Job Cut: ಕಳೆದ ವಾರ ಅತಿಹೆಚ್ಚು ಎಂಜಿನಿಯರ್‌ಗಳನ್ನು ವಜಾಗೊಳಿಸಿದ ದೈತ್ಯ ಸಂಸ್ಥೆ

ನವದೆಹಲಿ, ಡಿಸೆಂಬರ್ 19: "ನಮ್ಮ ಕಂಪನಿಗೆ ಇನ್ನು ಮುಂದೆ ನಿಮ್ಮ ಅವಶ್ಯಕತೆಯಿಲ್ಲ," ಕಳೆದ ವಾರ ಟ್ವಿಟ್ಟರ್ ಕಂಪನಿಯಲ್ಲಿ ಕೆಲಸ ಮಾಡುವ ಅತಿಹೆಚ್ಚು ಎಂಜಿನಿಯರ್‌ಗಳಿಗೆ ಇಂಥದೊಂದು ಈ-ಮೇಲ್ ಸಂದೇಶ ಹೋಗಿ ಮುಟ್ಟಿತ್ತು.

ಜಾಗತಿಕ ಮಟ್ಟದ ಟೆಕ್ ಉದ್ಯಮದಲ್ಲಿ ಈಗಾಗಲೇ ಸೃಷ್ಟಿಯಾಗಿರುವ ವಿನಾಶದ ನಡುವೆಯೇ ಎಲೋನ್ ಮಸ್ಕ್ ಒಡೆತನದ ಟ್ವಿಟರ್ ಕಳೆದ ವಾರ ಹೆಚ್ಚಿನ ಉದ್ಯೋಗಿಗಳನ್ನು ವಜಾ ಮಾಡಿದೆ ಎಂದು ವರದಿಯಾಗಿದೆ.

ಕಳೆದ ಶುಕ್ರವಾರದಂದು, ಮೈಕ್ರೋ-ಬ್ಲಾಗಿಂಗ್ ಸೈಟ್ ತನ್ನ ಮೂಲಸೌಕರ್ಯ ವಿಭಾಗದಿಂದ ಎಂಜಿನಿಯರ್‌ಗಳನ್ನು ವಜಾ ಮಾಡಿದೆ. ತಮ್ಮ ಕೆಲಸವನ್ನು ಕಳೆದುಕೊಂಡ ಎಂಜಿನಿಯರ್‌ಗಳು ಕಂಪನಿಯಲ್ಲಿ ತಮ್ಮ ಪಾತ್ರವು ಇನ್ನು ಮುಂದೆ ಅಗತ್ಯವಿಲ್ಲ ಎಂದು ತಿಳಿಸುವ ಇಮೇಲ್ ಅನ್ನು ಸ್ವೀಕರಿಸಿದ್ದಾರೆ. ಆದಾಗ್ಯೂ, ವಜಾಗೊಳಿಸಲಾದ ಒಟ್ಟು ಉದ್ಯೋಗಿಗಳ ಸಂಖ್ಯೆ ಎಷ್ಟು ಎಂಬುದರ ಬಗ್ಗೆ ಇನ್ನೂ ಖಚಿತವಾಗಿಲ್ಲ.

Your role is no longer required in our company; Twitter Sacked More Engineers

ಟ್ವಿಟರ್ ಮೂಲಸೌಕರ್ಯ ಮುಖ್ಯಸ್ಥ ವಜಾ:

ಟ್ವಿಟರ್ ಕಂಪನಿಯ ಇತರ ಹಿರಿಯ ಉದ್ಯೋಗಿಗಳೊಂದಿಗೆ ಟ್ವಿಟರ್ ಮೂಲಸೌಕರ್ಯ ಮುಖ್ಯಸ್ಥ ನೆಲ್ಸನ್ ಅಬ್ರಾಮ್ಸನ್ ಅವರನ್ನು ಟ್ವಿಟರ್ ವಜಾಗೊಳಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತು. ಇದೇ ವೇಳೆ ಜಾಗತಿಕ ಮಾಹಿತಿ ತಂತ್ರಜ್ಞಾನ ಮುಖ್ಯಸ್ಥ ಮತ್ತು ಮಾಹಿತಿ ಭದ್ರತೆಯ ಉಪಾಧ್ಯಕ್ಷ ಅಲನ್ ರೋಸಾ ಅವರನ್ನೂ ವಜಾಗೊಳಿಸಲಾಗಿತ್ತು.

ನಾನು ಟ್ವಿಟರ್‌ನ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ?:

ಈ ವಜಾಗೊಳಿಸುವುದಕ್ಕೂ ಮುನ್ನ ದಿನ, ಮಸ್ಕ್ ಅವರು ಟ್ವಿಟರ್ ಸಿಇಒ ಸ್ಥಾನದಿಂದ ಕೆಳಗಿಳಿಯಬೇಕೇ ಎಂದು ಪ್ರಶ್ನಿಸುವ ಟ್ವಿಟರ್ ಸಮೀಕ್ಷೆಯನ್ನು ಪ್ರಾರಂಭಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಸ್ಕ್, "ನಾನು ಟ್ವಿಟರ್‌ನ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ? ಈ ಸಮೀಕ್ಷೆಯ ಫಲಿತಾಂಶಗಳಿಗೆ ನಾನು ಬದ್ಧನಾಗಿರುತ್ತೇನೆ ಎಂದು ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡರು.

Your role is no longer required in our company; Twitter Sacked More Engineers

ಇದಲ್ಲದೆ, ಟ್ವಿಟರ್ ಮುಖ್ಯಸ್ಥರು ಟ್ವಿಟರ್‌ಗಾಗಿ ಯೋಜಿಸಲಾದ ಬಹುಪಾಲು ನೀತಿ ಬದಲಾವಣೆಗಳಿಗೆ ಮತವನ್ನು ತೆಗೆದುಕೊಳ್ಳುವುದಾಗಿ ಘೋಷಿಸಿದರು. "ಮುಂದಕ್ಕೆ, ಪ್ರಮುಖ ನೀತಿ ಬದಲಾವಣೆಗಳಿಗೆ ಮತದಾನ ನಡೆಯಲಿದೆ. ನಾನು ಕ್ಷಮೆಯಾಚಿಸುತ್ತೇನೆ, ಈ ರೀತಿ ಮತ್ತೆ ಆಗುವುದಿಲ್ಲ, " ಎಂದು ಎಲೋನ್ ಮಸ್ಕ್ ತಮ್ಮ ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+