UPSC Recruitment 2023: ಕೇಂದ್ರ ಹುದ್ದೆಗಳ ಭರ್ತಿ ಅರ್ಜಿ ಆಹ್ವಾನ, ನೇಮಕಾತಿ ಪೂರ್ಣ ಮಾಹಿತಿ
ಬೆಂಗಳೂರು, ಡಿಸೆಂಬರ್ 27: ಕೇಂದ್ರ ಲೋಕಸೇವಾ ಆಯೋಗ (UPSC) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ತಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಕೆಲಸ ಹುಡುಕುವ ಆಸಕ್ತರು ಈ ಕೂಡಲೇ ಪರಿಶೀಲಿಸಿದ ಅರ್ಜಿ ಸಲ್ಲಿಸಬೇಕು.
ಕೇಂದ್ರ ಲೋಕಸೇವಾ ಆಯೋಗದಲ್ಲಿ ಒಟ್ಟು ಐದು 5 ಟೆಕ್ನಿಕಲ್ ಆಫೀಸರ್, ಸೈಂಟಿಫಿಕ್ ಆಫೀಸರ್ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ನೀವು ಡಿಸೆಂಬರ್ 28ರ ಸಂಜೆಯೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಸದರಿ ಅವಕಾಶವನ್ನು ನಿರುದ್ಯೋಗಿಗಳು ಉಪಯೋಗಿಸಿಕೊಳ್ಳಬಹುದಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗು ಮುನ್ನಡ ಈ ಕೆಳಗೆ ನೀಡಲಾದ ನೇಮಕಾತಿ ಮಾಹಿತಿ ತಿಳಿಯಿರಿ.

ಕೆಪಿಎಸ್‌ಸಿ ನೇಮಕಾತಿ ಪೂರ್ಣ ಮಾಹಿತಿ
ಸಂಸ್ಥೆ ಹೆಸರು: ಕೇಂದ್ರ ಲೋಕಸೇವಾ ಆಯೋಗ
ಹುದ್ದೆ ಹೆಸರು: ಟೆಕ್ನಿಕಲ್ ಆಫೀಸರ್, ಸೈಂಟಿಫಿಕ್ ಆಫೀಸರ್
ಒಟ್ಟು ಖಾಲಿ ಹುದ್ದೆ: 5
ವೇತನ: ನಿಗದಿ ಮಾಡಿಲ್ಲ
ಪೋಸ್ಟಿಂಗ್: ಭಾರತದಲ್ಲಿ ಎಲ್ಲಿಯಾದರೂ
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಡಿಸೆಂಬರ್ 28
ಶೈಕ್ಷಣಿಕ ಅರ್ಹತೆ
ಸೈಂಟಿಫಿಕ್ ಆಫೀಸರ್ (ಎಲೆಕ್ಟ್ರಿಕಲ್) ಮತ್ತು ಸೀನಿಯರ್ ಲೆಕ್ಚರರ್ (ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ) ತಲಾ ಒಂದು ಹಾಗೂ ಟೆಕ್ನಿಕಲ್ ಆಫೀಸರ್ ಇನ್ ಕಂಪ್ಯೂಟರ್ & ಸಿಸ್ಟಂ ಡಿವಿಶನ್ ಮೂರು ಹುದ್ದೆಗಳು ಖಾಲಿ ಇವೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ ಎಂಜಿನಿಯರಿಂಗ್ನಲ್ಲಿ ಪದವಿ, ಫಿಜಿಕ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಕಂಪ್ಯೂಟರ್ ಅಪ್ಲಿಕೇಶನ್/ ಇನ್ಫರ್ಮೇಶನ್ ಟೆಕ್ನಾಲಜಿ/ ಕಂಪ್ಯೂಟರ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ, ಕಂಪ್ಯೂಟರ್ ಎಂಜಿನಿಯರಿಂಗ್/ ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಟೆಕ್ನಾಲಜಿ/ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್/ ಇನ್ಫರ್ಮೇಶನ್ ಟೆಕ್ನಾಲಜಿಯಲ್ಲಿ ಪದವಿ ಹಾಗೂ ಎಂಡಿ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಎಂಎಸ್ ಮಾಡಿರಬೇಕು ಎಂದು ತಿಳಿಸಿದೆ.

ವಯಸ್ಸಿನ ಮಿತಿ
ಟೆಕ್ನಿಕಲ್ ಆಫೀಸರ್ ಇನ್ ಕಂಪ್ಯೂಟರ್ ಮತ್ತು ಸಿಸ್ಟಂ ಡಿವಿಶನ್ ಹುದ್ದೆ ಅಭ್ಯರ್ಥಿಗೆ ಗರಿಷ್ಠ 30 ವರ್ಷ, ಸೈಂಟಿಫಿಕ್ ಆಫೀಸರ್ (ಎಲೆಕ್ಟ್ರಿಕಲ್)ಗೆ ಗರಿಷ್ಠ 33 ವರ್ಷ ಹಾಗೂ ಸೀನಿಯರ್ ಲೆಕ್ಚರರ್ (ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ) ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಗರಿಷ್ಠ 50 ವರ್ಷ ವಯೋಮಿತಿ ಹೇರಲಾಗಿದೆ.
ವಯಸ್ಸಿನ ಸಡಿಲಿಕೆ ವಿವರ
ವಯೋಮಿತಿಯಲ್ಲಿನ ಸಡಿಲಿಕೆ ನೋಡುವದಾರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 03 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಐದು ವರ್ಷ 05 ವರ್ಷ, PwBD (ಸಾಮಾನ್ಯ) ಅಭ್ಯರ್ಥಿ ಹತ್ತು ವರ್ಷ 10 ವರ್ಷ, PwBD (OBC) ಅಭ್ಯರ್ಥಿಗಳಿಗೆ 13 ವರ್ಷ ಹಾಗೂ PwBD (SC/ST) ಅಭ್ಯರ್ಥಿಗಳಿಗೆ 15 ವರ್ಷ ಸಡಿಲಿಕೆ ಸಿಗಲಿದೆ. ಅರ್ಹರು ಈ ಕೂಡಲೇ ಅರ್ಜಿ ಸಲ್ಲಿಸಬೇಕಿದೆ.
ಅರ್ಜಿ ಶುಲ್ಕ ಮಾಹಿತಿ
ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ PwBD/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ. ಎಲ್ಲಾ ಇತರ ಅಭ್ಯರ್ಥಿಗಳಿಗೆ 25 ರೂಪಾಯಿ ಶುಲ್ಕ ನಿಗದಿ ಮಾಡಿದ್ದು, ಈ ಹಣವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು ಎಂದು ತಿಳಿಸಲಾಗಿದೆ.
ಸದ್ಯ ವೇತನ ನಿಯಮಾನುಸಾರ ನೀಡಲಾಗುವುದು ಎಂದು ತಿಳಿಸಿರುವ ಸರ್ಕಾರ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಿದೆ. ಆಯ್ಕೆ ಆಗುವವರಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ಸಿಲಿಗದೆ.
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಹಾಕಲು ಇಲ್ಲವೇ ಅಧಿಸೂಚನೆ ಪರಿಶೀಲಿಸಲು ಈ ಅಧಿಕೃತ https://upsconline.nic.in/ora/VacancyNoticePub.php ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಹೆಚ್ಚಿನ ಮಾಹಿತಿಗೆ
ದೂರವಾಣಿ ಸಂಖ್ಯೆ-011- 23385271 /011-23381125/011-23098543 ಗೆ ಕರೆ ಮಾಡಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.












Click it and Unblock the Notifications