ಬೆಂಗಳೂರು ಇಎಸ್‌ಐ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಬೆಂಗಳೂರು, ಜುಲೈ 07 : ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ನಿರ್ದೇಶನಾಲಯದ ಅಡಿಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ. ಜುಲೈ 7ರಿಂದ 10ರ ತನಕ ನೇರ ಸಂದರ್ಶನ ನಡೆಯಲಿದೆ.

ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು ನಗರದ ಕಾರಾವಿ ಆಸ್ಪತ್ರೆ ಇಂದಿರಾ ನಗರ ಇಲ್ಲಿ ಕೆಲಸ ಮಾಡಬೇಕಿದೆ. 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಗ್ರೂಪ್ 'ಸಿ' ಮತ್ತು 'ಡಿ' ಸಿಬ್ಬಂದಿಗಳನ್ನು ಬಾಹ್ಯ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

Walk In Interview For Various Post At Bengaluru ESI Hospital

ಸ್ಟಾಫ್ ನರ್ಸ್ 40, ಲ್ಯಾಬ್ ಟೆಕ್ನೀಷಿಯನ್ 5, ಎಕ್ಸ್-ರೇ ಟೆಕ್ನಿಷಿಯನ್ 2, ರೇಡಿಯೋಗ್ರಾಫರ್ 2, ಕ್ಲೀನರ್ಸ್ (ಗ್ರೂಪ್ 'ಡಿ') 40 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ನೇರ ಸಂದರ್ಶನದ ದಿನಾಂಕ 8/7/2020 ರಿಂದ 10/7/2020 (ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯ ತನಕ). ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ 080-25266994 ನಂಬರ್‌ಗೆ ಕರೆ ಮಾಡಬಹುದಾಗಿದೆ.

ಸಂದರ್ಶನ ನಡೆಯುವ ಸ್ಥಳ ಕಾರಾವಿ ಆಸ್ಪತ್ರೆ, ಇಂದಿರಾ ನಗರ, ಹೆಚ್‌. ಎ. ಎಲ್ 2ನೇ ಹಂತ, ಬೆಂಗಳೂರು 560038.

ಮೇಲಿನ ಎಲ್ಲಾ ಹುದ್ದೆಗಳಿಗೆ ಅಗತ್ಯವಿರುವ ಶೈಕ್ಷಣಿಕ ಅರ್ಹತೆ ಮತ್ತು ಕಾರ್ಯಾನುಭವನ್ನು ನಿಗದಿಪಡಿಸಿದಂತೆ ಹೊಂದಿರಬೇಕು. ನೇಮಕಗೊಂಡವರಿಗೆ ನಿಗದಿತ ಗೌರವಧನವನ್ನು ನೀಡಲಾಗುತ್ತದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ http:esisms.karnataka.gov.in ವೆಬ್ ಸೈಟ್ ನೋಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+