ಅವ್ಳೇ ನನ್ನ ಭಿಕ್ಷುಕನನ್ನಾಗಿ ಮಾಡ್ಬಿಟ್ಳು!

ಯುವಪ್ರೇಮಿ : ತಗೊಳಪ್ಪ, ಈ ಭಿಕ್ಷುಕ ಗರ್ಲ್ ಫ್ರೆಂಡ್ ಮಡ್ಕೊಂಡವ್ನೇ!
ಭಿಕ್ಷುಕ : ಇಲ್ಲಾ ನಾನು ಗರ್ಲ್ ಫ್ರೆಂಡ್ ಮಡ್ಕೊಂಡಿಲ್ಲಾ, ಅವ್ಳೇ ನನ್ನ ಭಿಕ್ಷುಕನನ್ನಾಗಿ ಮಾಡ್ಬಿಟ್ಳು!
***
ದೋಸ್ತ್ 1 : ತೀರ್ಥಯಾತ್ರೆಗೆ ಹೊಂಟೀನಿ ಹೆಂಡ್ತೀನಾ ಕರ್ಕೊಂಡು ರೈಲಾಗೆ, ಹೆಂಡ್ತೀನಾ ಕರ್ಕೊಂಡು ತಿಳಿತೆನ್ಲಾ.. ಹೋಗ್ತಾ.. ಹೋಗ್ತಾ.. ರೈಲಿಂದ ಆಕೆನಾ.. ದಬ್ಬಿ ಬಿಡೋಣಾಂತಿದಿನೀ.. ಎನಂತಿಯಾ...?
ದೋಸ್ತ್ 2 : ಚಲೋ ಐಡಿಯಾಲೇ.. ತಮ್ಮಾ, ಅಂಗೇ ನನ್ ಹೇಂಡ್ತೀನಾ ಕರ್ಕೊಂಡು.. ಅಂಗೆ ದಬ್ಬಿ ಬಿಡ್ಲೇ..
ದೋಸ್ತ್ 1 : ಆತು ಬಿಡು, ಕಳ್ಸು ನಮ್ ಜೊತೆ, ತಿಳ್ಕೋ ನಿನ್ ಹೆಂಡ್ತೀನಾ ವಾಪಸ್ ಬರೋವಾಗ ಕೆಳ್ಗೆ ತಳ್ತೀನಿ, ಬರಾಬರ್ ಎನೋ..
ದೋಸ್ತ್ 2 : ಶಾಣೆ ನನ್ಮಗ ಕಣ್ಲೇ ನೀನು..
***
ಮಾಸ್ತರ್ : ಲೇ ಗುಂಡಾ.. ರಬ್ಬರ್ ಎಳದಷ್ಟು ಉದ್ದ ಆಗುತ್ತೆ, ಪೇಪರ್ ಹರದಷ್ಟು ಹರಿತದೆ, ಆದರೆ ಖಾಕಿ ಬಿಳಿ ಪೇಪರ್ ಎಳೆದಷ್ಟು ಗಿಡ್ಡಾಗುತ್ತೆ, ಯಾವುದು ಆ ವಸ್ತು?
ಗುಂಡ : ಆ.. ಆ.. ಅದು ಬೀಡಿ ಸಾರ್ ...
ಮಾಸ್ತರ್ : ಆಹಾ.. ಶಿವಾ ಏನ್ ತಲೆಲೇ ನಿಂದು, ಭವಿಷ್ಯ ಐತ್ಲೇ ನಿಂಗೇ.
***
ಬ್ಯಾಂಕ್ನಾಗೆ ಸಾಲ ಮಾಡಿ ಗುಂಡ ಒಂದು ಕಾರ್ ಖರೀದಿಸಿದ. ಆದರೆ ಸಾಲ ಮಾಡಿದ ಮೇಲೆ ಬ್ಯಾಂಕ್ ಗೆ ರೊಕ್ಕ ಕಟ್ಲಿಲ್ಲ. ಹಾಗಾಗಿ ಬ್ಯಾಂಕ್ನೋರು ಬಂದು ಕಾರ್ ಎತ್ಕೊಂಡು ಹೋಗ್ಬಿಟ್ರು. ದುಃಖತಪ್ತನಾದ ಗುಂಡ ಅಳುತಾ ಬ್ಯಾಂಕ್ ನವರಿಗೆ ಹೇಳ್ದ, ನೀವು ಇಂಗೆನ್ತಾ ಮೊದ್ಲೇ ಹೇಳ್ಬಾರ್ದೇ, ಸಾಲ ಮಾಡಿ ಮದುವೆ ಆಗ್ತಿದ್ದೆ.












Click it and Unblock the Notifications