ಬೆಂಗಳೂರಿನಲ್ಲಿ ಜುಲೈ 29ರಂದು ನೇರ ಸಂದರ್ಶನ
ಬೆಂಗಳೂರು, ಜುಲೈ 26 : ಬಿಬಿಎಂಪಿ ಆರೋಗ್ಯ ಇಲಾಖೆಯ ವೈದ್ಯಕೀಯ ವಿಭಾಗದ ಅಡಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕೆಲವು ಆಸ್ಪತ್ರೆಗಳಲ್ಲಿ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ನಡೆಸಲಾಗುತ್ತಿದೆ. ಜುಲೈ 29ರಂದು ನೇರ ಸಂದರ್ಶನ ನಡೆಯಲಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ಯಾನಲ್ ಮಕ್ಕಳ ತಜ್ಞರ ಹುದ್ದೆಗಾಗಿ ನೇರ ಸಂದರ್ಶನವನ್ನು ಆಯೋಜನೆ ಮಾಡಿದೆ. ಒಟ್ಟು 6 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ 1,10,000 ರೂ.ಗಳು.
ನೇರ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳ ವಯೋಮಿತಿ 50 ವರ್ಷದೊಳಗಿರಬೇಕು. ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನಲ್ಲಿ ತಮ್ಮ ಶೈಕ್ಷಣಿಕ ವಿದ್ಯಾರ್ಹತೆಯನ್ನು ನೋಂದಣಿ ಮಾಡಿಸಿರಬೇಕು. ಈ ನೇಮಕಾತಿ 1 ವರ್ಷದ ಗುತ್ತಿಗೆ ಅವಧಿಯದ್ದಾಗಿರುತ್ತದೆ.

ಆಸಕ್ತರು ಬಯೋಡೆಟಾ, ಶೈಕ್ಷಣಿಕ ವಿದ್ಯಾರ್ಹತೆ ಪ್ರಮಾಣ ಪತ್ರಗಳೊಂದಿಗೆ ಪಟ್ಟಿಯಲ್ಲಿ ಸೂಚಿಸಿರುವ ಸ್ಥಳ, ದಿನಾಂಕದಂದು ನೇರ ಸಂದರ್ಶನಕ್ಕೆ ಹಾಜರಾಗಲು ಕೋರಲಾಗಿದೆ. ಮೇಲ್ಕಂಡ ಹುದ್ದೆಗಳನ್ನು ಹೆಚ್ಚಿಸುವ/ಕಡಿತಗೊಳಿಸುವ ಅಧಿಕಾರವನ್ನು ಪಾಲಿಕೆ ಹೊಂದಿದೆ.
ಸಂದರ್ಶನ ನಡೆಯುವ ದಿನಾಂಕ : 29/7/2020ರ ಬೆಳಗ್ಗೆ 10.30ರಿಂದ ಸಂಜೆ 4.30ರ ತನಕ
ಸ್ಥಳ : ಸಭಾಂಗಣ, ದಾಸಪ್ಪ ಆಸ್ಪತ್ರೆ, ಆವರಣ, 2ನೇ ಮಹಡಿ, ಎಸ್.ಜೆ.ಪಿ. ರಸ್ತೆ, ಬೆಂಗಳೂರು












Click it and Unblock the Notifications