ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಮಕಾತಿ ಕುಸಿತ: ಮುಂಚೂಣಿಯಲ್ಲಿ ಟಿಸಿಎಸ್, ಇನ್ಫಿ, ಎಚ್‌ಸಿಎಲ್, ವಿಪ್ರೋ

|
Google Oneindia Kannada News

ಬೆಂಗಳೂರು, ಅ.14: ದೇಶದ ಪ್ರಮುಖ ಐಟಿ ಸಂಸ್ಥೆಗಳು ಸದ್ಯಕ್ಕೆ ಉತ್ಪನ್ನಕ್ಕಿಂತ ಉದ್ಯೋಗಿಗಳ ಮೇಲೆ ಹೆಚ್ಚಿನ ಗಮನ ಹರಿಸುವ ಸಂದರ್ಭ ಒದಗಿ ಬಂದಿವೆ. ಬಹುತೇಕ ಎಲ್ಲಾ ಕಂಪನಿಗಳು ಹೆಚ್ಚು ಆಟ್ರಿಷನ್ ದರ ಹೊಂದಿದ್ದು, ಹಾಲಿ ಉದ್ಯೋಗಿಗಳನ್ನು ಕಾಯ್ದುಕೊಳ್ಳಲು ಬೋನಸ್, ಸಂಬಳ ಏರಿಕೆ, ಇಂಗ್ರಿಮೆಂಟ್ ಘೋಷಣೆ ಅಸ್ತ್ರಗಳನ್ನು ಬಳಸ ತೊಡಗಿವೆ. ಫ್ರೆಶರ್ಸ್ ಆಫರ್ ಲೆಟರ್ ಗೊಂದಲ, ಮೂನ್ ಲೈಟಿಂಗ್ ಕರಿನೆರಳು ಪ್ರಮುಖ ಐಟಿ ಕಂಪನಿಗಳ ಮೇಲೆ ಬಿದ್ದಿದ್ದು, ನೇಮಕಾತಿ ಮೇಲೆ ನೇರ ಪರಿಣಾಮ ಬೀರಿವೆ.

ಎರಡನೇ ತ್ರೈಮಾಸಿಕದಲ್ಲಿ ದೇಶದ ಅತಿದೊಡ್ಡ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 20, 000 ಮಂದಿ ಫ್ರೆಶರ್ಶ್ ನೇಮಕ ಮಾಡಿಕೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 40 ಸಾವಿರ ಮಂದಿ ಟಿಸಿಎಸ್ ಸೇರಿದ್ದರು. ಕಳೆದ ವರ್ಷದ ಅಂತ್ಯ ಸುಮಾರು 1 ಲಕ್ಷ ಮಂದಿ ಟಿಸಿಎಸ್ ಆಫರ್ ಲೆಟರ್ ಪಡೆದುಕೊಂಡಿದ್ದರು.

ಸಾವಿರಾರು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಿರುವ ಇಂಟೆಲ್ಸಾವಿರಾರು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಿರುವ ಇಂಟೆಲ್

ಆದರೆ, ಈ ಬಾರಿ ಟಿಸಿಎಸ್, ಎಚ್ ಸಿಎಲ್ ಹಾಗೂ ವಿಪ್ರೋ ಸಂಸ್ಥೆಯ ನಿವ್ವಳ ನೇಮಕಾತಿ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ 57ರಷ್ಟು ಕುಸಿದಿದೆ. ಅದರಲ್ಲೂ ವಿಪ್ರೋ ಸಂಸ್ಥೆಯಲ್ಲಿ ನೇಮಕಾತಿ ಶೇ 95ರಷ್ಟು ಇಳಿಕೆಯಾಗಿದೆ.

ಸಾಮಾನ್ಯವಾಗಿ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಟಾಪ್ ನಾಲ್ಕು ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್, ಎಚ್ ಸಿಎಲ್ ಹಾಗೂ ವಿಪ್ರೋ ಸರಾಸರಿ 60, 000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ದಾಖಲೆ ಹೊಂದಿವೆ.

ನೇಮಕಾತಿ ಕುಸಿತಕ್ಕೆ ಏನು ಕಾರಣ?

ನೇಮಕಾತಿ ಕುಸಿತಕ್ಕೆ ಏನು ಕಾರಣ?

ಯುಎಸ್ ಹಾಗೂ ಯುರೋಪ್ ರಾಷ್ಟ್ರಗಳಲ್ಲಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು, ಉದ್ಯೋಗ ಕಡಿತ ಸಮಸ್ಯೆ ಭಾರತದ ಐಟಿ ಕಂಪನಿಗಳ ಮೇಲೆ ಪರಿಣಾಮ ಬೀರಿದ್ದು, ಕಳೆದ ಐದು ತ್ರೈಮಾಸಿಕ ಅವಧಿಯಲ್ಲಿ ಶೇ 57ರಷ್ಟು ಕಡಿಮೆ ನೇಮಕಾತಿ ದಾಖಲಾಗಿದೆ ಎಂದು ಬಿಸಿನೆಸ್ ಇನ್ ಸೈಡರ್ ವರದಿ ಮಾಡಿದೆ.

ಆಲ್ಫಾಬೆಟ್ ಮಾಲೀಕತ್ವದ ಗೂಗಲ್, ಮೈಕ್ರೋಸಾಫ್ಟ್, ವಿಪ್ರೋ, ಇನ್ಫೋಸಿಸ್ ಮತ್ತು ಫೇಸ್‌ಬುಕ್-ಪೋಷಕ ಮೆಟಾ ಹೀಗೆ ಉದ್ಯೋಗ ಕಡಿತಗೊಳಿಸಿದ ಸಂಸ್ಥೆಗಳ ಸಾಲಿಗೆ ಪ್ರಮುಖ ಕಂಪನಿ ಸೇರ್ಪಡೆಗೊಂಡಿದೆ. ಚಿಪ್‌ ತಯಾರಕ ಸಂಸ್ಥೆ ಇಂಟೆಲ್ ಕಾರ್ಪ್ ಹೊಸದಾಗಿ ಸೇರಿಕೊಂಡಿದೆ.

ಮೂನ್‌ಲೈಟಿಂಗ್ ನೈತಿಕ ಸಮಸ್ಯೆ

ಮೂನ್‌ಲೈಟಿಂಗ್ ನೈತಿಕ ಸಮಸ್ಯೆ

ಇತ್ತ ಭಾರತದಲ್ಲಿ ನಿಧಾನಗತಿ ನೇಮಕಾತಿಯಲ್ಲದೆ, ಫ್ರೆಶರ್‌ಗಳ ಆನ್‌ಬೋರ್ಡಿಂಗ್ ಅನ್ನು ಐಟಿ ಕಂಪನಿಗಳು ವಿಳಂಬಗೊಳಿಸುತ್ತಿವೆ ಎಂದು ವರದಿಯಾಗಿದೆ - ಇದರಲ್ಲಿ ಇನ್ಫೋಸಿಸ್, ವಿಪ್ರೋ, ಎಚ್‌ಸಿಎಲ್ ಟೆಕ್ ಮತ್ತು ಆಕ್ಸೆಂಚರ್ ಸೇರಿವೆ. ಕೆಲವು ಅಭ್ಯರ್ಥಿಗಳು ತಮ್ಮ ಆಫರ್ ಲೆಟರ್ ಸ್ವೀಕರಿಸಲು ಒಂದು ವರ್ಷದಿಂದ ಕಾಯುತ್ತಿದ್ದಾರೆ ಎಂಬ ಮಾಹಿತಿ ಇದೆ. ಮೂನ್‌ಲೈಟಿಂಗ್ ನೈತಿಕ ಸಮಸ್ಯೆಯಾಗಿದೆ. ಮೂನ್‌ಲೈಟಿಂಗ್‌ ಕೆಲಸ ಅದರ ಮೂಲ ಮೌಲ್ಯಗಳಿಗೆ ವಿರುದ್ಧವಾಗಿದೆ. ಆದರೆ ನಾವು ಸಿಬ್ಬಂದಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ವಿಪ್ರೋ ಈ ಬಗ್ಗೆ ಕ್ರಮ ಕೈಗೊಂಡರೂ, ಇನ್ಫೋಸಿಸ್ ಹಾಗೂ ಇತರೆ ಕಂಪನಿಗಳಂತೆ ಎಚ್ಚರಿಕೆ ನಡೆ ಇಡುತ್ತಿದೆ.

ಆಟ್ರಿಷನ್ ದರ ಏರಿಕೆ

ಆಟ್ರಿಷನ್ ದರ ಏರಿಕೆ

ನೇಮಕಾತಿಯ ವೇಗದಲ್ಲಿ ತೀವ್ರ ಕುಸಿತದ ನಡುವೆ ಆಟ್ರಿಷನ್ ದರಗಳು ಹೆಚ್ಚುತ್ತಲೇ ಇವೆ. ಟಿಸಿಎಸ್ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದ್ದರೆ ವಿಪ್ರೋ ಸುಧಾರಣೆ ಕಾಣುತ್ತಿದೆ, ಎಚ್ ಸಿಎಲ್ ಆಟ್ರಿಷನ್ ದರ ಇನ್ನೂ ದೊಡ್ಡ ಜಂಪ್ ತೆಗೆದುಕೊಂಡಿಲ್ಲ ಎಂಬುದೇ ಸಮಾಧಾನ, ಇನ್ಫೋಸಿಸ್ ಯಾವಾಗಲೂ ಆಟ್ರಿಷನ್ ದರ ಏರಿಕೆ ಸಮಸ್ಯೆ ಎದುರಿಸುತ್ತಲೇ ಇದೆ. ಅ.13ರಂದು ತ್ರೈಮಾಸಿಕ ವರದಿ ಪ್ರಕಟಿಸಿದ್ದು, ಆಟ್ರಿಷನ್ ದರ ಶೇ 1.3ರಷ್ಟು ಇಳಿಕೆಯಾದರೂ ಶೇ 27.1ರಷ್ಟಿದ್ದು, ಪ್ರಮುಖ ಐಟಿ ಕಂಪನಿಗಳ ಪೈಕಿ ಅತಿ ಹೆಚ್ಚಿನ ದರ ಹೊಂದಿದೆ.

ಹೊಸ ನೇಮಕಾತಿ

ಹೊಸ ನೇಮಕಾತಿ

ಟಿಸಿಎಸ್ ಕಳೆದ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಸೇರ್ಪಡೆ 9,840 ಉದ್ಯೋಗಿಗಳಾಗಿದ್ದು, ಅದರ ಮುಖ್ಯಸ್ಥರ ಸಂಖ್ಯೆಯನ್ನು 6,16,171 ಕ್ಕೆ ತೆಗೆದುಕೊಂಡಿದೆ. ಕಳೆದ ತ್ರೈಮಾಸಿಕದಿಂದ ಇದು ಕುಸಿತವಾಗಿದ್ದು, ಕಂಪನಿಯು 14,136 ನಿವ್ವಳ ಸೇರ್ಪಡೆಯನ್ನು ಹೊಂದಿತ್ತು. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ, ಟಿಸಿಎಸ್ ನಿವ್ವಳ ಸೇರ್ಪಡೆ 19,690 ಉದ್ಯೋಗಿಗಳಾಗಿತ್ತು. ಟಿಸಿಎಸ್ FY22 ರ ಕೊನೆಯಲ್ಲಿ FY23 ಗಾಗಿ 40,000 ಹೊಸ ನೇಮಕಾತಿ ಗುರಿಯನ್ನು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ, ಈ ಪ್ರಮಾಣದಲ್ಲಿ ನೇಮಕಾತಿ ಕಷ್ಟಸಾಧ್ಯವಾಗಲಿದೆ.

40,000 ಫ್ರೆಶರ್‌ ನೇಮಕ

40,000 ಫ್ರೆಶರ್‌ ನೇಮಕ

ಇನ್ಫೋಸಿಸ್‌ ಕಂಪನಿಯು 2ನೇ ತ್ರೈಮಾಸಿಕದಲ್ಲಿ ಕಡಿಮೆ ಸಂಖ್ಯೆಯ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ, ಈ ತ್ರೈಮಾಸಿಕದಲ್ಲಿ 10,032 ಮಂದಿ ಸೇರ್ಪಡೆಗೊಂಡಿದ್ದಾರೆ. ಈ ಹಿಂದಿನ ತ್ರೈಮಾಸಿಕದಲ್ಲಿ 21,171 ಮಂದಿ ಸೇರ್ಪಡೆಯಾಗಿದ್ದರು., ಇದು ನೇಮಕಾತಿಯಲ್ಲಿ 52.6 ಶೇಕಡಾ ತ್ರೈಮಾಸಿಕ ಕುಸಿತವನ್ನು ಸೂಚಿಸುತ್ತದೆ. ಇನ್ಫೋಸಿಸ್‌ನಲ್ಲಿ ಒಟ್ಟು ಸಿಬ್ಬಂದಿ ಸಂಖ್ಯೆ 3,45,218 ರಷ್ಟಿದೆ. ಈ ಕ್ಯಾಲೆಂಡರ್ ವರ್ಷದ ಮೊದಲ ಆರು ತಿಂಗಳಲ್ಲಿ ಕಂಪನಿಯು 40,000 ಫ್ರೆಶರ್‌ಗಳನ್ನು ನೇಮಿಸಿಕೊಂಡಿದೆ.

ಟೆಕ್ ದೈತ್ಯ ಸಂಸ್ಥೆಗಳ ಈ ಕಂಪನಿಯಿಂದ ಉದ್ಯೋಗಿಗಳ ಕಡಿತ ಘೋಷಣೆ

ವಿಪ್ರೋ: Q2 FY23 ರಲ್ಲಿ ಕಂಪನಿಯು ಕೇವಲ 605 ಹೊಸ ಉದ್ಯೋಗಿಗಳನ್ನು ತನ್ನ ರೋಸ್ಟರ್‌ಗೆ ಸೇರಿಸಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವಿಪ್ರೋದ ಅಟ್ರಿಷನ್ ದರವು 23% ರಷ್ಟಿದೆ, ಪ್ರತಿ ತ್ರೈಮಾಸಿಕದಲ್ಲಿ ಸ್ವಲ್ಪಮಟ್ಟಿಗೆ ಸುಧಾರಿಸುತ್ತಿದೆ. ಸನ್ನಿವೇಶಕ್ಕೆ ಸಂಬಂಧಿಸಿದಂತೆ, ಜೂನ್ ತ್ರೈಮಾಸಿಕದಲ್ಲಿ 23.3% ಮತ್ತು ಮಾರ್ಚ್ ತ್ರೈಮಾಸಿಕದಲ್ಲಿ 23.8% ರಷ್ಟಿತ್ತು.

English summary
IT major Tata Consultancy Services onboarded 20,000 freshers had been onboarded in Q2. But TCS, HCL Tech and Wipro together hired 57% less employees in Q2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X