Sports Authority of India Recruitment 2023: ವಿವಿಧ ಹುದ್ದೆಗಳು ಖಾಲಿ ಇವೆ, ₹80,250 ಸಂಬಳ, ವಿವರ
ಬೆಂಗಳೂರು, ಅಕ್ಟೋಬರ್ 02: ಭಾರತೀಯ ಕ್ರೀಡಾ ಪ್ರಾಧಿಕಾರವು (SAI) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆಂಭಿಸಿದ್ದು, ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶದ ಲಾಭ ಪಡೆದುಕೊಳ್ಳಬೇಕಾದರೆ ಕೂಡಲೇ ಅರ್ಜಿ ಸಲ್ಲಿಸಬೇಕು.
ಭಾರತೀಯ ಕ್ರೀಡಾ ಪ್ರಾಧಿಕಾರವು (SAI) ಒಟ್ಟು 15 ಜೂನಿಯರ್ ಕನ್ಸಲ್ಟೆಂಟ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಅಕ್ಟೋಬರ್ 11ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆ ಆಗುವವರಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೂ ಮೊದಲು ಅರ್ಜಿ ಸಲ್ಲಿಕೆ ವಿಧಾನ, ಶೈಕ್ಷಣಿಕ ಅರ್ಹತೆ ಇನ್ನಿತರ ನೇಮಕಾತಿ ಪೂರ್ಣ ಪ್ರಕ್ರಿಯೆ ತಿಳಿದುಕೊಳ್ಳಿ.
ನೇಮಕಾತಿ ಪೂರ್ಣ ಮಾಹಿತಿ
ಸಂಸ್ಥೆ ಹೆಸರು: ಭಾರತೀಯ ಕ್ರೀಡಾ ಪ್ರಾಧಿಕಾರ
ಹುದ್ದೆಗಳ ಹೆಸರು: ಜೂನಿಯರ್ ಕನ್ಸಲ್ಟೆಂಟ್
ಖಾಲಿ ಹುದ್ದೆ ಸಂಖ್ಯೆ: 15
ಮಾಸಿಕ ವೇತನ: 80,250 ರೂಪಾಯಿ
ಪೋಸ್ಟಿಂಗ್: ಬೆಂಗಳೂರು
ಅರ್ಜಿ ಸಲ್ಲಿಕೆ ಕಡೆ ದಿನ: ಇದೇ ಅಕ್ಟೋಬರ್ 11
ಹುದ್ದೆಗಳ ಪೂರ್ಣ ಮಾಹಿತಿ
ಜೂನಿಯರ್ ಕನ್ಸಲ್ಟೆಂಟ್ (ಅಕೌಂಟೆಂಟ್ ಮತ್ತು ಫೈನಾನ್ಸ್): 02
ಜೂನಿಯರ್ ಕನ್ಸಲ್ಟೆಂಟ್ (ಲೀಗಲ್): 02
ಜೂನಿಯರ್ ಕನ್ಸಲ್ಟೆಂಟ್ (ಜನರಲ್): 05
ಜೂನಿಯರ್ ಕನ್ಸಲ್ಟೆಂಟ್ (ಇನ್ಫ್ರಾಸ್ಟ್ರಕ್ಚರ್): 05
ಜೂನಿಯರ್ ಕನ್ಸಲ್ಟೆಂಟ್ (ಪರ್ಫಾರ್ಮೆನ್ಸ್ ಮಾನಿಟರಿಂಗ್): 01

ಶೈಕ್ಷಣಿಕ ಅರ್ಹತೆ ಏನು?
ಖಾಲಿ ಇರುವ ಒಟ್ಟು ಹುದ್ದೆಗಳ ಅನುಸಾರ ಸಿಎ ಇಲ್ಲವೇ ICWA, LLB, ಪದವಿ, ಬಿಇ/ಬಿ.ಟೆಕ್, ಎಂಬಿಬಿಎಸ್. ಸ್ನಾತಕೋತ್ತರ ಪದವಿ, ಸಿವಿಲ್ ಎಂಜಿನಿಯರಿಂಗ್ನಲ್ಲಿ ಬಿಇ/ಬಿ.ಟೆಕ್, CA, ICMA, ಅಕೌಂಟ್ಸ್/ ಫೈನಾನ್ಸ್/ ಕಾಮರ್ಸ್ನಲ್ಲಿ ಸ್ನಾತಕೋತ್ತರ ಪದವಿ, ಫೈನಾನ್ಶಿಯಲ್ ಮ್ಯಾನೇಜ್ಮೆಂಟ್/ ಅಕೌಂಟಿಂಗ್ನಲ್ಲಿ ಸ್ನಾತಕೋತ್ತರ ಪದವಿ ಡಿಪ್ಲೊಮಾ ಮತ್ತು
ಕಾನೂನು ವಿಭಾಗದಲ್ಲಿ ಪದವಿ, ಎಲ್‌ಎಲ್‌ಬಿ ಪೂರ್ಣಗೊಳಿಸಿರಬೇಕು.
ವಯೋಮಿತಿ-ಪೋಸ್ಟಿಂಗ್ ವಿವರ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 45 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ. ಆಯ್ಕೆ ಆಗುವವರಿಗೆ ಗಾಂಧಿನಗರ, ಬೆಂಗಳೂರು, ಕೊಲ್ಕತ್ತಾ ಮತ್ತು ಇಂಫಾಲ್ ನಲ್ಲಿ ಪೊಸ್ಟಿಂಗ್ ನೀಡಲಾಗುವುದು. ಅವರಿಗೆ ಮಾಸಿಕ ವೇತನ ₹80,250 ನೀಡಲಾಗುವುದು. ಯಾರು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ ಎಂದು ತಿಳಿಸಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ದಿನಾಂಕ ಆರಂಭ: ಸೆಪ್ಟಂಬರ್ 27
ಅರ್ಜಿ ಸಲ್ಲಿಕೆ ಕೊನೆ ದಿನ: ಅಕ್ಟೋಬರ್ 11
ಹೆಚ್ಚಿನ ಮಾಹಿತಿಗೆ ನೇಮಕಾತಿ ಕುರಿತಾದ ಯಾವುದೇ ಪ್ರಶ್ನೆಗಳಿದ್ದಲ್ಲಿ [email protected] ಗೆ ಮೇಲ್ ಮಾಡಬಹುದು.












Click it and Unblock the Notifications