ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇ 14ರಷ್ಟು ಉದ್ಯೋಗ ಕಡಿತ ಘೋಷಿಸಿದ ಡಿಜಿಟಲ್ ಪೇಮೆಂಟ್ ಕಂಪನಿ

|
Google Oneindia Kannada News

ನ್ಯೂಯಾರ್ಕ್, ನ.4: ಆಲ್ಫಾಬೆಟ್ ಮಾಲೀಕತ್ವದ ಗೂಗಲ್, ಮೈಕ್ರೋಸಾಫ್ಟ್, ವಿಪ್ರೋ, ಇನ್ಫೋಸಿಸ್, ಇಂಟೆಲ್ ಮತ್ತು ಫೇಸ್‌ಬುಕ್-ಪೋಷಕ ಮೆಟಾ ಪ್ಲಾಟ್‌ಫಾರ್ಮ್‌ಗಳಂತಹ ಟೆಕ್ ದೈತ್ಯ ಸಂಸ್ಥೆಗಳ ಬಳಿಕ ಯುಎಸ್ ಮೂಲದ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಗಳ ಕಡಿತಕ್ಕೆ ಮುಂದಾಗಿವೆ.

ಡಿಜಿಟಲ್ ಪೇಮೆಂಟ್ ಕ್ಷೇತ್ರದ ಪ್ರಮುಖ ಕಂಪನಿ ಸ್ಟ್ರೈಪ್ ಐಎನ್ ಸಿ(Stripe) ತನ್ನ ಉದ್ಯೋಗಿಗಳನ್ನು ಮನೆಗೆ ಕಳಿಸಲು ಮುಂದಾಗಿದೆ. ಸುಮಾರು 95 ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯಾಗಿರುವ ಸ್ಟ್ರೈಪ್ ಇತ್ತೀಚಿನ ಪ್ರಕಟಣೆಯಂತೆ ಶೇ 14ರಷ್ಟು ಉದ್ಯೋಗಿಗಳ ಕಡಿತ ಮಾಡಲಾಗುತ್ತದೆ.

ನವೋದ್ಯಮ ಕಂಪನಿಗಳಿಂದ ಹೆಚ್ಚಾಗಿರುವ ಪೈಪೋಟಿ ಹಾಗೂ ಯುಎಸ್ ಆರ್ಥಿಕ ಬಿಕ್ಕಟ್ಟು ಎದುರಿಸಲು ಈ ಕ್ರಮ ಅಗತ್ಯವಾಗಿದೆ ಎಂದು ಸ್ಟ್ರೈಪ್ ಹೇಳಿದೆ. ಶೇ 14ರಷ್ಟು ಉದ್ಯೋಗಿಗಳ ಕಡಿತದ ಬಳಿಕ ಸುಮಾರು 7,000 ಉದ್ಯೋಗಿಗಳನ್ನು ಹೊಂದಲಿದೆ ಎಂದು ಈ ಬಗ್ಗೆ ಎಲ್ಲಾ ಉದ್ಯೋಗಿಗಳಿಗೆ ತಿಳಿಸಲಾಗಿದೆ ಎಂದು ಸ್ಟ್ರೈಪ್ ಸ್ಥಾಪಕರಾದ ಪ್ಯಾಟ್ರಿಕ್ ಹಾಗೂ ಜಾನ್ ಕಾಲಿಸನ್ ಹೇಳಿದ್ದಾರೆ.

This US Digital payments firm Stripe to lay off 14% of workforce

ಯುಎಸ್ ಆರ್ಥಿಕ ಬಿಕ್ಕಟ್ಟು ಮುಂದುವರೆದಿದ್ದು, ತಂತ್ರಜ್ಞಾನ ಆಧಾರಿತ ಕಂಪನಿಗಳ ಷೇರುಗಳು ಈ ವರ್ಷದಲ್ಲಿ ಭಾರಿ ಕುಸಿತ ಕಂಡಿವೆ. ಪರಿಸ್ಥಿತಿ ಸುಧಾರಣೆಯಾಗದ ಕಾರಣ ವೆಂಚರ್ ಕ್ಯಾಪಿಟಲ್ ಮಾರುಕಟ್ಟೆಗೂ ಬಿಸಿ ತಟ್ಟಿದೆ. ಹೂಡಿಕೆದಾರರು ಸ್ಟಾರ್ಟ್‌ಅಪ್‌ಗಳಿಗೆ ದೊಡ್ಡ ಮೊತ್ತ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ವರದಿಗಳ ಪ್ರಕಾರ, ಸ್ಟ್ರೈಪ್ ತನ್ನ ಆಂತರಿಕ ಮೌಲ್ಯಮಾಪನವನ್ನು 28% ರಷ್ಟು ಕಡಿತಗೊಳಿಸಿದ ತಿಂಗಳುಗಳ ಬಳಿಕ ಉದ್ಯೋಗ ಕಡಿತದ ಬಗ್ಗೆ ಸಂಸ್ಥೆ ನಿರ್ಧಾರ ಕೈಗೊಂಡಿದೆ.

"ನಾವು 2022ರ ವರ್ಷಾಂತ್ಯ ಹಾಗೂ 2023ರಲ್ಲಿ ಇಂಟರ್ನೆಟ್ ಆರ್ಥಿಕತೆಯ ಸಮೀಪದ-ಅವಧಿಯ ಪ್ರಗತಿಯ ಬಗ್ಗೆ ಹೆಚ್ಚು ಆಶಾವಾದಿಗಳಾಗಿದ್ದೇವೆ ಮತ್ತು ವಿಶಾಲವಾದ ನಿಧಾನಗತಿಯ ಸಾಧ್ಯತೆ ಮತ್ತು ಪ್ರಭಾವ ಎರಡನ್ನೂ ಕಡಿಮೆ ಅಂದಾಜು ಮಾಡಿದ್ದೇವೆ" ಎಂದು ಸ್ಟ್ರೈಪ್ ಸಂಸ್ಥಾಪಕರು ಇಮೇಲ್‌ನಲ್ಲಿ ತಿಳಿಸಿದ್ದಾರೆ.

ಕೋವಿಡ್ ಕಾಲದಲ್ಲಿ ಸ್ಟ್ರೈಪ್ ಆಫರ್
ಕೊರೊನಾವೈರಸ್ ಸಾಂಕ್ರಾಮಿಕ ರೋಗವು ಜನರ ಜೀವನಶೈಲಿ ಜೊತೆಗೆ ಕೆಲಸದ ವೈಖರಿಯನ್ನು ಬದಲಾಯಿಸಿಬಿಟ್ಟಿದೆ. 2020ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ, ನ್ಯೂಯಾರ್ಕ್ ಅಥವಾ ಸಿಯಾಟಲ್‌ನಿಂದ ಹೊರಹೋಗಲು ಆಯ್ಕೆ ಮಾಡಿಕೊಳ್ಳುವ ನೌಕರರಿಗೆ ಸ್ಟ್ರೈಪ್ ಇಂಕ್ ಕಂಪನಿಯು ಒಂದು ಬಾರಿ 20,000 ಅಮೆರಿಕನ್ ಡಾಲರ್ ( ಸುಮಾರು 14.75 ಲಕ್ಷ ರೂಪಾಯಿ.) ಪಾವತಿಸುವುದಾಗಿ ಘೋಷಿಸಿತ್ತು. ಆದರೆ, ಈ ಬೋನಸ್ ಜೊತೆ ಮೂಲ ವೇತನದಲ್ಲಿ ಕಡಿತಗೊಳಿಸಲಾಗಿತ್ತು. ಕೋವಿಡ್ ಸಂಕಷ್ಟವನ್ನು ಎದುರಿಸಿದ್ದ ಕಂಪನಿ ಈಗ ಮತ್ತೆ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣದೆ ಹೆಣಗಾಡುತ್ತಿದೆ.

ಇತ್ತ ಭಾರತದಲ್ಲಿ ಇನ್ಫೋಸಿಸ್‌, ವಿಪ್ರೋ ಮತ್ತು ಎಚ್‌ಸಿಎಲ್‌ ಕಂಪೆನಿಗಳಲ್ಲಿ ಫ್ರೆಶರ್‌ಗಳ ನೇಮಕಾತಿ ಕುರಿತಂತೆ ಗೊಂದಲ ಮುಂದುವರೆದಿದೆ. ಕೆಲ ಕಂಪನಿಗಳು ಉದ್ಯೋಗ ಕಡಿತ ಘೋಷಿಸುತ್ತಿವೆ. ಅದರಲ್ಲೂ ಯುಎಸ್ ಆಧಾರಿತ ಕಂಪನಿಗಳು, ಬಹುರಾಷ್ಟ್ರೀಯ ಐಟಿ ಕಂಪನಿಗಳು ಉದ್ಯೋಗ ಕಡಿತದ ಸುಳಿವು ನೀಡಿವೆ.

English summary
Stripe Inc, the digital payments giant which was valued at $95 billion in its last funding round, is cutting its headcount by about 14% as startups trying to navigate a tough investment market rush to rein in costs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X