ಪ್ರೀತಿ ವಾತ್ಸಲ್ಯದ ನಡುವಿನ ವ್ಯತ್ಯಾಸವೇನು?

Kannada jokes : Difference between Love and Affection
ಕನ್ನಡ ಪಾಠ ಮಾಡ್ತಾ ಇದ್ದ ಮೇಷ್ಟ್ರು ಪ್ರೀತಿ ಮತ್ತು ವಾತ್ಸಲ್ಯದ ನಡುವೆ ಇರುವ ವ್ಯತ್ಯಾಸ ಏನು? ಅಂತ ಕೇಳಿದ್ರು.

ತಟ್ಟನೆ ಎದ್ದು ನಿಂತ ಮದನ ಉತ್ತರ ಕೊಟ್ಟ.. ಸಾರ್‌ ನೀವು ನಿಮ್ಮ ಮಗಳು ವತ್ಸಲನ್ನ ವತ್ಸೀ ಅಂದ್ರೆ ಅದು ವಾತ್ಸಲ್ಯ, ಅದೇ ನಾನು ವತ್ಸೀ.... ಅಂದ್ರೆ ಅದು ಪ್ರೀತಿ.

***

ಪಾಪರ್ ಆದ್ರಿ ಅಂತ ಕೇಳಿದ್ದೆ, ಆದ್ರೆ...

ತಿಮ್ಮಣ್ಣ : ನಮಸ್ಕಾರ ಗುಂಡಣ್ಣ ಅವರಿಗೆ. ಎರಡು ತಿಂಗಳ ಹಿಂದೆ ಹಣಕಾಸು ವ್ಯವಹಾರ ಮಾಡಲು ಹೋಗಿ ಎಲ್ಲಾ ಕಳಕೊಂಡು ಪಾಪರ್ ಆದ್ರಿ ಅಂತ ಕೇಳಿದ್ದೆ. ಈಗ ನೋಡಿದ್ರೆ ಫೋರ್ಡಲ್ಲಿ ಓಡಾಡ್ತಾ ಇದ್ದೀರಲ್ಲಾ? ಕಳೆದುಕೊಂಡ ಹಣವೆಲ್ಲಾ ಬಂತಾ?

ಗುಂಡಣ್ಣ : ಎಲ್ಲಿ ಬರತ್ತೆ? ಸಾಲ ಕೇಳಲು ಹೋದೋರೆಲ್ಲಾ ಹಂಗಾಯ್ತು ಹಿಂಗಾಯ್ತು ಅಂತ ಕಲರ್ ಕಲರ್ ಕಥೆ ಹೇಳಿ ಮುಳುಗಿಸಿಬಿಟ್ರು. ಆದ್ರೆ, ಅವರ ಅದೇ ಕಲರ್ ಕಲರ್ ಕಥೇನ ಬರೆದಿಟ್ಟು ಪ್ರೊಡ್ಯೂಸರ್ ಕೈಗಿಟ್ಟು ಸಿನೆಮಾ ಮಾಡಿದೆ. ಸೂಪರ್ ಹಿಟ್. ಈಗ ಕೋಟ್ಯಾಧೀಶನಾಗಿದ್ದೀನಿ!

***

ಕಾಫಿ ಕೊಡೇ ತನಕ ಎದ್ದು ಹೋಗಲ್ಲ!

ಒಮ್ಮೆ ಕನ್ನಡದ ಹೆಸರಾಂತ ಹಾಸ್ಯ ಸಾಹಿತಿ ಒಬ್ಬರು, ತಮ್ಮ ಜಿಪುಣಾಗ್ರೇಸರ ಮಿತ್ರನ ಮನೆಗೆ ಹೋಗಿದ್ದರು. ಅರ್ಧಗಂಟೆ ಕಳೆದ ಬಳಿಕ ಜಿಪುಣ ಮಿತ್ರ ಫಾರ್ಮಾಲಿಟಿ ಸೇಕ್‌ ಕೇಳಿದ 'ಏನು ಸ್ವಾಮಿ ಕಾಫಿ ಕುಡಿತೀರಾ"?

ಹಾಸ್ಯ ಸಾಹಿತಿ ತಟ್ಟನೆ ಉತ್ತರ ಕೊಟ್ಟರು : ಕಾಫಿ ಕೊಟ್ರೆ ಬೇಡ ಅನ್ನಲ್ಲ.. ಕೊಟ್ಟ ಮೇಲೆ ಕುಡೀದೇ ಇರಲ್ಲ.. ಯಾವುದೇ ಕಾರಣಕ್ಕೂ ಕಾಫಿ ಕೊಡೋ ತನಕ ಎದ್ದು ಹೋಗಲ್ಲ...

***

ಹಾಗಾದರೆ ಇದೇನಿದು?

ಜೆ.ಹೆಚ್. ಪಟೇಲರು ಇದನ್ನು ಯಾವತ್ತೂ ಬಳಸುತ್ತಿದ್ದರು. ಜಯಲಲಿತಾಗೆ ಇದು ಇಲ್ಲವೇ ಇಲ್ಲ. ಸಿದ್ಧಲಿಂಗ ಪಟ್ಟಣಶೆಟ್ಟಿಯವರಿಗೆ ಇದು ತುಂಬಾ ಉದ್ದ. ಪ್ರಕಾಶ್ ರೈಗೆ ಇದು ಬಹಳ ಚಿಕ್ಕದು. ಸ್ವಾಮಿಗಳು ಇದನ್ನು ಬಳಸೋದೇ ಇಲ್ಲ.

ಹಾಗಾದರೆ ಇದೇನಿದು?

ಅಡ್ಡ ಹೆಸರು!!!

***

ಭಾರತೀಯ ದೇವ, ದೇವತೆಗಳ ಐಟಿ ಪ್ರೊಫೈಲ್!

ಬ್ರಹ್ಮ : ಸಿಸ್ಟಂ ಇನ್‌ಸ್ಟಾಲರ್

ವಿಷ್ಣು : ಸಿಸ್ಟಂ ಸಪೋರ್ಟರ್

ಶಿವ : ಕ್ರ್ಯಾಕ್ ಸ್ಪೆಷಲಿಸ್ಟ್

ಅಪ್ಸರಾ : ಡೌನ್ ಲೋಡೆಬಲ್ ವೈರಸ್

ರಾಕ್ಷಸರು : ಹ್ಯಾಕರ್ಸ್

ಹಸ್ತಿನಾಪುರ : ಸಿಲಿಕಾನ್ ವ್ಯಾಲಿ

ಭೀಮ : ಮೇನ್ ಫ್ರೇಂ

ಶಕುನಿ : ಬಿಲ್‌ಗೇಟ್ಸ್

ಓದುಗರಲ್ಲಿ ವಿನಂತಿ : ಓದುತ್ತಿದ್ದಂತೆ ಕಚಗುಳಿ ಇಡುವ, ನಗುವವರಿದ್ದರೆ ಗಹಗಹಿಸಿ ನಗಿಸುವ, ನಗಲೇಬಾರದೆನ್ನುವವರೂ ಮುಗುಳ್ನಗುವ ಜೋಕುಗಳ ಸರಮಾಲೆ ಇದ್ದರೆ ನಮಗೆ ಕಳಿಸಿ. ನಾವೂ ನಗೋಣ, ಓದುಗರನ್ನೂ ನಗಿಸೋಣ. ನಮ್ಮ ವಿಳಾಸ : [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+