ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 347ಹುದ್ದೆಗಳಿವೆ

ಬೆಂಗಳೂರು, ಆಗಸ್ಟ್ 22: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 2021-22ನೇ ಸಾಲಿನ ನೇಮಕಾತಿ ಮುಂದುವರೆಸಿದೆ. 347ಕ್ಕೂ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಹರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 03, 2021 ಕೊನೆ ದಿನಾಂಕವಾಗಿದೆ.

ಸಂಸ್ಥೆ ಹೆಸರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆ ಹೆಸರು: ಸ್ಪೆಷಲಿಸ್ಟ್ ಆಫೀಸರ್
ಎಲ್ಲಿ ಉದ್ಯೋಗ?: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 03, 2021
ಒಟ್ಟು ಹುದ್ದೆಗಳು : 347

ವಿದ್ಯಾರ್ಹತೆ: ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು ಶೇ 60ರಷ್ಟು ಅಂಕಗಳೊಂದಿಗೆ ಪದವಿ ಪಡೆದಿರಬೇಕು. ಭಾರತ ಸರ್ಕಾರ ಅಥವಾ ಸರ್ಕಾರದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ವಿದ್ಯಾಸಂಸ್ಥೆಯಿಂದ ಪದವಿ ಗಳಿಸಿರಬೇಕು.

Union Bank of India Recruitment 2021 Apply For 347 Vacancies

ಹುದ್ದೆಗಳ ವಿವರ:
ಹುದ್ದೆ ಹೆಸರು: ಒಟ್ಟು ಹುದ್ದೆ-ವಿದ್ಯಾರ್ಹತೆ-ವಯೋಮಿತಿ
* ಹಿರಿಯ ಮ್ಯಾನೇಜರ್ (risk) ಹಾಗೂ ಮ್ಯಾನೇಜರ್ (risk): 60-ಎಂಬಿಎ/ಪಿಜಿ/ಸಿಎ/ಸಿಎಂಎ(ಐಸಿಡಬ್ಲ್ಯೂಎ)/ ಸಿಎಸ್/ ಸಂಬಂಧಪಟ್ಟ ಪ್ರಮಾಣ ಪತ್ರ-30 ರಿಂದ 40 ವರ್ಷ

* ಮ್ಯಾನೇಜರ್ (ಸಿವಿಎಲ್): 07-ಬಿ.ಇ/ಬಿ.ಟೆಕ್ (ಸಿವಿಎಲ್ ಇಂಜಿನಿಯರಿಂಗ್)-25 ರಿಂದ 35 ವರ್ಷ.
* ಮ್ಯಾನೇಜರ್ (ಆರ್ಕಿಟೆಕ್): 07- ಪದವಿ (ಆರ್ಕಿಟೆಕ್ )-25 ರಿಂದ 35 ವರ್ಷ.
* ಮ್ಯಾನೇಜರ್ (ಎಲೆಕ್ಟ್ರಿಕಲ್ ಇಂಜಿನಿಯರ್): 02-ಬಿ.ಇ/ಬಿ.ಟೆಕ್ (ಎಲೆಕ್ಟ್ರಿಕಲ್ ಇಂಜಿನಿಯರಿಂಗ್ )-25 ರಿಂದ 35 ವರ್ಷ.

* ಮ್ಯಾನೇಜರ್ (ಪ್ರಿಟಿಂಗ್ ಟೆಕ್ನಾಲಜಿಸ್ಟ್): 01-ಬಿ.ಇ/ಬಿ.ಟೆಕ್ (ಪ್ರಿಟಿಂಗ್ ಇಂಜಿನಿಯರಿಂಗ್ )-25 ರಿಂದ 35 ವರ್ಷ.
* ಮ್ಯಾನೇಜರ್ (ಫೊರೆಕ್ಸ್): 50- ಪದವಿ, ಎಂಬಿಎ/ಪಿಜಿಡಿಬಿಎ/ಪಿಜಿಡಿಬಿಎಂ/ಪಿಜಿಪಿಎಂ/ಪಿಜಿಡಿಎಂ-25 ರಿಂದ 35 ವರ್ಷ.
* ಸಹಾಯಕ ಮ್ಯಾನೇಜರ್ (ಸಿಎ)-14-ಚಾರ್ಟೆಡ್ ಅಕೌಂಟೆಟ್-25 ರಿಂದ 35 ವರ್ಷ.
* ಸಹಾಯಕ ಮ್ಯಾನೇಜರ್ (ಟೆಕ್ನಿಕಲ್ ಅಧಿಕಾರಿ): 14-ಸಂಬಂಧಪಟ್ಟ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ/ಬಿ.ಫಾರ್ಮಾ-20 ರಿಂದ 30 ವರ್ಷ.

* ಸಹಾಯಕ ಮ್ಯಾನೇಜರ್ (ಫೊರೆಕ್ಸ್): 120-ಪದವಿ, ಎಂಬಿಎ/ಪಿಜಿಡಿಬಿಎ/ಪಿಜಿಡಿಬಿಎಂ/ಪಿಜಿಪಿಎಂ/ಪಿಜಿಡಿಎಂ-20 ರಿಂದ 30 ವರ್ಷ.

ಸಂಬಳ ನಿರೀಕ್ಷೆ:
ಹಿರಿಯ ಮ್ಯಾನೇಜರ್ (risk): ರು 63,840-1990/5-73790-2220/2-78,230
ಮ್ಯಾನೇಜರ್ (risk): ರು 48,170-1740/1-49910-1990/10-69,810
ಮ್ಯಾನೇಜರ್ (ಸಿವಿಎಲ್): ರು 48,170-1740/1-49910-1990/10-69,810
ಮ್ಯಾನೇಜರ್ (ಆರ್ಕಿಟೆಕ್): ರು 48,170-1740/1-49910-1990/10-69,810
ಮ್ಯಾನೇಜರ್ (ಎಲೆಕ್ಟ್ರಿಕಲ್ ಇಂಜಿನಿಯರ್): ರು 48,170-1740/1-49910-1990/10-69,810
ಮ್ಯಾನೇಜರ್ (ಪ್ರಿಟಿಂಗ್ ಟೆಕ್ನಾಲಜಿಸ್ಟ್): ರು 48,170-1740/1-49910-1990/10-69,810
ಮ್ಯಾನೇಜರ್ (ಫೊರೆಕ್ಸ್): ರು 48,170-1740/1-49910-1990/10-69,810
ಸಹಾಯಕ ಮ್ಯಾನೇಜರ್ (ಸಿಎ): ರು 48,170-1740/1-49910-1990/10-69,810
ಸಹಾಯಕ ಮ್ಯಾನೇಜರ್ (ಟೆಕ್ನಿಕಲ್ ಅಧಿಕಾರಿ): ರು 36,000-1490/7-46430-1740/2-49910-1990/7-63,840

ಸಹಾಯಕ ಮ್ಯಾನೇಜರ್ (ಫೊರೆಕ್ಸ್): ರು 36,000-1490/7-46430-1740/2-49910-1990/7-63,840

ಅರ್ಜಿ ಶುಲ್ಕ:
ಸಾಮಾನ್ಯ/ ಅರ್ಥಿಕವಾಗಿ ಹಿಂದುಳಿದ ಹಾಗೂ ಹಿಂದುಳಿದ ವರ್ಗ: 850 ರು
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ದಿವ್ಯಾಂಗ: ಯಾವುದೇ ಶುಲ್ಕವಿಲ್ಲ.

ಸಂದರ್ಶನ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಆರಂಭ: 12/08/2021
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಕೊನೆ ದಿನಾಂಕ : 03/09/2021
ಅರ್ಜಿ ಪ್ರಿಂಟ್ ಮಾಡಲು ಕೊನೆ ದಿನಾಂಕ: 18/09/2021
ಆನ್‌ಲೈನ್‌ನಲ್ಲಿ ಪರೀಕ್ಷೆ ದಿನಾಂಕ(ಸಂಭಾವ್ಯ): 09/10/2021.

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ತಾಣವನ್ನು ವೀಕ್ಷಿಸಿ.
* ಅಧಿಕೃತ ವೆಬ್ ತಾಣ(www.unionbankofindia.co.in) ಕ್ಕೆ ಭೇಟಿ ನೀಡಿ
* ಕೆರಿಯರ್ ಪುಟದಲ್ಲಿ 'Recruitments' ಕ್ಲಿಕ್ ಮಾಡಿ
* 2021-22ನೇ ಸಾಲಿನ ಸ್ಪೆಷಲಿಸ್ಟ್ ಅಧಿಕಾರಿಗಳ ಹುದ್ದೆ ನೇಮಕಾತಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ
* ಆನ್ ಲೈನ್ ಅರ್ಜಿ ಓಪನ್ ಮಾಡಿ, ನೋಂದಣಿ ಮಾಡಿಕೊಂಡು ಸರಿಯಾದ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ನೀಡಿ
* ನೋಂದಣಿ ಸಂದರ್ಭದಲ್ಲಿ ತಂದೆ/ಗಂಡನ ಪೂರ್ಣ ಹೆಸರು ದಾಖಲಿಸಿ. ಅರ್ಹತೆಗೆ ಬೇಕಾದ ದಾಖಲೆಗಳನ್ನು ಒದಗಿಸಿ ಸೇವ್ ಮಾಡಿ.
* ಆನ್ ಲೈನ್ ಮೂಲಕವೇ ಪೇಮೆಂಟ್ ಮಾಡಬಹುದು. ಡೆಬಿಟ್ ಕಾರ್ಡ್/ ರುಪೇ ಕಾರ್ಡ್/ ವೀಸಾ ಕಾರ್ಡ್/ ಮಾಸ್ಟರ್ ಕಾರ್ಡ್/ ಮಾಸ್ಟ್ರೋ ಅಲ್ಲದೆ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವ್ಯಾಲೆಟ್/ಯುಪಿಐ ಮೂಲಕ ಹಣ ಪಾವತಿಸಬಹುದು.
* ಅರ್ಜಿ ಸಲ್ಲಿಸಿದ್ದಕ್ಕೆ ಹಾಗೂ ಶುಲ್ಕ ಪಾವತಿಗೆ ಇ ರಸೀತಿ ಪಡೆದುಕೊಳ್ಳಿ.
* ಜಾತಿ ಪ್ರಮಾಣ ಪತ್ರ, ಆರ್ಥಿಕ ಪ್ರಮಾಣ ಪತ್ರ, ಗುರುತಿನ ಚೀಟಿ ಮುಂತಾದ ದಾಖಲೆಗಳನ್ನು ಒದಗಿಸುವ ವಿಧಾನ ಹಾಗೂ ಮಾಹಿತಿಗಾಗಿ ಅಧಿಕೃತ ನೋಟಿಫಿಕೇಷನ್ ಮೂಲಕ ಪಡೆದುಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+