TCIL Recruitment 2024: ಕೇಂದ್ರ ಸರ್ಕಾರಿ ಬಂಪರ್ ಉದ್ಯೋಗ, ₹2.80 ಲಕ್ಷ ವೇತನ, ನೇಮಕಾತಿ ವಿವರ
ಬೆಂಗಳೂರು, ಫೆಬ್ರವರಿ 05: ಟೆಲಿಕಮ್ಯುನಿಕೇಶನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ (TCIL) ಸಂಸ್ಥೆಯು ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರದ ಹುದ್ದೆ ಸೇರಬಯಸುವವರು ಈ ಅವಕಾಶ ಸದುಪಯೋಗ ಮಾಡಿಕೊಳ್ಳಬಹುದು.
ಟೆಲಿಕಮ್ಯುನಿಕೇಶನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ (TCIL) ದಲ್ಲಿ ಒಟ್ಟು 11 ಚೀಫ್ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಆಸಕ್ತರು ಫೆಬ್ರವರಿ 20ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಹಾಗೆಂದು ಕೊನೆಯ ದಿನದವರೆಗೆ ಕಾಯದೇ ಈ ಕೂಡಲೇ ಆಫ್ಲೈನ್/ ಪೋಸ್ಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದೆ.

ಅರ್ಜಿ ಸಲ್ಲಿಸುವ ಮೊದಲು ನೀವು ಶೈಕ್ಷಣಿಕ ಅರ್ಹತೆ ಏನು, ಅರ್ಜಿ ಸಲ್ಲಿಕೆ ವಿಳಾಸ ಸೇರಿದಂತೆ ಮಹತ್ವದ ಮಾಹಿತಿ ಇಲ್ಲಿ ಗಮನಿಸಬಹುದು.
ನೇಮಕಾತಿ ಪ್ರಕ್ರಿಯೆ ಮಾಹಿತಿ
ಸಂಸ್ಥೆ ಹೆಸರು: ಟೆಲಿಕಮ್ಯುನಿಕೇಶನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ (TCIL)
ಹುದ್ದೆ ಹೆಸರು: ಚೀಫ್ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್
ಖಾಲಿ ಹುದ್ದೆ: 11
ವೇತನ: ಮಾಸಿಕ ಗರಿಷ್ಠ 2.80 ಲಕ್ಷ ರೂಪಾಯಿ
ಅರ್ಜಿ ಸಲ್ಲಿಕೆ ಕೊನೆ ದಿನ: ಫೆಬ್ರವರಿ 20
ವಿದ್ಯಾರ್ಹತೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿ.ಎಸ್ಸಿ, ಬಿಇ/ಬಿ.ಟೆಕ್, ಎಂ.ಟೆಕ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್/ಐಟಿ/ಕಂಪ್ಯೂಟರ್ ಸೈನ್ಸ್/ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಎಂಸಿಎ ಪೂರ್ಣಗೊಳಿಸಿರಬೇಕು ಎಂದು ಕಂಪನಿ ತಿಳಿಸಿದೆ.

ವಯಸ್ಸಿನ ಮಿತಿ ಮಾಹಿತಿ
ಟೆಲಿಕಮ್ಯುನಿಕೇಶನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 1ಕ್ಕೆ ಸರಿಯಾಗಿ ಗರಿಷ್ಠ 61 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಸಿಗಲಿದೆ ಅಂತಲೂ ತಿಳಿಸಲಾಗಿದೆ.
ಮಾಸಿಕ ವೇತನ ಎಷ್ಟು?
ಚೀಫ್ ಜನರಲ್ ಮ್ಯಾನೇಜರ್/ ಜನರಲ್ ಮ್ಯಾನೇಜರ್/ ಜಾಯಿಂಟ್ ಜನರಲ್ ಮ್ಯಾನೇಜರ್/ ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗೆ ಆಯ್ಕೆ ಆಗುವವರಿಗೆ ಮಾಸಿಕ ₹ 80,000-2,80,000 ಹಾಗೂ ಮಾಸಿಕ ₹ 1,00,000-2,80,000 ವೇತನ ಸಿಗಲಿದೆ.
ಆಯ್ಕೆ ಪ್ರಕ್ರಿಯೆ?
ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳನ್ನು ಕಂಪನಿ ಆಡಳಿತ ಮಂಡಳಿಯು ಸಂದರ್ಶನದ ಮೂಲಕ ನೇರವಾಗಿ ಆಯ್ಕೆ ಮಾಡಿಕೊಳ್ಳಲಿದೆ. ಅಭ್ಯರ್ಥಿಗಳು ಈ ಕೂಡಲೇ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ನಿಗದಿ ದಿನಾಂಕದೊಳಗೆ ಈ ವಿಳಾಸಕ್ಕೆ ' ಮುಖ್ಯ ಜನರಲ್ ಮ್ಯಾನೇಜರ್ (HR), ಟೆಲಿಕಮ್ಯುನಿಕೇಷನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್, TCIL ಭವನ
ಗ್ರೇಟರ್ ಕೈಲಾಶ್-I, ನವದೆಹಲಿ-110048' ಇಲ್ಲಿಗೆ ಕಳುಹಿಸಿ.
ನೆನಪಿಡಬೇಕಾದ ದಿನಗಳು
ಅರ್ಜಿ ಸಲ್ಲಿಕೆ ಆರಂಭ ದಿನ: ಜನವರಿ 30
ಅರ್ಜಿ ಸಲ್ಲಿಕೆಯ ಕಡೆಯ ದಿನಾಂಕ: ಫೆ. 20












Click it and Unblock the Notifications