ಮಾ.16ರಂದು ಬಳ್ಳಾರಿಯಲ್ಲಿ ಗೃಹರಕ್ಷಕ ದಳ ಸಂದರ್ಶನ

ಬಳ್ಳಾರಿ, ಮಾರ್ಚ್ 13: ಬಳ್ಳಾರಿ ಜಿಲ್ಲೆಯ ರೂಪನಗುಡಿ, ಸಿರುಗುಪ್ಪ, ಕುಡುತಿನಿ, ತೋರಣಗಲ್ಲು ಮತ್ತು ಬಳ್ಳಾರಿ ಘಟಕದಲ್ಲಿ ಗೃಹರಕ್ಷಕರ ವಾದ್ಯವೃಂದ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಗೃಹರಕ್ಷಕರ ವಾದ್ಯವೃಂದ ಸದಸ್ಯರ ಆಯ್ಕೆಗೆ ಸಂಬಂಧಿಸಿದಂತೆ ಕಳೆದ ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಮಾ.16ರಂದು ಬೆಳಿಗ್ಗೆ 8ಕ್ಕೆ ಬಳ್ಳಾರಿ ನಗರದ ಡಿ.ಎ.ಆರ್ ಮೈದಾನದಲ್ಲಿ ಸಂದರ್ಶನ ನಡೆಯುತ್ತದೆ ಎಂದು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Walk In Interview For Home Guard Jobs in Ballari On March 16th

ಅಭ್ಯರ್ಥಿಗಳು ತರಬೇಕಾದ ದಾಖಲೆಗಳು:

ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಶಾಲಾ ವರ್ಗಾವಣೆ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಕುಟುಂಬದ ಪಡಿತರ ಚೀಟಿ, ಡ್ರೈವಿಂಗ್ ಲೈಸೆನ್ಸ್ ಜೊತೆಗೆ ಸಂದರ್ಶನ ಪತ್ರ ತರುವುದು ಕಡ್ಡಾಯವೆಂದು ಅವರು ತಿಳಿಸಿದ್ದಾರೆ.

ಅಭ್ಯರ್ಥಿಗಳಿಗೆ ವಿಶೇಷ ಸೂಚನೆ:

ಜೆರಾಕ್ಸ್ ದಾಖಲಾತಿಗಳನ್ನು ಪರಿಗಣಿಸುವುದಿಲ್ಲ. ಗೃಹರಕ್ಷಕ ಘಟಕದಲ್ಲಿನ ಸದಸ್ಯತ್ವ ಬಯಸಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ವಾದ್ಯವೃಂದ ಸಲಕರಣೆಗಳನ್ನು ತಾವೇ ತರುವುದರ ಜೊತೆಗೆ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಬರಬೇಕಾಗಿದೆ. ಸರ್ಕಾರದಿಂದ ಯಾವುದೇ ರೀತಿಯ ಭತ್ಯೆ ಪಾವತಿಸುವುದಿಲ್ಲ ಎಂದು ಅವರು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟಕರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+