ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಟೋಮೊಬೈಲ್‌ ಕ್ಷೇತ್ರದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿ

|
Google Oneindia Kannada News

ನವದೆಹಲಿ, ಜುಲೈ, 20: "ಭಾರತದ ಆಟೋಮೊಬೈಲ್ ಕ್ಷೇತ್ರವು ಮುಂದಿನ 5-6 ವರ್ಷಗಳಲ್ಲಿ ಯುವಕರಿಗೆ ಕನಿಷ್ಠ ಒಂದು ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಿದೆ" ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ಆಟೋಮೋಟಿವ್ ಸ್ಕಿಲ್ಸ್ ಡೆವಲಪ್‌ಮೆಂಟ್ ಕೌನ್ಸಿಲ್‌ ಮೂಲಕ ಮಾತನಾಡಿದ ಅವರು, "ಭಾರತದಲ್ಲಿ ಈ ವಲಯದ ಶೇಕಡಾ 40ರಷ್ಟು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಮಾಡಲಾಗುತ್ತದೆ ಮತ್ತು ಆಟೋಮೊಬೈಲ್‌ಗಳಲ್ಲಿ ಎಲೆಕ್ಟ್ರಾನಿಕ್ಸ್ ಬಳಕೆಯ ಹೆಚ್ಚಳ ಮಾಡುವ ನಿರೀಕ್ಷೆಯಿದೆ" ಎಂದು ಹೇಳಿದರು.

ಯಲ್ಲಾಪುರದ ಸರ್ಕಾರಿ ಕಾಲೇಜಿನಲ್ಲಿ ಲ್ಯಾಬ್ ನಿರ್ಮಿಸಲಿದೆ ಟೊಯೋಟಾ ಯಲ್ಲಾಪುರದ ಸರ್ಕಾರಿ ಕಾಲೇಜಿನಲ್ಲಿ ಲ್ಯಾಬ್ ನಿರ್ಮಿಸಲಿದೆ ಟೊಯೋಟಾ

"ಭಾರತದಲ್ಲಿ ಆಟೋ ಕ್ಷೇತ್ರವು ಮುಂದಿನ 5-6 ವರ್ಷಗಳಲ್ಲಿ ಯುವಕರಿಗೆ ಒಂದು ದೊಡ್ಡ ಅವಕಾಶವನ್ನು ಕಲ್ಪಿಸುತ್ತದೆ. ಇದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಲಯವಾಗಿದೆ" ಎಂದು ರಾಜೀವ್ ಚಂದ್ರಶೇಖರ್ ಹೇಳಿದರು.

We will create 1 crore jobs in 5-6 years says Rajeev Chandrasekhar

"ಮೊಬೈಲ್ ಫೋನ್, ಲ್ಯಾಪ್‌ಟಾಪ್ ಸೇರಿದಂತೆ ಎಲ್ಲಾ ರೀತಿಯ ಎಲೆಕ್ಟ್ರಾನಿಕ್‌ ಉತ್ಪಾದನಾ ಕಂಪನಿಗಳಿಗೆ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಪಾಲುದಾರಿಕೆಯನ್ನು ನೀಡಲಾಗುತ್ತದೆ. ಮತ್ತು ಕೌಶಲ್ಯ ಅಭಿವೃದ್ಧಿ ಶಕ್ತಿಯ ಕೇಂದ್ರವನ್ನಾಗಿ ಭಾರತವನ್ನು ಜಗತ್ತಿಗೆ ಪರಿಚಯಿಸಿ, ಪ್ರಧಾನ ಮಂತ್ರಿಯವರ ಆಶಯವನ್ನು ಪೂರೈಸಲು ಮುಂದಾಗಿದ್ದೇವೆ. ಯುವಕರಿಗೆ ಈ ಕ್ಷೇತ್ರದಲ್ಲಿ ತರಬೇತಿ ನೀಡುವುದರ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವುದು ನಮ್ಮ ಗುರಿಯಾಗಿದೆ" ಎಂದು ಹೇಳಿದರು.

ಎಂಒಯು ಭಾಗವಾಗವಾದ ಟಿಕೆಎಂನಿಂದ 2024ರ ವೇಳೆಗೆ 18,000 ಆಟೋಮೋಟಿವ್ ಕೌಶಲ್ಯಗಳ ಮೂಲಕ ತರಬೇತಿ ನೀಡುವ ಯೋಜನೆ ರೂಪಿಸಲಾಗಿದೆ. ವಿಕ್ರಮ್ ಗುಲಾಟಿ ಅವರ ಕಂಪನಿಯು ಈಗಾಗಲೇ ದೇಶಾದ್ಯಂತ 10,000 ಯುವಕರಿಗೆ ತರಬೇತಿ ನೀಡಿದೆ. ನಾವು 21 ರಾಜ್ಯಗಳಲ್ಲಿ 56 ತರಬೇತಿ ಕೇಂದ್ರಗಳನ್ನು ಹೊಂದಿದ್ದೇವೆ. ASDCಯೊಂದಿಗಿನ ಒಪ್ಪಂದದ ಅಡಿಯಲ್ಲಿ 2024ರ ವೇಳೆಗೆ ಯುವಕರಿಗೆ ತರಬೇತಿ ನೀಡಲು ಕೇಂದ್ರಗಳನ್ನು ಭಾರತದಾದ್ಯಂತ ವಿಸ್ತರಿಸಲು ಬಯಸುತ್ತೇವೆ. ಹೆಚ್ಚಿನದಾಗಿ ತರಬೇತಿ ನೀಡಲು ಈಶಾನ್ಯ, ಜಮ್ಮು ಮತ್ತು ಕಾಶ್ಮೀರ, ಛತ್ತೀಸ್‌ಗಢದಲ್ಲಿ ಕೇಂದ್ರಗಳನ್ನು ವಿಸ್ತರಿಸಲಾಗುತ್ತದೆ.

We will create 1 crore jobs in 5-6 years says Rajeev Chandrasekhar

ಆಟೋಮೊಬೈಲ್‌ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಮಹತ್ವದ ಹೆಜ್ಜೆ ಇದಾಗಿದ್ದು, ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಇನ್ನು ಹೆಚ್ಚಿನದಾಗಿ ಮಹತ್ವಪೂರ್ಣ ಯೋಜನೆಗಳನ್ನು ಜಾರಿಗೆ ತರಲು ರಾಜೀವ್‌ ಚಂದ್ರಶೇಖರ್‌ ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಆಟೋಮೊಬೈಲ್‌ ಕ್ಷೇತ್ರಕ್ಕೆ ಸಂಬಂಧಿಸದಂತೆ ಕಂಪನಿಗಳನ್ನು ವಿಸ್ತರಿಸುವುದಾಗಿ ಭರವಸೆ ನೀಡಿದ್ದಾರೆ.

English summary
The automobile sector in India will create at least one crore jobs for the youth in the next 5-6 years said Skill Development Minister Rajiv Chandrasekhar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X