ಬಜೆಟ್ 2016 : ಉದ್ಯೋಗ ಕ್ಷೇತ್ರಕ್ಕೆ ಸಿಕ್ಕಿದ್ದೇನು?
ನವದೆಹಲಿ, ಫೆಬ್ರವರಿ 29 : ಹಣಕಾಸು ಸಚಿವ ಅರುಣ್ ಜೇಟ್ಲಿಯವರು 'ಹೆಚ್ಚು ಅವಕಾಶ, ಹೆಚ್ಚು ಉದ್ಯೋಗ' ಎಂಬ ಗುರಿಯೊಂದಿಗೆ 2016-17ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪನೆ ಮಾಡಲು ಬಜೆಟ್‌ನಲ್ಲಿ 1,700 ಕೋಟಿ ಮೀಸಲಾಗಿಡಲಾಗಿದೆ.
ಸೋಮವಾರ ಅರುಣ್ ಜೇಟ್ಲಿ ಅವರು ಮಂಡನೆ ಮಾಡಿದ ಬಜೆಟ್‌ನಲ್ಲಿ ಮುಂದಿನ ಮೂರು ವರ್ಷದೊಳಗೆ 1 ಕೋಟಿ ಯುವ ಜನರಿಗೆ ಕೌಶಲ್ಯ ತರಬೇತಿ ನೀಡುವ ಗುರಿಯನ್ನು ಹೊಂದಲಾಗಿದೆ. 1,500 ಬಹು ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಉದ್ಯೋಗ ಕ್ಷೇತ್ರಕ್ಕೆ ಸಿಕ್ಕಿದ್ದೇನು? ವಿವಿರಗಳು ಕೆಳಗಿನಂತಿವೆ... [ಬಜೆಟ್ 2016: ಯಾವುದು ಅಗ್ಗ? ಯಾವುದು ತುಟ್ಟಿ?]

* ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಮುಂದಿನ ಮೂರು ವರ್ಷದೊಳಗೆ 1 ಕೋಟಿ ಜನರಿಗೆ ಕೌಶಲ್ಯ ತರಬೇತಿ ನೀಡುವುದು. [ಕೆಪಿಎಸ್ ಸಿ ನೇಮಕಾತಿ : ಮಾ.4 ಅರ್ಜಿ ಹಾಕಲು ಕೊನೆ ದಿನ]
* ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಯೋಜನೆ ಅನ್ವಯ 76 ಲಕ್ಷ ಯುವಜನರಿಗೆ ತರಬೇತಿ [ತೆರಿಗೆ ಉಳಿಸಲು HDFC ಯುಲಿಪ್ ನಲ್ಲಿ ಹೂಡಿಕೆ ಮಾಡಿ]
* 1,500 ಬಹು ಕೌಶಲ ತರಬೇತಿ ಕೇಂದ್ರಗಳ ಸ್ಥಾಪನೆ ಮಾಡುವುದು
#VikasKaBudget Better Skills, More Opportunities, More Jobs pic.twitter.com/IlAhTjO1ER
— Ministry of Finance (@FinMinIndia) February 29, 2016












Click it and Unblock the Notifications