ಹಾವೇರಿ; ಸೆಪ್ಟೆಂಬರ್ 20ಕ್ಕೆ ನೇರ ಸಂದರ್ಶನ, ಹುದ್ದೆಗಳ ವಿವರ
ಹಾವೇರಿ, ಸೆಪ್ಟೆಂಬರ್ 14; ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾವೇರಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಮೆರಿಟ್ ಕಮ್ ರೋಸ್ಟರ್ ಅನ್ವಯ ಹಲವು ಹುದ್ದೆಗಳಿಗೆ ಸೆಪ್ಟೆಂಬರ್ 20ರಂದು ನೇರ ಸಂದರ್ಶನವನ್ನು ಆಯೋಜನೆ ಮಾಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾವೇರಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲೆಯಲ್ಲಿ ಮಂಜೂರಾಗಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡುತ್ತಿದೆ. ಇದಕ್ಕಾಗಿ ನೇರ ಸಂದರ್ಶನ ನಡೆಸುತ್ತಿದೆ.

ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತಿ ಹಾವೇರಿ ಹಾಗೂ ಮಾನ್ಯ ಅಧ್ಯಕ್ಷರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಹಾವೇರಿ ಇವರ ಅನುಮೋದನೆಯಂತೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಹುದ್ದೆ, ವಯೋಮಿತಿ; ಫೀಜಿಶಿಯನ್ 2 ಹುದ್ದೆ, ಗರಿಷ್ಠ ವಯೋಯಿತಿ 40 ವರ್ಷಗಳು. ಶುಶ್ರೂಷಾಧಿಕಾರಿಗಳು, 1 ಹುದ್ದೆ. ಗರಿಷ್ಠ ವಯೋಮಿತಿ 40 ವರ್ಷಗಳು. ಎಂಬಿಬಿಎಸ್ ವೈದ್ಯರು, 9 ಹುದ್ದೆಗಳು. ಗರಿಷ್ಠ ವಯೋಮಿತಿ 50 ವರ್ಷಗಳು.
ಶುಶ್ರೂಷಾಧಿಕಾರಿಗಳು (NP-NCDs) ಕಾರ್ಯಕ್ರಮ 3 ಹುದ್ದೆಗಳು, ಗರಿಷ್ಠ ವಯೋಮಿತಿ 3 ವರ್ಷಗಳು. ಫಿಜಿಯೋಥೆರಪಿಸ್ಟ್ 1 ಹುದ್ದೆ. ಗರಿಷ್ಠ ವಯೋಮಿತಿ 40 ವರ್ಷಗಳು. ಆಡಿಯೋಲಾಜಿಸ್ಟ್ 1 ಹುದ್ದೆ, ಗರಿಷ್ಠ ವಯೋಮಿತಿ 40 ವರ್ಷಗಳು.
ಸದರಿ ಗುತ್ತಿಗೆ ಆಧಾರದ ನೇಮಕಾತಿಯನ್ನು ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ ಮಾಡಿಕೊಳ್ಳಲಾಗುತ್ತದೆ. ಅರ್ಹ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ದಿನಾಂಕ 20/09/2023ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಜರಾಗಬೇಕಿದೆ.
ಜಿಲ್ಲಾ ಸರ್ವೇಕ್ಷಣ ಘಟಕ, ತಾಲೂಕ ಆರೋಗ್ಯಾಧಿಕಾರಿಗಳ ಕಛೇರಿ ಆವರಣ ಹಾವೇರಿ ಇಲ್ಲಿ ಅರ್ಜಿಗಳನ್ನು ವಿತರಣೆ ಮಾಡಲಾಗುತ್ತದೆ. ಅದೇ ದಿನ ಭರ್ತಿ ಮಾಡಿದ ಅರ್ಜಿಗಳನ್ನು ಪಡೆದುಕೊಳ್ಳಲಾಗುವುದು. ಈ ಸ್ಥಳದಲ್ಲಿ ಸ್ವತಃ ಅಭ್ಯರ್ಥಿಗಳು ಹಾಜರಿದ್ದು, ಅರ್ಜಿಯನ್ನು ಪಡೆದು ಅರ್ಜಿಯೊಂದಿಗೆ ಮೂಲ ದಾಖಲಾತಿಗಳು ಹಾಗೂ ದೃಢೀಕರಿಸಿದ ಜೆರಾಕ್ಸ್ ಪ್ರತಿ ಹಾಗೂ ತಮ್ಮ ಇತ್ತೀಚಿನ ಭಾವಚಿತ್ರದ ಎರಡು ಪ್ರತಿಗಳನ್ನು ಲಗತ್ತಿಸಿ ಸಲ್ಲಿಸಲು ಸೂಚಿಸಲಾಗಿದೆ.
ನಿಗದಿತ ದಿನಾಂಕದ ನಂತರ ಸ್ವೀಕೃತವಾದಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಸದರಿ ಗುತ್ತಿಗೆ ಆಧಾರದ ನೇಮಕಾತಿಗಳು ಎನ್.ಹೆಚ್.ಎಮ್ ನಿಯಮಾವಳಿಯ ಷರತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.
ಸದರಿ ಮೇಲ್ಕಾಣಿಸಿದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪೂರ್ಣ ಪ್ರಮಾಣದ ಹಕ್ಕನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಹಾವೇರಿಯು ಕಾಯ್ದಿರಿಸಿಕೊಂಡಿರುತ್ತದೆ ಹಾಗೂ ವಯೋಮಿತಿ ಮತ್ತು ಮಾಸಿಕ ಸಂಚಿತ ವೇತನವನ್ನು ರಾಜ್ಯ ಮಟ್ಟದ ಮಾರ್ಗಸೂಚಿ ಪ್ರಕಾರ ನಿಗದಿಪಡಿಸಲಾಗುತ್ತದೆ.
ಈ ನೇಮಕಾತಿ ಕುರಿತು ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಸರ್ವೇಕ್ಷಣಾ ಘಟಕ ಹಾವೇರಿ, ತಾಲೂಕ ಆರೋಗ್ಯಾಧಿಕಾರಿಗಳ ಕಛೇರಿ ಹಾವೇರಿ ಇಲ್ಲಿ (ಆರೋಗ್ಯ ಇಲಾಖೆ) ಕಛೇರಿ ಅವಧಿಯಲ್ಲಿ ಪಡೆಯಬಹುದು ಎಂದು ಪ್ರಕಟಣೆ ಹೇಳಿದೆ.












Click it and Unblock the Notifications