ಭಯಾನಕ ಹಾಗೂ ಸೌಂದರ್ಯದ ನಡುವಿನ ವ್ಯತ್ಯಾಸ?

ಒಂದು ಸುಂದರವಾದ ರಾತ್ರಿಯಲ್ಲಿ ನೀವು ನಿಮ್ಮ ಟೆಡ್ಡಿ ಬೇರ್ ತಬ್ಬಿಕೊಂಡಾಗ ಅದು ಸೌಂದರ್ಯ...

ಮತ್ತು

ಟೆಡ್ಡಿ ಬೇರ್ ನಿಮ್ಮನ್ನು ಮರಳಿ ತಬ್ಬಿಕೊಂಡಾಗ ಅದು ಭಯಾನಕ...!

***

ಗಂಡನನ್ನೂ ಒಳಗೆ ಕರೀರಿ

ತೀವ್ರ ಹೊಟ್ಟೆ ನೋವು ಅನುಭವಿಸುತ್ತಿದ್ದ ಮಹಿಳೆಯೊಬ್ಬಳು ಗಂಡನ ಜೊತೆ ವೈದ್ಯೆಯ ಬಳಿ ಬರುತ್ತಾಳೆ.

ವೈದ್ಯೆಯನ್ನುದ್ದೇಶಿಸಿ, "ಡಾಕ್ಟ್ರೆ, ದಯವಿಟ್ಟು ನನ್ನ ಗಂಡನನ್ನೂ ಒಳಗೆ ಕರೀರಿ."

ವೈದ್ಯೆ, "ಹೊಟ್ಟೆ ನೋವಿರೋದು ನಿಮಗೆ, ಗಂಡ ಯಾಕೆ?"

"ಹೊರಗಡೆ ನರ್ಸ್ ಒಬ್ಬಳೇ ಇದ್ದಾಳೆ, ಅದಕ್ಕೆ!"

***

ತಲೆಗಿಲೆ ಕೆಟ್ಟಿದೆಯಾ?

ಪಟ್ಟಾಪಟ್ಟಿ ಒಳಚಡ್ಡಿಯನ್ನು ಮಾತ್ರ ಧರಿಸಿದ ಮಧ್ಯವಯಸ್ಕನೊಬ್ಬ ನೇರವಾಗಿ ಮಾನಸಿಕತಜ್ಞನ ಬಳಿ ಬರುತ್ತಾನೆ. ಅದನ್ನು ಕಂಡು ಹೌಹಾರಿದ ಸೈಕಿಯಾಟ್ರಿಸ್ಟ್ ಕಿರಿಚುತ್ತಾನೆ, "ಏ, ಯಾಕೆ ಹೀಗೆ ಬಂದಿದ್ದೀಯಾ? ತಲೆಗಿಲೆ ಕೆಟ್ಟಿದೆಯಾ?"

***

ಪಾಸ್ ಇದ್ರೆ ತಾನೆ?

ಕಂಡಕ್ಟರ್ : ರೀ ಸ್ವಾಮಿ, ದಿನಾ ಪಾಸ್ ಪಾಸ್ ಅಂತಿದ್ದೋರು, ಟಿಕೆಟ್ ಚೆಕ್ಕಿಂಗಿಗೆ ಬಂದಾಗ ಯಾಕೆ ಪಾಸ್ ಅವರಿಗೆ ತೋರಿಸಲಿಲ್ಲ. ಸುಮ್ಮನೆ ಹಾಗೇ ನಿಂತಿದ್ದಿರಲ್ರೀ. ನೋಡಿ, ಇಬ್ಬರೂ ಫೈನ್ ಹಾಕಿದ್ರೂ.

ಪ್ರಯಾಣಿಕ : ಅಯ್ಯೋ, ಪಾಸ್ ಇದ್ರೆ ತಾನೆ ತೋರಿಸೋದು!

ಓದುಗರಲ್ಲಿ ವಿನಂತಿ : ಓದುತ್ತಿದ್ದಂತೆ ಕಚಗುಳಿ ಇಡುವ, ನಗುವವರಿದ್ದರೆ ಗಹಗಹಿಸಿ ನಗಿಸುವ, ನಗಲೇಬಾರದೆನ್ನುವವರೂ ಮುಗುಳ್ನಗುವ ಜೋಕುಗಳ ಸರಮಾಲೆ ಇದ್ದರೆ ನಮಗೆ ಕಳಿಸಿ. ನಾವೂ ನಗೋಣ, ಓದುಗರನ್ನೂ ನಗಿಸೋಣ. ನಮ್ಮ ವಿಳಾಸ : [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+