ಹಾವೇರಿ : ವಿವಿಧ ಹುದ್ದೆಗೆ ಆ.22ರಂದು ನೇರ ಸಂದರ್ಶನ
ಹಾವೇರಿ, ಆಗಸ್ಟ್ 20 : ಹಾವೇರಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ರಾಣೆಬೆನ್ನೂರಿನ ಸರ್ಕಾರಿ ಐ.ಟಿ.ಐ. ಕಾಲೇಜು ಸಹಯೋಗದಲ್ಲಿ ಆಗಸ್ಟ್ 22ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ.
ಹಾವೇರಿ ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರಿಗೆ ಅನುಕೂಲವಾಗಿ ಎಂದು ನೇರ ಸಂದರ್ಶನವನ್ನು ಆಗಸ್ಟ್ 22 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3.30ರ ತನಕ ಆಯೋಜನೆ ಮಾಡಲಾಗಿದೆ. ರಾಣೆಬೆನ್ನೂರಿನ ಸರ್ಕಾರಿ ಐ.ಟಿ.ಐ. ಕಾಲೇಜಿನಲ್ಲಿ ಸಂದರ್ಶನ ನಡೆಯಲಿದೆ.

ಐಟಿಐ ( ಆಲ್ ಟ್ರೇಡ್) ವಿದ್ಯಾರ್ಹತೆ ಹೊಂದಿದ ಪುರುಷರು ಹಾಗೂ ಡಿಪ್ಲೋಮಾ ಹಾಗೂ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿದ ಮಹಿಳಾ ಅಭ್ಯರ್ಥಿಗಳು ಮಾತ್ರ ನೇರ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶವಿದೆ.
ಕೋಲಾರದ ಎಸ್.ಬಿ.ಎಂ.ಎಸ್.ಹೋಂಡಾ ಪ್ರೈ.ಲಿ ಹಾಗೂ ತುಮಕೂರಿನ ಎಲ್.ಎಂ.ವಿಂಡ್ ಪವರ್ ಖಾಸಗಿ ಸಂಸ್ಥೆಗಳು ನೇರ ಸಂದರ್ಶನದ ಮೂಲಕ ವಿವಿಧ ಹುದ್ದೆಗಳಿಗೆ ನೇಮಕಾತಿಗಳನ್ನು ಮಾಡಿಕೊಳ್ಳಲಿವೆ.
ಅಭ್ಯರ್ಥಿಗಳು ಕನಿಷ್ಠ ಮೂರು ಬಯೋಡಾಟಾ ಹಾಗೂ ಇತ್ತೀಚಿನ ಎರಡು ಭಾವಚಿತ್ರಗಳು, ವಿದ್ಯಾರ್ಹತೆಯ ದಾಖಲಾತಿಗಳ ಮತ್ತು ಆಧಾರ್ ಕಾರ್ಡ ಜೆರಾಕ್ಸ್ ಪ್ರತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗಾಧಿಕಾರಿ ತನುಜಾ ರಾಮಪುರೆ ಅವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08375-249291.












Click it and Unblock the Notifications