Starbucks: ಉದ್ಯೋಗ ಕಡಿತ ಘೋಷಣೆ ಮಾಡಿದ ಸ್ಟಾರ್ ಬಕ್ಸ್

ಬೆಂಗಳೂರು, ಫೆಬ್ರವರಿ 25: ಅಂತರಾಷ್ಟ್ರೀಯ ಮಟ್ಟದ ಕಾಫಿ ಉದ್ಯಮದ ದೈತ್ಯ ಸಂಸ್ಥೆ ಸ್ಟಾರ್ ಬಕ್ಸ್ ಉದ್ಯೋಗ ಕಡಿತ ಘೋಷಣೆ ಮಾಡಿದೆ. ಹಲವಾರು ಕಂಪನಿಗಳು ಈಗಾಗಲೇ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿದ್ದು, ಈ ಸಾಲಿಗೆ ಈಗ ಸ್ಟಾರ್ ಬಕ್ಸ್ ಸೇರಿದೆ. ಫೆಬ್ರವರಿ 25ರಿಂದಲೇ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದೆ.

ಸ್ಟಾರ್ ಬಕ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬ್ರಿಯಾನ್ ನಿಕೋಲ್ ಕಂಪನಿಯ ಆಡಳಿತದಲ್ಲಿ ಹಲವು ಬದಲಾವಣೆಗಳನ್ನು ತರಲು 1,100 ಕಾರ್ಪೊರೇಟ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಿದ್ದಾರೆ. ಈ ಕುರಿತು ಅವರು ಸೋಮವಾರ ಉದ್ಯೋಗಿಗಳಿಗೆ ಬರೆದಿರುವ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

Starbucks To Layoff 1 100 Corporate Employees

ಮಂಗಳವಾರ ಮಧ್ಯಾಹ್ನದಿಂದಲೇ ಉದ್ಯೋಗಿಗಳ ವಜಾ ಪ್ರಕ್ರಿಯೆ ಆರಂಭವಾಗಲಿದೆ. ಯಾವ ಉದ್ಯೋಗ ಕಡಿತ ಮಾಡಲಾಗುತ್ತದೆ ಎಂದು ಉದ್ಯೋಗಿಗಳಿಗೆ ತಿಳಿಯಲಿದೆ. ಕಂಪನಿ ತನ್ನ ಕಾರ್ಯಾಚರಣೆಯನ್ನು ಇನ್ನಷ್ಟು ಉತ್ತಮಗೊಳಿಸಲು ಹಲವು ಹುದ್ದೆಗಳನ್ನು ರದ್ದುಗೊಳಿಸುತ್ತಿದೆ ಎಂದು ಹೇಳಿದ್ದಾರೆ.

16,000 ಉದ್ಯೋಗಿಗಳು: ತಮ್ಮ ಪತ್ರದಲ್ಲಿ ಬ್ರಿಯಾನ್ ನಿಕೋಲ್ ನಮ್ಮ ಗುರಿ ಹೆಚ್ಚು ಪಾರದರ್ಶಕತೆ ತರುವುದು, ಜವಾಬ್ದಾರಿ ಹೆಚ್ಚಿಸುವುದು, ಗೊಂದಲ ಕಡಿಮೆ ಮಾಡುವುದು, ಉತ್ತಮ ಸೇವೆ ನೀಡುವುದು ಎಂದು ತಿಳಿಸಿದ್ದಾರೆ. ವಿಶ್ವದಾದ್ಯಂತ ಸ್ಟಾರ್ ಬಕ್ಸ್ ಸುಮಾರು 16,000 ಕಾರ್ಪೊರೇಟ್ ಉದ್ಯೋಗಿಗಳನ್ನು ಹೊಂದಿದೆ. ಈ ಉದ್ಯೋಗ ಕಡಿತ ಕೆಲವು ಹುದ್ದೆಗಳಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

2025ರ ಜನವರಿಯಲ್ಲಿಯೇ ಬ್ರಿಯಾನ್ ನಿಕೋಲ್ ಮಾರ್ಚ್‌ನಲ್ಲಿ ಉದ್ಯೋಗ ಕಡಿತಗೊಳಿಸಲಾಗುತ್ತದೆ ಎಂದು ಹೇಳಿದ್ದರು. ಯಾವ ಯಾವ ಹುದ್ದೆಗಳನ್ನು ಕಡಿತಗೊಳಿಸಬೇಕು ಎಂದು ಚರ್ಚೆಗಳು ನಡೆದಿವೆ. ಈ ಕುರಿತು ಉದ್ಯೋಗಿಗಳಿಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದ್ದರು.

"ನಮ್ಮ ಉದ್ಯೋಗಿಗಳ ಸಂಖ್ಯೆ, ಹುದ್ದೆಗಳ ಕಾರಣದಿಂದ ಕೆಲವು ಕಾರ್ಯಾಚರಣೆಗಳು ವಿಳಂಬವಾಗುತ್ತಿದೆ. ಮ್ಯಾನೇಜರ್‌ಗಳು, ಚಿಕ್ಕ ಚಿಕ್ಕ ತಂಡಗಳು ಉತ್ತಮವಾಗಿ ಸಂವಹನ ನಡೆಸುತ್ತಾ ಕೆಲಸ ಮಾಡಲು ಸಾಧ್ಯ" ಎಂದು ಬ್ರಿಯಾನ್ ನಿಕೋಲ್ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ಬ್ರಿಯಾನ್ ನಿಕೋಲ್ ಕಳೆದ ವರ್ಷ ಸೇಲ್ಸ್ ವಿಭಾಗದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದ್ದರು. ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸಲು ನಾವು ಕೆಲವು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದರು. ನಮ್ಮ ಸ್ಟೋರ್‌ಗಳನ್ನು ನಾವು ಪುನರ್ ವ್ಯಾಖ್ಯಾನಿಸಬೇಕು, ಜನರನ್ನು ಹೆಚ್ಚಾಗಿ ಸೆಳೆಯಬೇಕು ಎಂದು ಸೂಚಿಸಿದ್ದರು.

ವಿವಿಧ ಮಾಧ್ಯಮಗಳ ವರದಿ ಪ್ರಕಾರ ಸ್ಟಾರ್ ಬಕ್ಸ್ 1,100 ಕಾರ್ಪೊರೇಟ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಿದೆ. ಇವರು ವಿವಿಧ ವಿಭಾಗದಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ಹುದ್ದೆಗಳನ್ನು ಬೇರೆ ಹುದ್ದೆಯ ಜೊತೆ ಸೇರಿಸಲಾಗುತ್ತಿದೆ, ಕೆಲವು ಹುದ್ದೆಗಳನ್ನು ರದ್ದುಗೊಳಿಸಲಾಗುತ್ತಿದೆ.

ಬ್ರಿಯಾನ್ ನಿಕೋಲ್ ಅಧಿಕಾರವಹಿಸಿಕೊಂಡ ಬಳಿಕ ಸ್ಟಾರ್ ಬಕ್ಸ್ ಮೆನುವಿನಲ್ಲಿ ಬದಲಾವಣೆ ಮಾಡಿದ್ದರು. ಸ್ಟೋರ್‌ನಲ್ಲಿ ಆರ್ಡರ್‌ ಮಾಡುವ ವಿಧಾನದಲ್ಲಿಯೂ ಹಲವು ಬದಲಾವಣೆ ತಂದಿದ್ದರು. ಈಗ ಕಾರ್ಯಾಚರಣೆಯಲ್ಲಿ ಬದಲಾವಣೆ ತರಲು ಉದ್ಯೋಗ ಕಡಿತ ಘೋಷಣೆ ಮಾಡಿದ್ದಾರೆ.

2025ರಲ್ಲಿ ಹಲವು ದೈತ್ಯ ಕಂಪನಿಗಳು ಉದ್ಯೋಗ ಕಡಿತದ ಘೋಷಣೆ ಮಾಡಿವೆ. ಫೇಸ್‌ ಬುಕ್‌, ಇನ್ಸ್ಟಾಗ್ರಾಮ್‌ ಮತ್ತು ವಾಟ್ಸಪ್‌ನ ಮಾತೃ ಸಂಸ್ಥೆ ಮೆಟಾ ಕೆಲವು ದಿನಗಳ ಹಿಂದೆ 3 ಸಾವಿರಕ್ಕೂ ಅಧಿಕ ಉದ್ಯೋಗ ಕಡಿತದ ಘೋಷಣೆ ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+