ತುಮಕೂರು ಕೋರ್ಟ್‌ನಲ್ಲಿ 49 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಬೆಂಗಳೂರು, ಜನವರಿ 23 : ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ 49 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಫೆಬ್ರವರಿ 20, 2019 ಕೊನೆಯ ದಿನವಾಗಿದೆ.
ಸ್ಟೆನೋಗ್ರಾಫರ್ 14, ಟೈಪಿಸ್ಟ್ 6, ಟೈಪಿಸ್ಟ್ ಕಾಪಿಯಸ್ಟ್ 4, ಆದೇಶ ಜಾರಿಕಾರ 16, ಜವಾನ 9 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

7ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿ ತನಕ ವಿವಿಧ ವಿದ್ಯಾರ್ಹತೆಯನ್ನು ನಿಗದಿ ಪಡಿಸಲಾಗಿದೆ. ಕನಿಷ್ಠ ವಯೋಮಿತಿ 18, ಗರಿಷ್ಠ ವಯೋಮಿತಿ 40 ವರ್ಷಗಳು.
ವೇತನ ಶ್ರೇಣಿ :
* ಆದೇಶ ಜಾರಿಕಾರರು 19950-37900
* ಟೈಪಿಸ್ಟ್ 21400-42000
* ಟೈಪಿಸ್ಟ್ ಕಾಪಿಯಸ್ಟ್ 21400-42000
* ಸ್ಟೆನೋಗ್ರಾಫರ್ 27650-52650
* ಜವಾನ 17000-28950
ಅರ್ಜಿ ಸಲ್ಲಿಸುವ ಎಸ್‌ಸಿ/ಎಸ್‌ಟಿ/ಪ್ರವರ್ಗ 1/ಅಂಗವಿಕಲ ಅಭ್ಯರ್ಥಿಗಳು 50 ರೂ., ಸಾಮಾನ್ಯ, 2ಎ/2ಬಿ/3ಎ/3ಬಿ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕವನು ಪಾವತಿಸಬೇಕು.
ಟೈಪಿಂಗ್ ಟೆಸ್ಟ್, ಮುಖ್ಯ ಪರೀಕ್ಷೆ, ಮೆರಿಟ್ ಲಿಸ್ಟ್ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ನೇಮಕಾತಿ ಆದೇಶವನ್ನು ಓದಲು ಮತ್ತು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications