ ಸುಬ್ಬ, ಕಂಪ್ಯೂಟರ್ ಕೀಬೋರ್ಡಲ್ಲಿ ಎಲ್ಲ ಲೆಟರುಗಳು ಹಿಂದೆ ಮುಂದೆ ಆಗಿದ್ದವು. ಅವನ್ನು ಆರ್ಡರಲ್ಲಿ ಇರಲು ಇಷ್ಟೊತ್ತು ಬೇಕಾಯಿತು ಅಂದಾಗ ಬಾಸ್ ತಲೆತಿರುಗಿ ಬಿದ್ದಿದ್ದ.

***

ಮೈಲಾರಿಗೊಂದು ಹಿಂದಿನ ದಿನ ರಾತ್ರಿ ಕೆಟ್ಟ ಕನಸೊಂದು ಬಿದ್ದಿತ್ತು. ಕನಸಿನಲ್ಲಿ ಯಾರೋ ಕೊಲ್ಲಲು ಬಂದ ಹಾಗೆ ಕನಸು ಬಿದ್ದು ಬೆಚ್ಚಿ ಬಿದ್ದಿದ್ದ. ಬೆಳಗಾದ ಕೂಡಲೆ ತನ್ನ ಖಾತೆಯಿದ್ದ ಬ್ಯಾಂಕಿಗೆ ಹೋಗಿ ಖಾತೆಯನ್ನು ಮುಚ್ಚಿಸಿಬಿಟ್ಟ. ಯಾಕೆಂದರೆ, ಬ್ಯಾಂಕಿನ ಸ್ಲೋಗನ್ನಿನಲ್ಲಿ, "ನಿಮ್ಮ ಕನಸನ್ನು ನನಸು ಮಾಡುವುದೇ ನಮ್ಮ ಗುರಿ" ಎಂದು ನಮೂದಿಸಲಾಗಿತ್ತು!

***

ಚಿಮ್ಮಣ್ಣ ಟಿಪ್ ಟಾಪ್ ಆಗಿ ಟೈ ಹಾಕಿಕೊಂಡು ಒಂದು ಸಂದರ್ಶನಕ್ಕೆ ಹೋಗಿರುತ್ತಾನೆ.
ಸಂದರ್ಶಕ : ಚಿಮ್ಮಣ್ಣ ಅವರೆ, ನಿಮ್ಮ ಹೆಸರೇ ಮಜವಾಗಿದೆ, ಆದರೆ ಚೆನ್ನಾಗಿದೆ.
ಚಿಮ್ಮಣ್ಣ : ಥ್ಯಾಂಕ್ಯೂ ಸರ್.
ಸಂದರ್ಶಕ : ಈಗ ಹೇಳಿ, ನೂರು ಲೆಟರ್ ಗಳಿರುವಂಥಾ ಒಂದು ಪದ ಹೇಳ್ತೀರಾ?
ಚಿಮ್ಮಣ್ಣ : ಪೋಸ್ಟ್ ಬಾಕ್ಸ್!

***

ಕಳ್ಳನೊಬ್ಬ ಮತ್ತೆ ಪೊಲೀಸರಿಗೆ ಸಕ್ಕಿಹಾಕಿಕೊಂಡು ನ್ಯಾಯಾಧೀಶರ ಮುಂದೆ ನಿಂತಿರುತ್ತಾನೆ.
ನ್ಯಾಯಾಧೀಶ : ನಿನ್ನನ್ನು ಮತ್ತೆ ನ್ಯಾಯಾಲಯದಲ್ಲಿ ನೋಡುವಂಥ ಅವಕಾಶ ನೀಡಬೇಡ ಎಂದು ಕಳೆದ ಬಾರಿ ಹೇಳಿದಂತೆ ನೆನಪು.
ಕಳ್ಳ : ಎಂಥ ನೆನಪಿನ ಶಕ್ತಿ ಸಾರ್ ನಿಮ್ಮದು. ನಿಜ ಸಾರ್ ನೀವು ಹೇಳಿದ್ದು. ಅದನ್ನೇ ಪೊಲೀಸರಿಗೂ ಹೇಳಿದೆ, ಆದರೆ ಅವರು ಮಾತ್ರ ನನ್ನ ಮಾತು ಕೇಳಲಿಲ್ಲ!

***

ಗುಂಡಣ್ಣ : ಲೇ ಸುಬ್ಬಣ್ಣ, ನಿನ್ನೆಯಿಂದ ಇಪ್ಪತ್ನಾಕು ಬಾರಿ ನಿನ್ನ ಮೊಬೈಲಿಗೆ ಫೋನ್ ಮಾಡಿದೆ ಗೊತ್ತಾ?
ಸುಬ್ಬಣ್ಣ : ಸಾರಿ ಕಣಲೇ ಗುಂಡಣ್ಣ, ಗೊತ್ತೇ ಆಗಲಿಲ್ಲ.
ಗುಂಡಣ್ಣ : ಆದರೆ ಪ್ರತಿ ಬಾರಿ ನಿಮ್ಮ ಮೊಬೈಲಲ್ಲಿ ಕರೆನ್ಸಿ ಇಲ್ಲ ಅಂತಾನೇ ಬರ್ತಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+