TCS Good News: ವಜಾಗೊಳಿಸಿದ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್ ಘೋಷಿಸಿದ ಟಿಸಿಎಸ್
TCS Good News: ಕಳೆದ ಕೆಲವು ತಿಂಗಳುಗಳಿಂದ ದೈತ್ಯ ಐಟಿ ಕಂಪನಿಗಳು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಮೆನೆಗೆ ಕಳುಹಿಸಿದ್ದವು. ಟಿಸಿಎಸ್ ಸಹ ಇದೇ ಹಾದಿ ಹಿಡಿದು ಅಚ್ಚರಿ ಮೂಡಿಸಿತ್ತು. ಇದರ ಬೆನ್ನಲ್ಲೇ ಇದೀಗ ವಜಾಗೊಳಿಸಿದ ತನ್ನ ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್‌ವೊಂದನ್ನು ಘೋಷಣೆ ಮಾಡಿದೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಟಿಸಿಎಸ್ ದೇಶದ ಅತಿದೊಡ್ಡ ಐಟಿ ಕಂಪನಿಗಳಲ್ಲಿ ಒಂದಾಗಿದೆ. ಟಿಸಿಎಸ್‌ನಲ್ಲಿ ಒಂದು ಬಾರಿ ಉದ್ಯೋಗ ಗಿಟ್ಟಿಸಿಕೊಂಡರೆ, ಸಾಕು ಸರ್ಕಾರಿ ಉದ್ಯೋಗ ಸಿಕ್ಕಂತೆ. ಆದರೆ, ಇದೀಗ ಮೊಟ್ಟ ಮೊದಲ ಬಾರಿಗೆ ಟಿಸಿಎಸ್ ದೊಡ್ಡ ಹೆಜ್ಜೆ ಇಟ್ಟಿದ್ದು, ಕಂಪನಿಯ ಮಹತ್ವದ ಬದಲಾವಣೆಗೆ ಮುಂದಾಗಿದೆ.

ಹಲವು ಐಟಿ ಕಂಪನಿಗಳಂತೆ ಟಿಸಿಎಸ್ ಕೂಡ ಮೊಟ್ಟ ಮೊದಲ ಬಾರಿಗೆ ಉದ್ಯೋಗಿಗಳ ವಜಾಗೊಳಿಸಿದೆ.
ತನ್ನ ಕಂಪನಿಯ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯ ಇಲ್ಲದ ಉದ್ಯೋಗಿಗಳನ್ನ ವಜಾಗೊಳಿಸಲು ಮುಂದಾಗಿದೆ. ಆದರೆ ಕೆಲಸ ಕಳೆದುಕೊಂಡವರು ತೊಂದರೆಗೆ ಸಿಲುಕಬಾರದು ಎನ್ನುವ ದೃಷ್ಟಿಯಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ವಜಾಗೊಳಿಸುವಿಕೆಯಿಂದ ಉದ್ಯೋಗಿಗಳು ತೊಂದರೆಗೆ ಸಿಲುಕಬಾರದು ಎನ್ನುವ ದೃಷ್ಟಿಯಿಂದ ಟಿಸಿಎಸ್ ಸೆವೆರೆನ್ಸ್ ಪ್ಯಾಕೇಜ್‌ಗಳನ್ನ ಘೋಷಣೆ ಮಾಡಿದೆ. ಈ ಪ್ಯಾಕೇಜ್‌ಗಳಿಂದ ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ತುಂಬಾ ಸಹಕಾರಿ ಆದಂತಾಗಲಿದೆ. ಅಲ್ಲದೆ, ಅವರಿಗೆ ಉದ್ಯೋಗ ಹುಡುಕಲು ಹೆಚ್ಚಿನ ಸಮಯ ಸಿಕ್ಕಂತಾಗಲಿದೆ ಎಂದು ಟಿಸಿಎಸ್ ಆದೇಶದಲ್ಲಿ ತಿಳಿಸಿದೆ.
ಜಾಗತಿಕವಾಗಿ ತನ್ನ ಉದ್ಯೋಗಿಗಳಲ್ಲಿ ಶೇಕಡಾ ಎರಡರಷ್ಟನ್ನು ವಜಾ ಮಾಡುವುದಾಗಿ ಟಿಸಿಎಸ್ ಘೋಷಣೆ ಮಾಡಿದೆ. ಮುಂದಿನ ವರ್ಷ ವಜಾಗೊಳಿಸುವಿಕೆ ಕಾರ್ಯ ಆಗಲಿದೆ. ಅಂದರೆ, ಟಿಸಿಎಸ್ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ. ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟಿಸಿಎಸ್ ತಿಳಿಸಿದೆ.
ವಜಾಗೊಳಿಸುವಿಕೆಯು ಎಲ್ಲಾ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಇದು ತಮ್ಮ ಹೊಸ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗದ ಮತ್ತು ಹಳೆಯ ಕೌಶಲ್ಯಗಳೊಂದಿಗೆ ಕೆಲಸ ಮಾಡುತ್ತಿರುವವರ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ವಿಶೇಷವಾಗಿ 15 ವರ್ಷಗಳ ಸೇವೆಯನ್ನು ಮೀರಿದ ಉದ್ಯೋಗಿಗಳ ಮೇಲೆ ಈ ಪರಿಣಾಮವು ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಇನ್ನು ಟಿಸಿಎಸ್ ಪ್ರಕಾರ, ಈ ವಜಾ ಪ್ಯಾಕೇಜ್ ಉದ್ಯೋಗಿಗಳು ತಮ್ಮ ಉದ್ಯೋಗ ಕಳೆದುಕೊಂಡ ನಂತರ ಅವರಿಗೆ ನೀಡುವ ಆರ್ಥಿಕ ಸಹಾಯ ಆಗಿದೆ.
ವಜಾಗೊಂಡ ಉದ್ಯೋಗಿಗಳಿಗೆ ಮೊದಲ ಮೂರು ತಿಂಗಳ ನೋಟಿಸ್ ಅವಧಿ ಇರುತ್ತದೆ. ಆ ನೋಟಿಸ್ ಅವಧಿಯಲ್ಲಿ ಅವರಿಗೆ ಸಂಬಳ ನೀಡಲಾಗುತ್ತದೆ. ನಂತರ, ಅವರ ಸೇವೆಯನ್ನ ಅವಲಂಬಿಸಿ, ಅವರಿಗೆ 6 ತಿಂಗಳಿಂದ ಎರಡು ವರ್ಷಗಳವರೆಗೆ ಮುಂಚಿತವಾಗಿ ಸಂಬಳ ನೀಡಲಾಗುತ್ತದೆ. ಆದರೂ ಒಬ್ಬ ಉದ್ಯೋಗಿ 8 ತಿಂಗಳ ಕಾಲ ಯಾವುದೇ ಕೆಲಸ ಇಲ್ಲದೆ ಖಾಲಿಯಿದ್ದರೆ, ಅಂತವರಿಗೆ ಯಾವುದೇ ಪ್ರಯೋಜನ ಸಿಗುವುದಿಲ್ಲ. ಆತ ಮೂರು ತಿಂಗಳ ನೋಟಿಸ್ ಅವಧಿಯಲ್ಲಿ ಮಾತ್ರ ಸಂಬಳ ಪಡೆಯುತ್ತಾನೆ ಎಂದು ತಿಳಿಸಿದೆ. ಸಾಮಾನ್ಯವಾಗಿ ಟಿಸಿಎಸ್ ತೆಗೆದುಕೊಂಡ ಈ ನಿರ್ಧಾರದಿಂದ ಕೆಲಸ ಕಳೆದುಕೊಂಡವರಿಗೆ ತುಂಬಾ ಅನುಕೂಲ ಆದಂತಾಗಲಿದೆ. ಜೊತೆಗೆ ಹೊಸ ಕೆಸಲ ಹುಡುಕಿಕೊಳ್ಳಲು ಕೂಡ ಸಮಯ ಉಳಿದಂತಾಗಲಿದೆ.












Click it and Unblock the Notifications