ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಹಾವೇರಿ, ಮೇ 25 : ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಜೊತೆ ಮೇ 26 ರಿಂದ ಜೂನ್ 2ರವರೆಗೆ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು.

Recommended Video

      ಪೊಲೀಸರಿಗೂ ಬಂತು ಕರೋನ, ಉಡುಪಿಯ ಪೊಲೀಸ್ ಠಾಣೆ ಸಹ ಸೀಲ್ ಡೌನ್. | Udupi DC

      ಆಸ್ಪತ್ರೆಯ ಕೋವಿಡ್ - 19 ವಿ. ಆರ್. ಡಿ. ಎಲ್ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಮೆಡಿಕಲ್ ರಿಸರ್ಚ್ ಸೈಟಿಂಸ್ಟ್, ವೈದ್ಯಕೀಯೇತರ ರಿಸರ್ಚ್ ಸೈಂಟಿಸ್, ರಿಸರ್ಚ್ ಅಸಿಸ್ಟೆಂಟ್ ಹಾಗೂ ಲ್ಯಾಬೋಟರಿ ಟೆಕ್ನಿಷಿಯನ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

      ರಿಸರ್ಚ್ ಸೈಟಿಂಸ್ಟ್ (ಮೆಡಿಕಲ್) ಹುದ್ದೆಗೆ ಎಂ. ಬಿ. ಬಿ. ಎಸ್./ಎಂ.ಡಿ, (ಮೈಕ್ರೋಬಯಾಲಜಿ) ಅಥವಾ ಎಂಸ್ಸಿ, ಪಿಎಚ್.ಡಿ ಮೆಡಿಕಲ್ ಮೈಕ್ರೋಬಯಾಲಜಿ ವಿದ್ಯಾರ್ಹತೆ ಹೊಂದಿರಬೇಕು. ಅಭ್ಯರ್ಥಿಗಳಿಗೆ ಮಾಸಿಕ 65 ಸಾವಿರ ರೂ. ವೇತನ ನಿಗದಿ ಮಾಡಲಾಗಿದೆ.

      Walk In Interview For Various Post In Haveri District Hospital

      ರಿಸರ್ಚ್ ಸೈಟಿಂಸ್ಟ್ (ನಾನ್ ಮೆಡಿಕಲ್) ಹುದ್ದೆಗೆ ಎಂಸ್ಸಿ, ಪಿಎಚ್.ಡಿ ಮೆಡಿಕಲ್ ಮೈಕ್ರೋಬಯಾಲಜಿ ವಿದ್ಯಾರ್ಹತೆ ಹೊಂದಿರಬೇಕು. ಮಾಸಿಕ 60 ಸಾವಿರ ರೂ. ವೇತನ ನೀಡಲಾಗುತ್ತದೆ. ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಎಂಸ್ಸಿ, (ಮೆಡಿಕಲ್ ಮೈಕ್ರೋಬಯಾಲಜಿ) ವಿದ್ಯಾರ್ಹತೆ ಪಡೆದಿರಬೇಕು. ಮಾಸಿಕ 30 ಸಾವಿರ ರೂ. ವೇತನ ನೀಡಲಾಗುತ್ತದೆ.

      ಲ್ಯಾಬ್ ಟೆಕ್ನಿಷಿಯನ್ ಹುದ್ದೆಗೆ ಬಿ.ಎಸ್ಸಿ ಎಂ.ಎಲ್.ಟಿ ಅಥವಾ ಪಿಯುಸಿ ಸೈನ್ಸ್ ಡಿಎಂಎಲ್‍ಟಿ ವಿದ್ಯಾರ್ಹತೆ ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 25 ಸಾವಿರ ರೂ. ವೇತನ ನೀಡಲಾಗತ್ತದೆ ಎಂದು ಪ್ರಕಟಣೆ ಹೇಳಿದೆ.

      ಈ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಹಾಜರಾಗಲು ಸಾಧ್ಯವಾಗದವರು ಸ್ಕೈಪ್ ಮೂಲಕ ಸಂದರ್ಶನ ಎದುರಿಸಲು ಅವಕಾಶವಿದೆ. ಶೈಕ್ಷಣಿಕ ದಾಖಲೆ ಹಾಗೂ ಅನುಭವದ ದಾಖಲೆಗಳನ್ನು [email protected] ಅಥವಾ ಜಿಲ್ಲಾ ಆಸ್ಪತ್ರೆಯ ಮೈಕ್ರೋಬಯಾಲಜಿಸ್ಟ್ ಡಾ.ಶ್ಯಾಮಲಾ ಅವರ ವಾಟ್ಸಾಪ್ ನಂಬರ್ 9480552285 ಸಲ್ಲಿಸಬಹುದು.

      ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮೇ 26 ರಿಂದ ಜೂನ್ 2ರವರೆಗೆ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ 08375-249044/245015 ಸಂಪರ್ಕಿಸಬಹುದು. ಸಂದರ್ಶನಕ್ಕೆ ಹಾಜರಾಗುವವರಿಗೆ ಪ್ರಯಾಣ ಇತರ ಭತ್ಯೆಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+