YES Bank Jobs 2023: ಹಲವಾರು ಬ್ಯಾಂಕಿಂಗ್ ಹುದ್ದೆಗಳು ಖಾಲಿ ಇವೆ, ಪೂರ್ಣ ಮಾಹಿತಿ
ಬೆಂಗಳೂರು, ಅಕ್ಟೋಬರ್ 15: ಖಾಸಗಿ ವಲಯದ ಬ್ಯಾಂಕುಗಳಲ್ಲಿ ಒಂದಾಗಿರುವ ಯೆಸ್ ಬ್ಯಾಂಕ್‌ನಲ್ಲಿ ಹತ್ತಾರು ವಿವಿಧ ಹುದ್ದೆಗಳು ಖಾಲಿ ಇದ್ದು, ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಇದೇ ತಿಂಗಳ ಅಕ್ಟೋಬರ್ 24ರೊಳಗೆ ತಪ್ಪದೆ ಅರ್ಜಿ ಸಲ್ಲಿಬಹುದು.
ಯೆಸ್ ಬ್ಯಾಂಕ್ (YES Bank) ನಲ್ಲಿ ಉಪ ವ್ಯವಸ್ಥಾಪಕರು, ಬ್ರಾಂಚ್ ಸರ್ವೀಸ್ ಪಾರ್ಟ್‌ನರ್ರ್ ಹುದ್ದೆಗಳು ಖಾಲಿ ಇವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿವುಳ್ಳ ಅಭ್ಯರ್ಥಿಗಳು ಆದಷ್ಟು ಶೀಘ್ರವೇ ಸೂಕ್ತ ದಾಖಲೆಗಳ ಸಹಿತ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೂ ಮೊದಲು ಕೆಳಗೆ ನೀಡಲಾದ ಲಿಂಕ್ ಮೂಲಕ ಅಧಿಸೂಚನೆ ಪೂರ್ಣ ಓದಿಕೊಂಡು ಅರ್ಜಿ ಸಲ್ಲಿಸಬೇಕಿದೆ. ಅಲ್ಲದೇ ಹುದ್ದೆಗೆ ಬೇಕಾದ ವಿದ್ಯಾರ್ಹತೆ, ಸಂಬಳ, ವಯೋಮಿತಿ ಇನ್ನಿತರ ಮಾಹಿತಿ ಇಲ್ಲಿ ತಿಳಿಯಿರಿ.
ಅರ್ಜಿ ಶುಲ್ಕ ಇತರೆ ಮಾಹಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವನ್ನು ನಿಗದಿ ಮಾಡಿಲ್ಲ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಪ್ಲೈ ಮಾಡಲು https://yesforyou.darwinbox.in/ms/candidate/careers ಈ ವೆಬ್‌ಸೈಟ್ ಬೇಟಿ ನೀಡಿ ಅರ್ಜಿ ಸಲ್ಲಿಸಬೇಕಿದೆ.
ಇನ್ನೂ ವಿದ್ಯಾರ್ಹತೆ, ಮಾಸಿಕ ವೇತನ, ಪೋಸ್ಟಿಂಗ್, ಸ್ಥಳ ಹಾಗೂ ವಯೋಮಿತಿ ಸೇರಿದಂತೆ ಎಲ್ಲ ಮಾಹಿತಿಯನ್ನು ಇಲ್ಲಿ ನೀಡಲಾಗಿರುವ ಅಧಿಕೃತ ವೆಬ್‌ಸೈಟ್ https://yesforyou.darwinbox.in/ms/candidate/careers ಮೂಲಕ ಅಧಿಸೂಚನೆ ಡೌನ್‌ಲೋಡ್ ಮಾಡಿಕೊಂಡು ಪೂರ್ಣ ಓದಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಇನ್ನೂ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಯೆಸ್ ಬ್ಯಾಂಕ್ ತಿಳಿಸಿದೆ.












Click it and Unblock the Notifications