ಉಡುಪಿ; ಅಂಗನವಾಡಿ ಕೇಂದ್ರಗಳ ನೇಮಕಾತಿ, ವಿವರಗಳು
ಉಡುಪಿ ಜಿಲ್ಲೆಯ ಬ್ರಹ್ಮಾವರ, ಕುಂದಾಪುರ ಮತ್ತು ಕಾರ್ಕಳ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ.
ಉಡುಪಿ, ಮಾರ್ಚ್ 01; ಉಡುಪಿ ಜಿಲ್ಲೆಯಲ್ಲಿ ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತೆ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬ್ರಹ್ಮಾವರ, ಕುಂದಾಪುರ ಮತ್ತು ಕಾರ್ಕಳ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ನೇಮಕಾತಿ ನಡೆಯುತ್ತಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಮಾರ್ಚ್ 29ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಕಾರ್ಕಳ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಪದವು, ಕುರ್ಸುಕಟ್ಟೆ, ಕಂಬಳಗುಡ್ಡೆ, ಕಾಯಿನಾಲು, ನಂದಳಿಕೆ ಮಾವಿನಕಟ್ಟೆ, ಸಚ್ಚರಿಪೇಟೆ-2, ಮಲೆಬೆಟ್ಟು ಮತ್ತು ಮಲಾಯಿಬೆಟ್ಟು ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಸಹಾಯಕಿಯರ ಹುದ್ದೆಗೆ ಅರ್ಜಿ ಕರೆಯಲಾಗಿದೆ. ಅರ್ಹ ಮಹಿಳಾ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿಗಳನ್ನು ಹಾಕಬೇಕು.

ಅರ್ಜಿಗಳನ್ನು ಸಲ್ಲಿಸಲು ಮಾರ್ಚ್ 29 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಕಾರ್ಕಳ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08258-230992.
ಕುಂದಾಪುರದಲ್ಲಿಯೂ ನೇಮಕಾತಿ; ಕುಂದಾಪುರ ತಾಲೂಕು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಹರ್ಕೂರು ಗ್ರಾಮ (ಸಾಮಾನ್ಯ), ಜಪ್ತಿ ಗ್ರಾಮದ ಕರಿಕಲ್ ಕಟ್ಟೆ (ಸಾಮಾನ್ಯ) ಮತ್ತು ಯಡಮೊಗೆ ಗ್ರಾಮದ ಕೊಳಾಲಿ (ಎಸ್.ಟಿ) ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕರ್ಕುಂಜೆ ಗ್ರಾಮದ ಹೆರ್ಜಾಡಿ (ಸಾಮಾನ್ಯ), ತೆಕ್ಕಟ್ಟೆ ಗ್ರಾಮ (ಸಾಮಾನ್ಯ), ತೆಕ್ಕಟ್ಟೆ ಗ್ರಾಮದ ಕೊಮೆ (ಸಾಮಾನ್ಯ), ಬೇಳೂರು ಗ್ರಾಮದ ದೇವಸ್ಥಾನಬೆಟ್ಟು (ಸಾಮಾನ್ಯ), ಹೆಸ್ಕತ್ತೂರು ಗ್ರಾಮ (ಸಾಮಾನ್ಯ), ಹರ್ಕೂರು ಗ್ರಾಮ (ಸಾಮಾನ್ಯ), ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಕೊಳನ್ಕಲ್ (ಸಾಮಾನ್ಯ), ವಾರ್ಡ್-3 ರ ಕರ್ನಾಟಕ ಟೈಲ್ಸ್ (ಸಾಮಾನ್ಯ), ಮೊಳಹಳ್ಳಿ ಗ್ರಾಮದ ಮಾಸ್ತಿಕಟ್ಟೆ (ಸಾಮಾನ್ಯ), ಅಮಾಸೆಬೈಲು ಗ್ರಾಮದ ಬಳ್ಮನೆ (ಸಾಮಾನ್ಯ), ಕುಳಂಜೆ ಗ್ರಾಮದ ಭರತ್ಕಲ್ (ಸಾಮಾನ್ಯ), ಯಡ್ತರೆ ಗ್ರಾಮದ ಕೊರಾಡಿ (ಎಸ್.ಟಿ) ಹಾಗೂ ಕೊಡ್ಲಾಡಿ ಗ್ರಾಮದ ಮಾರ್ಡಿ (ಎಸ್.ಟಿ) ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಅರ್ಜಿಗಳನ್ನು ಸಲ್ಲಿಸಲು ಮಾರ್ಚ್ 29 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ತಾಲೂಕು ಪಂಚಾಯತಿ ಹತ್ತಿರ, ಶಾಸ್ತ್ರಿ ಪಾರ್ಕ್, ಕುಂದಾಪುರ ಇವರನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ 08254-230807.
ಬ್ರಹ್ಮಾವರದಲ್ಲಿ ನೇಮಕಾತಿ; ಬ್ರಹ್ಮಾವರ ತಾಲೂಕು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಹಳ್ಳಿಬೈಲು (ಸಾಮಾನ್ಯ), ಹೊಸಬೆಂಗ್ರೆ (ಸಾಮಾನ್ಯ), ಕೋಟಶಾಲೆ (ಸಾಮಾನ್ಯ), ಬೆರ್ಳ್ಳಪಾಡಿ (ಸಾಮಾನ್ಯ), ಚಿಪ್ಪಿಕಟ್ಟೆ(ಸಾಮಾನ್ಯ), ತೊಟ್ಟಂ (ಸಾಮಾನ್ಯ), ಉಪ್ಪೂರು ಸಾಲ್ಮರ (ಸಾಮಾನ್ಯ), ಹರಾವು (ಸಾಮಾನ್ಯ) ಮತ್ತು ಹೇರಂಜೆ (ಸಾಮಾನ್ಯ) ಅಂಗನವಾಡಿಗಳಲ್ಲಿ ಖಾಲಿ ಇರುವ ಸಹಾಯಕಿಯರ ಹುದ್ದೆಗೆ ಅರ್ಜಿ ಕರೆಯಲಾಗಿದೆ.
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ ವಯೋಮಿತಿ 18 ರಿಂದ 35 ವರ್ಷಗಳು. ಅಭ್ಯರ್ಥಿಗಳು ಎಸ್. ಎಸ್. ಎಲ್. ಸಿ ಉತ್ತೀರ್ಣರಾಗಿರಬೇಕು. ಅರ್ಹ ಸ್ಥಳೀಯ ಮಹಿಳಾ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು.
ಅರ್ಜಿ ಸಲ್ಲಿಸಲು ಮಾರ್ಚ್ 29 ಕೊನೆಯ ದಿನ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಹಂದಾಡಿ ಗ್ರಾಮ ಪಂಚಾಯತಿ ಹತ್ತಿರ, ಗಾಂಧಿ ಮೈದಾನ, ಬ್ರಹ್ಮಾವರ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 0820-2562244.











Click it and Unblock the Notifications